ನಮ್ಮಲ್ಲಿನ ಫ್ಯಾಶನ್ ಹುಡುಕುವುದು ಹೇಗೆ
ಹಾಯ್ ಗೆಳೆಯರೇ ದೇವರು ನಮ್ಮ ಜನ್ಮ ಸೃಷ್ಟಿ ಮಾಡುವಾಗಲೇ ತನ್ನದೇ ಆದ ಒಂದು ಕಲೆ, ಬುದ್ಧಿವಂತಿಕೆಯನ್ನು ಕೊಟ್ಟಿರುತ್ತಾನೆ. ಆದರೆ ತುಂಬಾ ಜನರು ಅದನ್ನು ಗುರುತಿಸಿ ಉಪಯೋಗ ಪಡೆಯಲು ಆಸಕ್ತಿ ಇಲ್ಲದವರಾಗಿರುತ್ತಾರೆ. ಬುದ್ಧಿವಂತಿಕೆ ಎಂಬುದು ದೇವರು ನಮಗೆ ಕೊಟ್ಟ ಒಂದು ಅಮೂಲ್ಯವಾದ ಉಡುಗೊರೆ, ಆ ಉಡುಗೊರೆ ನಮಗೆ ಉಪಯೋಗವಾದಲ್ಲಿ ಅದ್ಭುತಗಳೇ ಸೃಷ್ಟಿಯಾಗುತ್ತವೆ.ಅವುಗಳನ್ನು ನಾವು ಪ್ಯಾಶನ್ಎಂದು ಹೇಳುತ್ತೇವೆ. ಫ್ಯಾಶನ್ ಎನ್ನುವುದು ನಾವು ಮಾಡುವ ಕೆಲಸದಿಂದ ಶುರುವಾಗಿ ನಮ್ಮ ಆಟ, ತಿಂಡಿ ಮುಂತಾದ ಕಡೆಯಲ್ಲೂ ಇರುತ್ತದೆ.
ನಾವು ಯಾವ ಕೆಲಸವನ್ನೇ ಮಾಡಲಿ ಕೆಲಸದಲ್ಲಿ ಉತ್ಸಾಹ ಹಾಗೂ ಬುದ್ಧಿವಂತಿಕೆ ಬಹು ಮುಖ್ಯ ಕೆಲವೊಮ್ಮೆ ಅದನ್ನು ಬ್ರಹ್ಮ ಬರೆದ ಹಣೆಬರಹ ಎನ್ನುತ್ತೇವೆ. ಇಲ್ಲವೆಂದಲ್ಲಿ ಶ್ರಮಕ್ಕೆ ಸಿಕ್ಕ ಪಲ ಎಂದು ತಿಳಿಯುವುದು ಉಂಟು, ಒಬ್ಬ ವ್ಯಕ್ತಿ ಯಾವುದೇ ಕೆಲಸವನ್ನು ಎಷ್ಟು ಸಮಯವಾಗಲಿ ಮಾಡುವಾಗ ಉತ್ಸಾಹ ಹಾಗೂ ಬುದ್ಧಿವಂತಿಕೆ ಕಡಿಮೆಯಾಗದೆ ನಿರಂತರವಾಗಿ ಕೆಲಸವನ್ನು ಖುಷಿಯಿಂದ ಮಾಡುತ್ತಾನೋ ಅವನ ಅಂತ ಕೆಲಸವನ್ನು ತನ್ನ ಫ್ಯಾಷನ್ ಎಂದು ತಿಳಿಯಬಹುದು.
ಈ ಪ್ಯಾಶನ್ ಕೆಲವೊಮ್ಮೆ ಜೀವನದಿ ಕಷ್ಟಗಳಿಂದ ಕೆಲಸ ಮಾಡುತ್ತಾ ಅದು ಅವನ ಜೀವನ ಬದಲಾಯಿಸಿ ಫ್ಯಾಶನ್ ಆಗಿರಬಹುದು ಅಥವಾ ಅವನು ಶ್ರಮದಿಂದ ದುಡಿದು ಆ ಉದ್ಯೋಗವನ್ನು ಫ್ಯಾಶನ್ ಮಾಡಿಕೊಂಡಿರಬಹುದು.
ನಾವುಗಳು ಚಿಕ್ಕವರಿದ್ದಾಗ ನಮ್ಮ ಶಾಲೆಯಲ್ಲಿ ಅಥವಾ ಶಿಕ್ಷಕರು ಹಾಗೂ ಮನೆಯವರು ಹುಡುಗ ತುಂಬಾ ಟ್ಯಾಲೆಂಟ್ ಇದ್ದಾನೆ ಎಂದು ಹೇಳುತ್ತಾರೆ. ಆದರೆ ಸಾಕಷ್ಟು ಜನರುಗಳಿಗೆ ತಮ್ಮ ಟ್ಯಾಲೆಂಟ್ ಅನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ. ನಮ್ಮಲ್ಲಿ ಯಾವ ಟ್ಯಾಲೆಂಟ್ ಇದೆ ಎಂದು ತಿಳಿಯದವರು ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂದು ಗುರುತಿಸಿಕೊಳ್ಳಿ ಅದನ್ನು ಪಟ್ಟಿ ಮಾಡಿ ಆ ಕೆಲಸದಲ್ಲಿ ನೀವು ಕಾರ್ಯಮಗ್ನರಾಗುವುದರಿಂದ ನೀವು ನಿಮ್ಮಲ್ಲಿನ ಪ್ಯಾಶನ್ ಹುಡುಕಿಕೊಳ್ಳಬಹುದು.
ನಾವು ಕೆಲವೊಮ್ಮೆ ಕೇಳಿರುತ್ತೇವೆ ತಂದೆ ಅಥವಾ ತಾಯಿ ಗಾಯಕರಾಗಿದ್ದರೆ ಆ ಕಲೆಯು ಮಕ್ಕಳಿಗೆ ವಂಶ ಪಾರಂಪರ್ಯವಾಗಿ ಬಂದಿರುತ್ತದೆ ಎಂದು ಹೇಳುವುದು ಉಂಟು ಹೀಗೆ ಮಕ್ಕಳಿಗೆ ಬೇರೆ ಬೇರೆ ಕೆಲಸಗಳಲ್ಲಿ ಪ್ಯಾಶನ್ ಇರಬಹುದು. ನಮ್ಮಲ್ಲಿನ ಟ್ಯಾಲೆಂಟ್ ಏನು ಎಂದು ತಿಳಿಯೋ ಹೊರಟರೆ ಆ ವ್ಯಕ್ತಿಯು ಮಾಡುವ ಕೆಲಸ ಅಥವಾ ಆಟಗಳು ಇನ್ನು ಬೇರೆ ವಿಷಯಗಳಲ್ಲಿ ಆಸಕ್ತಿ ಇದೆ ಎಂದು ತಿಳಿದ ಮೇಲೆ ಆ ಕೆಲಸಗಳು ಅವರಿಗೆ ಖುಷಿಕೊಡುವುದರ ಜೊತೆಗೆ ಸತತ ಕೆಲವು ಗಂಟೆಗಳ ಕೆಲಸ ಅವನಿಗೆ ಬೇಸರ ತರದೆ ಕಾರ್ಯದಲ್ಲಿ ಖುಷಿ ತಂದಿದೆ ಎಂದರೆ ಅದನ್ನು ಅವನು ತನ್ನ ಫ್ಯಾಶನ್ ಎಂದು ತಿಳಿಯಬಹುದು.
ಕೆಲವೊಮ್ಮೆ ನಾವು ಕೆಲಸ ಶುರು ಮಾಡಿರುತ್ತೇವೆ ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ ಹೊಟ್ಟೆಪಾಡಿಗೆ ಜೀವನ ಮಾಡಲು ಹಣದ ಅವಶ್ಯಕತೆಗಾಗಿ ನಮ್ಮ ಕೆಲಸ ಮಾಡಿರುತ್ತೇವೆ. ಅದು ನಮ್ಮ ವೃತ್ತಿಯಾಗಿದ್ದರು ಆ ಕೆಲಸವನ್ನು ನಮ್ಮ ಫ್ಯಾಷನ್ ಅಂತ ಹೇಳಲು ಸಾಧ್ಯವಿಲ್ಲ. ವ್ಯಕ್ತಿಯು ಕೆಲಸದಲ್ಲಿ ಪ್ಯಾಶನ್ ಇದ್ದರೆ ಉತ್ತಮ ಹೆಸರು ಮಾಡಿರುತ್ತಾನೆ, ಅವನು ಆಟಗಾರನಾಗಿರಬಹುದು ಸಿನಿಮಾ ನಟ, ನಟಿ,ಶಿಕ್ಷಕ,ಸಮಾಜ ಸೇವಕ ಹೀಗೆ ಯಾರೇ ಆಗಿರಬಹುದು ತನ್ನ ವೃತ್ತಿಯಲ್ಲಿ ಯಶಸ್ಸು ಕಾಣುತ್ತಾನೆ.
ನಮಗೆ ಮಾಡುವ ವೃತ್ತಿಯಲ್ಲಿ ಫ್ಯಾಶನ್ ಇಲ್ಲದೆ ಕೆಲಸ ಮಾಡುವುದರಿಂದ ವೃತ್ತಿಯನ್ನು ಹಣಕ್ಕಾಗಿ ಮಾಡಬೇಕಾಗುತ್ತದೆ. ನಮ್ಮ ಖುಷಿಗಾಗಿ ಅಲ್ಲ ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನ ನಿರ್ವಹಣೆ ಮಾಡಲು ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಆವೃತ್ತಿಯಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗದೆ ತಮ್ಮ ಜೀವನದಲ್ಲಿ ಬೇಸರ ಅನುಭವಿಸುತ್ತಾರೆ,ಯಾವುದೇ ವ್ಯಕ್ತಿಯಾಗಲಿ ಮೊದಲು ತನ್ನಲ್ಲಿನ ಟ್ಯಾಲೆಂಟ್ ಏನು ಎಂದು ತಿಳಿದು ಅದರಲ್ಲಿ ಶ್ರಮಪಟ್ಟು ಕೆಲಸವನ್ನು ಕರಗತ ಮಾಡಿಕೊಳ್ಳಬೇಕಾಗುತ್ತದೆ ಉದಾಹರಣೆ ನಾನೊಬ್ಬ ವಿಜ್ಞಾನಿಯಾಗಬೇಕು ಅಥವಾ ಪೋಲಿಸ್, ಲಾಯರ್,ವ್ಯವಸಾಯ ರೈತ ಅಥವಾ ಬರಹಗಾರ,ನಾಟಕಕಾರ ಹೀಗೆ ಅವನು ಇವುಗಳಿಗೆ ಬೇಕಾದ ವಿಷಯದಲ್ಲಿ ಪರಿಣಿತಿ ಪಡೆದು ಆವೃತ್ತಿಯನ್ನು ಆರಂಭಿಸುವುದರಿಂದ ಆವೃತ್ತಿಯಲ್ಲಿ ತನ್ನ ಪ್ಯಾಶನ್ ಕಾಣಬಹುದು.
ಕೆಲವೊಮ್ಮೆ ನಮ್ಮ ಫ್ಯಾಶನ್ ಗಳು ವಿಭಿನ್ನವಾಗಿಲ್ಲದಿದ್ದರೆ ಅವುಗಳು ನಮ್ಮ ಪ್ಯಾಶನ್ ಆಗಿದ್ದರು ನಮ್ಮ ಜೀವನ ನಿರ್ವಹಣೆಗೆ ದಾರಿ ತೋರಿಸಲು ಸಾಧ್ಯವಾಗದೇ ಇರಬಹುದು. ಇಂದು ನಾವು ಪೈಪೋಟಿ ಯುಗದಲ್ಲಿ ಓಡುತ್ತಿದ್ದೇವೆ ನಮ್ಮ ಫ್ಯಾಷನ್ ಗಳು ಅಥವಾ ಬುದ್ಧಿವಂತಿಕೆ ಬೇರೊಬ್ಬರ ಬಳಿ ಪೈಪೋಟಿ ಮಾಡಲು ಬೇಕಾಗಬಹುದು. ಉದಾಹರಣೆ ತೆಗೆದುಕೊಂಡರೆ ಇಂದು ಸಾಕಷ್ಟು ಯುವ ಸಾಹಿತಿಗಳು ಇದ್ದಾರೆ ಕೆಲವರು ಬರೆದ ಸಿನಿಮಾ ಸಾಹಿತ್ಯದ ಹಾಡುಗಳು ಉತ್ತಮವಾಗಿ ಜನಮನ್ನಣೆ ಪಡೆದಿರುತ್ತವೆ. ಇನ್ನು ಕೆಲವರ ಹಾಡುಗಳು ಪೈಪೋಟಿ ನೀಡಲು ವಿಫಲವಾಗಿರುತ್ತದೆ. ಇನ್ನೂ ಕೆಲವು ಸಾಹಿತಿಗಳಿಗೆ ಅವಕಾಶವೆ ಸಿಕ್ಕಿರುವುದಿಲ್ಲ, ಆದರೂ ಕೂಡ ಹಾಡು ಬರವಣಿಗೆ ಅವರ ಫ್ಯಾಷನ್ ಆಗಿರುತ್ತದೆ. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ನಮ್ಮಲ್ಲಿನ ಪ್ಯಾಶನ್ ಗಳು ಜಾಗತಿಕವಾಗಿ ಪೈಪೋಟಿ ಮಾಡಲು ಸಜ್ಜಾಗ ಬೇಕಾಗುತ್ತದೆ. ನಮ್ಮೆಲ್ಲರಲ್ಲೂ ಫ್ಯಾಶನ್ ಇರುತ್ತದೆ ಅದಕ್ಕೆ ಉತ್ತಮ ಶ್ರದ್ಧೆಯ ಕಲಿಕೆ ಅಗತ್ಯ, ಜನಜಂಗುಳಿಯ ಬದುಕಲ್ಲಿ ನಮ್ಮ ಪ್ಯಾಶನಗಳು ಕಾರ್ಯದಲ್ಲಿ ಉತ್ಸಾಹವನ್ನು ಹೆಚ್ಚಿಸುವುದರ ಜೊತೆ ಆ ಪ್ಯಾಶನ್ ಗಳು ನಮ್ಮ ಜೀವನಕ್ಕೆ ಬೇಕಾದಂತಹ ಹಣವನ್ನು ದುಡಿಯುವಂತಿದ್ದರೆ ನಮ್ಮಲ್ಲಿನ ಪ್ಯಾಶನ್ ಗಳಿಗೆ ಹೆಚ್ಚಿನ ಬೆಲೆ ಇರುತ್ತದೆ.
ಈಗ ನೀವೇ ಹೇಳಿ ನಿಮ್ಮಲ್ಲಿ ಒಂದು ಪ್ಯಾಶನ್ ಇದೆಯಾ ನಿಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದೀಯಾ ಅದರಿಂದ ನಮ್ಮ ಏಳಿಗೆಗೆ ಅನುಕೂಲವಾಗಿದೆಯಾ ????
ತಪ್ಪು ತಪ್ಪು ತಿಳಿಯಬೇಡಿ ಫ್ಯಾಶನ್ ಜೊತೆ ಫ್ಯಾಷನ್
ನಮ್ಮಲ್ಲಿ ದೇವರು ಕೊಟ್ಟಿದ್ದಾನೆ ಒಂದು ಪ್ಯಾಶನ್
ನಾವು ಹುಡುಕಿ ಮಾಡಬೇಕು ಅದಕ್ಕೆ ಟ್ಯೂಷನ್
ಕೆಲಸ ಮಾಡುವಾಗ ಆಗುವುದಿಲ್ಲ ಟೆನ್ಶನ್
ಪ್ಯಾಶನ್ ಇರುವ ವೃತ್ತಿ ನೀಡುವುದು ಪೆನ್ಷನ್
ಫ್ಯಾಶನ್ ಅಭಿವೃದ್ಧಿ ಮಾಡುವಂತಿರಬೇಕು ನಮ್ಮ ನೇಷನ್
ಆಗ ನಮ್ಮ ದೇಶವು ಮಾಡುವುದು ಪ್ರಪಂಚದಲ್ಲಿ ಸೆನ್ಸೇಶನ್.
Comments
Post a Comment