Posts

Showing posts from January, 2021

💛❤️ನಮ್ಮ ನಾಡು ಕನ್ನಡ ❤️💛

ಒಲವ ಬಿತ್ತಿ ಚಲದಿ ಬೆಳೆದ  ನಮ್ಮ ನಾಡು ಕನ್ನಡ  ಪ್ರೀತಿ ಹಂಚಿ ಮನವ ಗೆದ್ದು  ಕೂಡಿ ಬಾಳು ಸಂಗಡ  ನಾವು ಎಲ್ಲಾ ಒಂದೇ ಎಂದು  ಬಾಳುತಿಹೆವು ಒಟ್ಟಿಗೆ  ನಾಡ ಕಟ್ಟಾಲೆಂದು ಒರಟು  ಮಾಡುತಿಹೆವು ಪ್ರೀತಿ ಇಟ್ಟಿಗೆ  ಅನ್ನ ಬೆಳೆದು ಚಿನ್ನ ತೆಗೆವ  ನಮ್ಮ ನಾಡು ಕನ್ನಡ  ಅರಿಸಿನ ಕುಂಕುಮನಿಟ್ಟ  ಕನ್ನಡ ತಾಯಿ ಇಹಳು ಸಂಗಡ  ವಿದ್ಯೆ ಕಲಿಸಿ ಅನ್ನ ನೀಡಿ  ಬಾಳು ಬೇಳೂಗೋ ನಾಡಿದು  ಇತಿಹಾಸವನ್ನು ಸಾರೋ  ಚರಿತ್ರೆ ಹೇಳ್ಳೋ ನಮ್ಮ ಕನ್ನಡ ನುಡಿಯಿದು  ಮಾನವೀಯತೆಯ ಮೆರೆದು  ಪ್ರೀತಿಯಿಂದ ಕೈ ಇಡಿದು  ನಡೆಸೋ ನಾಡು ಕನ್ನಡ  ನಾಡಿಗಾಗಿ ಜೀವ ಬಿಟ್ಟ  ನುಡಿಗಾಗಿ ಪಣವ ತೊಟ್ಟ  ಜನರ ನುಡಿಯೇ ಕನ್ನಡ  ಕಾವೇರಿ ಹುಟ್ಟಿ ತುಂಗಾ ಭದ್ರೆ  ಹರಿವ ನಾಡಿದು ಕನ್ನಡ  ಹಚ್ಚ ಹಸಿರ ಹುಟ್ಟ ಸಹ್ಯಾದ್ರಿಯ  ಬೆಟ್ಟವಿರುವ ನಾಡು ಕನ್ನಡ  ಒಲವ ಬಿತ್ತಿ ಚಲದಿ ಬೆಳೆದ  ನಮ್ಮ ನಾಡು ಕನ್ನಡ  ಪ್ರೀತಿ ಹಂಚಿ ಮನವ ಗೆದ್ದು  ಕೂಡಿ ಬಾಳು ಸಂಗಡ  ********ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

😹😹ಮೌನದ ಮಾತು 😹😹

ಮೌನವೇ ಮಾತಾದಾಗ  ಮಾತಿಗೆಲ್ಲಿದೆ ಬೆಲೆ  ನಗುವೇ ನೆನೆಪಾದಾಗ  ದುಃಖದ ಕೊಲೆ  ಪ್ರೀತಿಯೇ ವಿಷವಾದಾಗ  ಪ್ರೇಮವೇ ಹುರುಳು  ಖುಷಿಯೇ ಬೆಳಕಾದಾಗ  ನೋವಿಗೆಲ್ಲಿದೆ ನೆರಳು  ಮನಸ್ಸು ಕಲ್ಲದಾಗ  ಭಾವನೆಗೆಲ್ಲಿದೆ  ದಿನ  ನೋವು ಮರುಕಳಿಸಿದಾಗ  ಚಿಂತೆಯಲ್ಲಿ ಈ ಮನ  ನೆನಪು ಕೊಲೆಯಾದಾಗ  ಸಾವು ಕೂಡ ಸುಖ   ವಯಸ್ಸು ಮರೆಯಾಗುವಾಗ  ಯವ್ವನ ಕೂಡ ನರಕ  ಸೌಂದರ್ಯ  ಅಳಿಸಿದಾಗ    ವಿಕಾರವೇ ಶತ್ರು  ಬುದ್ದಿ ಕಳೆದೋದಾಗ  ದಡ್ಡನೇ ಮಿತ್ರ  ನಾನು ಎನ್ನುವಾಗ  ನನ್ನವರು ಎನ್ನುವುದು ಭ್ರಮೆ  ದುಡ್ಡಿನ ಮದವೇರಿದಾಗ  ಮಾನಾವಿಯತೇಯೇ ವಿಮೆ  ಜೀವವೇ ಹೋದಾಗ  ಹುಟ್ಟು ಒಂದು ಅಚ್ಚರಿ ಸಾವು ಬಂದಾಗ  ಮನುಷ್ಯ ಕೂಡ ನಿಶಾಚರಿ  *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

💃💃 ಸುಂದರಿ 💃💃

  ಒರೆ ಕಣ್ಣ ಸುಂದರಿ  ನಿನ್ನ ಮಾತು ಪಾನಿಪುರಿ  ನಡೆವ ನಡಿಗೆ ನವಿಲು  ನನಗೇ ಏಕೋ ಅಮಲು  ಪ್ರೀತಿಯಲಿ ತುಂಬಾ ಫೈನ್ ಯೋಚಿಸುತಿದೆ ನನ್ನ ಬ್ರೈನ್  ನಿನ್ನ ನಗುವು ಒಂದು ವೈನ್  ನೋಡಿದಾಗ ಕಡಿಮೆ ಸ್ಟ್ರೈನ್  ಎಲ್ಲರಲ್ಲೂ ನಿನ್ನ ಸ್ನೇಹ  ಪ್ರೀತಿಗಾಗಿ ನಿನ್ನ ಮೋಹ  ಕಾದು ಕುಳಿತ ಹುಡುಗರೆಲ್ಲ  ನಡುದಾರಿಯಲ್ಲಿ ಶಿವ ಶಿವ  ನೀನು ತುಂಬಾ ಮುದ್ದು ಹುಡುಗಿ  ಕಣ್ಣಿನ್ನಲ್ಲೆ ಕಾಡೋ ಬೆಡಗಿ  ನಿನ್ನ ದಿರಿಸು ತುಂಬಾ ನೈಸ್  ಹೃದಯದಲ್ಲಿ ಇಟ್ಟಂಗೆ ಐಸ್  ನಿನಗಾಗಿ ನಾನು ಕಾದು ಕುಳಿತೆ  ಪ್ರೀತಿಸುವೆನು ನಿನ್ನ ವನಿತೆ  ಒಮ್ಮೆ ನನ್ನ ತಿರುಗಿ ನೋಡು  ರಾಮನಂತೆ ನನ್ನ ಪಾಡು  ಒರೆ ಕಣ್ಣ ಸುಂದರಿ  ಮಾತು ಒಂದು ಪಾನಿಪುರಿ  ಸಾಕು ನಿನ್ನ ಪಿರಿ ಪಿರಿ  ಇಂದೇ ಬಿದ್ದ ಹುಡುಗರ ಜೀವನ  ಕಿರಿ ಕಿರಿ  *********ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

🏘️🏘️ನಮ್ಮೋರು 🏡🏡

  ಈ ಊರು ನಮ್ಮೂರು  ಹಾ ಊರು ನಿಮ್ಮೋರು  ಮದ್ಯೆ ಒಂದು ಮೈಲೀ ದೂರ  ನಿನಗಾಗಿ ಬಂದೆ  ನಿನ ನೋಡುತ ನಿಂದೆ  ಮುಂಗಾರು ಮಳೆಯಲಿ  ತಣ್ಣನೆ ಗಾಳಿಯಲಿ  ನೆಲದಲ್ಲಿನ ಕೆಸರಲಿ  ಚುಮು ಚುಮು ಚಳಿಯಲಿ  ನೆಡೆದಾಡುತ ದಾರಿಯಲಿ  ನಾ ಬಂದೆ ನಿನ ನೋಡಿ  ಪ್ರೀತಿಯಲಿ ಹೊಡಿ ಹೊಡಿ  ಬಿಸಿ ಕಾಫೀ ರುಚಿಯಲಿ  ಬೆಚ್ಚಗಿನ ಗೂಡಲಿ  ಒಲವಿನ ಹಿತದಲಿ  ಸವಿರುಚಿಯ ಕಂಡೆ  ಸವಿಯುತ ನಾ ನಿಂದೆ  ತಣ್ಣನೆ ಚಳಿಯಲಿ  ಬೆಂಕಿಯ ಬಲೆಯಲಿ  ಬಿಸಿತಾಗುತ ಕೊತೆ  ನೀ ಬರಲು ಬಳಿಯಿರಲು  ನಿನ್ನಂದಕೆ ನಾ ಸೋತೆ  ************ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

🌹🌷ಹಸಿರಾದ ಹೂವಬನ ☘️☘️

ಹಸಿರಾದ ಹೂವುಬನಕೆ  ಸೆರೆಯಾಗುವೆ ನಾನು  ನಿನ್ನ ಒಲವಿನ ತೋರಣಕೆ  ಜೊತೆಯಾಗುವೆ ನಾನು  ಬಾಳಲ್ಲಿ ಕೈಯಿಡಿದು  ಹೃದಯಕ್ಕೆ ಒಳ ಕರೆದು  ನಿನ ನಾಡಿ ಬಡಿತವೇ  ನಾನಾಗುವೇ ಇಂದು  ಪ್ರೀತಿಯ ಸುರಾಪಾನ  ನೀ  ಕೊಡುವ ಮಧುಪಾನ  ಮತ್ತೇರಲು ನನಗೆ  ವಶವಾಗುವೆ ನಾನು  ಜೀವನದಿ ಜೊತೆಯಾಗಿ  ಮನಸ್ಸಲ್ಲಿ ತೇಲೋಗಿ  ಒಲವಲ್ಲಿ ಮರೆತೋಗಿ  ವಯಸ್ಸೊಂದು ನಿನ ಕೂಗಿ  ಕಾರದಂತೆ ನನಗಾಗಿ  ಬಳಿಬಂದೆ ನಿನಗಾಗಿ  ಈ ಬಾಳು ಅತಿ ಸೊಗಸು  ನಾಮದೊಂದು ಹೊಂಗನಸು  ನನಸಾಗಲು ಕನಸು  ಮುನ್ನೆಡೆಯೋಣ  ಜೊತೆಯಿರುವೆ ನಾ  ********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

☁️☁️ಮುಂಜಾನೆ ಮಂಜಲ್ಲಿ 🌧️⛈️

ಮುಂಜಾನೆ ಮಂಜಲ್ಲಿ  ತಿಳಿ ನೀಲಿ ಆಗಸದಿ  ಬಿಳಿ ಮೋಡದ ಸೊಗಸಲಿ  ಕಿರಣದ ಬೆಳಕೊಂದು  ಭೂಮಿಯ ಚುಂಬಿಸುಲೂ  ಸೂರ್ಯಕಾಂತಿ ಹೂವೊಂದು  ನಸುನಕ್ಕು ತಿರುಗಿತು  ಒಲವಾಯಿತು ನನಗೆ ನಿನಮೇಲೆ ಹಾಗೆ  ಹಸಿರಿನ ಗರಿಕೆಯ ಮೇಲೆ  ನೀರಿನ ಹನಿಯೊಂದು  ನೆಲವನು ತಾಗಿರಲು  ಒಲವಾಯಿತು ನನಗೆ ನಿನಮೇಲೆ ಹಾಗೆ  ಹಕ್ಕಿಯ ಚಿಲಿ ಪಿಲಿ ಸದ್ದು  ಕೋಗಿಲೆಯ ಕೂಗು  ನವಿಲಿನ ನಾಟ್ಯ  ನೋಡುತ ಮೈಮರೆತು  ನಲಿಯುತ ಸ್ವರ್ಗವ ಕಂಡಿರಲು  ಒಲವಾಯಿತು ನನಗೆ ನಿನಮೇಲೆ ಹಾಗೆ  ತಂಗಾಳಿಯಲಿ ತೇಲುತ  ನೀರಿನಲಿ ಈಜುತಾ  ದೋಣಿಯೊಂದು ದಡದಲ್ಲಿ  ನಿನ್ನನ್ನು ಹುಡುಕುತ ಹೇಳಿತು  ಒಲವಾಯಿತು ನನಗೆ ನಿನಮೇಲೆ ಹಾಗೆ  ಪ್ರೀತಿಯ ಕಡಲಲಿ  ಸಮುದ್ರದ ಅಡಿಯಲಿ  ಮೊತ್ತೊಂದು ಕಂಡಿರಲು  ಮೀನೊಂದು ಚುಂಬಿಸಲು  ಒಲವಾಯಿತು ನನಗೆ ನಿನಮೇಲೆ ಹಾಗೆ  ******ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

🎄🌳ಹೊಸ ವರ್ಷ 🎄🌲

ಬಂದಾಯ್ತು ಹೊಸ ವರುಷ  ತಂದಿತೇ ಹೊಸ ಹರುಷ  ನಾದ ವೆಂಬ ಹೊಸತನಕೆ  ಶ್ರುತಿಯೊಂದು ಮಿಡಿದಂತೆ  ಪದಗಳ ಸಾಲು ಕವನಗಳ ಹೊನಲು  ಮಿಂಚಿತೆ ಹಾಡು ಕುಣಿದೀತೆ ನವಿಲು  ಸಾಹಿತ್ಯಾಕೇ ಸಂಗೀತದ ನಾದ  ನಾಟ್ಯಾಕೆ ನರ್ತನದ ಶೋಧ  ಸುಟ್ಟ ಬದುಕೊಂದು  ಹೇಳಿದ ಕಥೆಗೇ ಜೀವವೇ ನೀನಾದೆ  ಜೀವನದಿ ನೊಂದ ಆ  ಕಥೆಗೆ ನಾಯಕ ನಾನಾದೆ  ಕೈಕೊಟ್ಟ ಹುಡುಗಿ ಬಳ್ಳಾಲ್ಲಿ  ನೊಂದನು ಹುಡುಗ ನೋವಲ್ಲಿ  ಕೊನೆಯಾಯಿತು ಕಥೆಯು  ಇಬ್ಬರ ಪ್ರೀತಿಯ ವ್ಯಥೆಯು  ಬಂದಾಯ್ತು ಹೊಸ ವರುಷ  ತಂದಿತೇ ಹೊಸ ಹರುಷ  ಸಿಗಬಹುದೇ ರಸ ನಿಮಿಷ  ಜೀವನವೆಂಬ ಪುಟದಲಿ  ಗೀಚಬಹುದೇ ನಿನ್ನ ಹೆಸರು  ಪ್ರೀತಿಯಲಿ ಬಳಿ ಬಾರೆ ನೀನೇ ನನ್ನಉಸಿರು  ಕಾಯುತಿದೆ ದಿವಸ ನೀ ಬರಲು ಸನಿಹ  ಹೊಸ ವರಷುಕೆ ನವ ಬೆಳಕು ಬಂದಂತೆ  ಬಾಳ್ಳಿಗೆ ಹೊಸ ಚಿಗುರು ನಿನ್ನಂತೆ  ನಿನಗಾಗಿ ಈ ಹೃದಯ ಮಿಡಿದಂತೆ  ಹೊಸತನಕೆ ಸ್ಪೂರ್ತಿಯು ಕರೆದಂತೆ  *******ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್