💛❤️ನಮ್ಮ ನಾಡು ಕನ್ನಡ ❤️💛


ಒಲವ ಬಿತ್ತಿ ಚಲದಿ ಬೆಳೆದ 

ನಮ್ಮ ನಾಡು ಕನ್ನಡ 

ಪ್ರೀತಿ ಹಂಚಿ ಮನವ ಗೆದ್ದು 

ಕೂಡಿ ಬಾಳು ಸಂಗಡ 


ನಾವು ಎಲ್ಲಾ ಒಂದೇ ಎಂದು 

ಬಾಳುತಿಹೆವು ಒಟ್ಟಿಗೆ 

ನಾಡ ಕಟ್ಟಾಲೆಂದು ಒರಟು 

ಮಾಡುತಿಹೆವು ಪ್ರೀತಿ ಇಟ್ಟಿಗೆ 


ಅನ್ನ ಬೆಳೆದು ಚಿನ್ನ ತೆಗೆವ 

ನಮ್ಮ ನಾಡು ಕನ್ನಡ 

ಅರಿಸಿನ ಕುಂಕುಮನಿಟ್ಟ 

ಕನ್ನಡ ತಾಯಿ ಇಹಳು ಸಂಗಡ 


ವಿದ್ಯೆ ಕಲಿಸಿ ಅನ್ನ ನೀಡಿ 

ಬಾಳು ಬೇಳೂಗೋ ನಾಡಿದು 

ಇತಿಹಾಸವನ್ನು ಸಾರೋ 

ಚರಿತ್ರೆ ಹೇಳ್ಳೋ ನಮ್ಮ ಕನ್ನಡ ನುಡಿಯಿದು 


ಮಾನವೀಯತೆಯ ಮೆರೆದು 

ಪ್ರೀತಿಯಿಂದ ಕೈ ಇಡಿದು 

ನಡೆಸೋ ನಾಡು ಕನ್ನಡ 

ನಾಡಿಗಾಗಿ ಜೀವ ಬಿಟ್ಟ 

ನುಡಿಗಾಗಿ ಪಣವ ತೊಟ್ಟ 

ಜನರ ನುಡಿಯೇ ಕನ್ನಡ 


ಕಾವೇರಿ ಹುಟ್ಟಿ ತುಂಗಾ ಭದ್ರೆ 

ಹರಿವ ನಾಡಿದು ಕನ್ನಡ 

ಹಚ್ಚ ಹಸಿರ ಹುಟ್ಟ ಸಹ್ಯಾದ್ರಿಯ 

ಬೆಟ್ಟವಿರುವ ನಾಡು ಕನ್ನಡ 


ಒಲವ ಬಿತ್ತಿ ಚಲದಿ ಬೆಳೆದ 

ನಮ್ಮ ನಾಡು ಕನ್ನಡ 

ಪ್ರೀತಿ ಹಂಚಿ ಮನವ ಗೆದ್ದು 

ಕೂಡಿ ಬಾಳು ಸಂಗಡ 


********ರಚನೆ ******

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20