☁️☁️ಮುಂಜಾನೆ ಮಂಜಲ್ಲಿ 🌧️⛈️
ಮುಂಜಾನೆ ಮಂಜಲ್ಲಿ
ತಿಳಿ ನೀಲಿ ಆಗಸದಿ
ಬಿಳಿ ಮೋಡದ ಸೊಗಸಲಿ
ಕಿರಣದ ಬೆಳಕೊಂದು
ಭೂಮಿಯ ಚುಂಬಿಸುಲೂ
ಸೂರ್ಯಕಾಂತಿ ಹೂವೊಂದು
ನಸುನಕ್ಕು ತಿರುಗಿತು
ಒಲವಾಯಿತು ನನಗೆ ನಿನಮೇಲೆ ಹಾಗೆ
ಹಸಿರಿನ ಗರಿಕೆಯ ಮೇಲೆ
ನೀರಿನ ಹನಿಯೊಂದು
ನೆಲವನು ತಾಗಿರಲು
ಒಲವಾಯಿತು ನನಗೆ ನಿನಮೇಲೆ ಹಾಗೆ
ಹಕ್ಕಿಯ ಚಿಲಿ ಪಿಲಿ ಸದ್ದು
ಕೋಗಿಲೆಯ ಕೂಗು
ನವಿಲಿನ ನಾಟ್ಯ
ನೋಡುತ ಮೈಮರೆತು
ನಲಿಯುತ ಸ್ವರ್ಗವ ಕಂಡಿರಲು
ಒಲವಾಯಿತು ನನಗೆ ನಿನಮೇಲೆ ಹಾಗೆ
ತಂಗಾಳಿಯಲಿ ತೇಲುತ
ನೀರಿನಲಿ ಈಜುತಾ
ದೋಣಿಯೊಂದು ದಡದಲ್ಲಿ
ನಿನ್ನನ್ನು ಹುಡುಕುತ ಹೇಳಿತು
ಒಲವಾಯಿತು ನನಗೆ ನಿನಮೇಲೆ ಹಾಗೆ
ಪ್ರೀತಿಯ ಕಡಲಲಿ
ಸಮುದ್ರದ ಅಡಿಯಲಿ
ಮೊತ್ತೊಂದು ಕಂಡಿರಲು
ಮೀನೊಂದು ಚುಂಬಿಸಲು
ಒಲವಾಯಿತು ನನಗೆ ನಿನಮೇಲೆ ಹಾಗೆ
******ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment