💃💃 ಸುಂದರಿ 💃💃

 

ಒರೆ ಕಣ್ಣ ಸುಂದರಿ 

ನಿನ್ನ ಮಾತು ಪಾನಿಪುರಿ 

ನಡೆವ ನಡಿಗೆ ನವಿಲು 

ನನಗೇ ಏಕೋ ಅಮಲು 


ಪ್ರೀತಿಯಲಿ ತುಂಬಾ ಫೈನ್

ಯೋಚಿಸುತಿದೆ ನನ್ನ ಬ್ರೈನ್ 

ನಿನ್ನ ನಗುವು ಒಂದು ವೈನ್ 

ನೋಡಿದಾಗ ಕಡಿಮೆ ಸ್ಟ್ರೈನ್ 


ಎಲ್ಲರಲ್ಲೂ ನಿನ್ನ ಸ್ನೇಹ 

ಪ್ರೀತಿಗಾಗಿ ನಿನ್ನ ಮೋಹ 

ಕಾದು ಕುಳಿತ ಹುಡುಗರೆಲ್ಲ 

ನಡುದಾರಿಯಲ್ಲಿ ಶಿವ ಶಿವ 


ನೀನು ತುಂಬಾ ಮುದ್ದು ಹುಡುಗಿ 

ಕಣ್ಣಿನ್ನಲ್ಲೆ ಕಾಡೋ ಬೆಡಗಿ 

ನಿನ್ನ ದಿರಿಸು ತುಂಬಾ ನೈಸ್ 

ಹೃದಯದಲ್ಲಿ ಇಟ್ಟಂಗೆ ಐಸ್ 


ನಿನಗಾಗಿ ನಾನು ಕಾದು ಕುಳಿತೆ 

ಪ್ರೀತಿಸುವೆನು ನಿನ್ನ ವನಿತೆ 

ಒಮ್ಮೆ ನನ್ನ ತಿರುಗಿ ನೋಡು 

ರಾಮನಂತೆ ನನ್ನ ಪಾಡು 


ಒರೆ ಕಣ್ಣ ಸುಂದರಿ 

ಮಾತು ಒಂದು ಪಾನಿಪುರಿ 

ಸಾಕು ನಿನ್ನ ಪಿರಿ ಪಿರಿ 

ಇಂದೇ ಬಿದ್ದ ಹುಡುಗರ ಜೀವನ  ಕಿರಿ ಕಿರಿ 



*********ರಚನೆ ******

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35