🌹🌷ಹಸಿರಾದ ಹೂವಬನ ☘️☘️
ಹಸಿರಾದ ಹೂವುಬನಕೆ
ಸೆರೆಯಾಗುವೆ ನಾನು
ನಿನ್ನ ಒಲವಿನ ತೋರಣಕೆ
ಜೊತೆಯಾಗುವೆ ನಾನು
ಬಾಳಲ್ಲಿ ಕೈಯಿಡಿದು
ಹೃದಯಕ್ಕೆ ಒಳ ಕರೆದು
ನಿನ ನಾಡಿ ಬಡಿತವೇ
ನಾನಾಗುವೇ ಇಂದು
ಪ್ರೀತಿಯ ಸುರಾಪಾನ
ನೀ ಕೊಡುವ ಮಧುಪಾನ
ಮತ್ತೇರಲು ನನಗೆ
ವಶವಾಗುವೆ ನಾನು
ಜೀವನದಿ ಜೊತೆಯಾಗಿ
ಮನಸ್ಸಲ್ಲಿ ತೇಲೋಗಿ
ಒಲವಲ್ಲಿ ಮರೆತೋಗಿ
ವಯಸ್ಸೊಂದು ನಿನ ಕೂಗಿ
ಕಾರದಂತೆ ನನಗಾಗಿ
ಬಳಿಬಂದೆ ನಿನಗಾಗಿ
ಈ ಬಾಳು ಅತಿ ಸೊಗಸು
ನಾಮದೊಂದು ಹೊಂಗನಸು
ನನಸಾಗಲು ಕನಸು
ಮುನ್ನೆಡೆಯೋಣ
ಜೊತೆಯಿರುವೆ ನಾ
********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment