🎄🌳ಹೊಸ ವರ್ಷ 🎄🌲


ಬಂದಾಯ್ತು ಹೊಸ ವರುಷ 

ತಂದಿತೇ ಹೊಸ ಹರುಷ 

ನಾದ ವೆಂಬ ಹೊಸತನಕೆ 

ಶ್ರುತಿಯೊಂದು ಮಿಡಿದಂತೆ 


ಪದಗಳ ಸಾಲು ಕವನಗಳ ಹೊನಲು 

ಮಿಂಚಿತೆ ಹಾಡು ಕುಣಿದೀತೆ ನವಿಲು 

ಸಾಹಿತ್ಯಾಕೇ ಸಂಗೀತದ ನಾದ 

ನಾಟ್ಯಾಕೆ ನರ್ತನದ ಶೋಧ 


ಸುಟ್ಟ ಬದುಕೊಂದು 

ಹೇಳಿದ ಕಥೆಗೇ ಜೀವವೇ ನೀನಾದೆ 

ಜೀವನದಿ ನೊಂದ ಆ 

ಕಥೆಗೆ ನಾಯಕ ನಾನಾದೆ 


ಕೈಕೊಟ್ಟ ಹುಡುಗಿ ಬಳ್ಳಾಲ್ಲಿ 

ನೊಂದನು ಹುಡುಗ ನೋವಲ್ಲಿ 

ಕೊನೆಯಾಯಿತು ಕಥೆಯು 

ಇಬ್ಬರ ಪ್ರೀತಿಯ ವ್ಯಥೆಯು 


ಬಂದಾಯ್ತು ಹೊಸ ವರುಷ 

ತಂದಿತೇ ಹೊಸ ಹರುಷ 

ಸಿಗಬಹುದೇ ರಸ ನಿಮಿಷ 

ಜೀವನವೆಂಬ ಪುಟದಲಿ 

ಗೀಚಬಹುದೇ ನಿನ್ನ ಹೆಸರು 

ಪ್ರೀತಿಯಲಿ ಬಳಿ ಬಾರೆ ನೀನೇ ನನ್ನಉಸಿರು 


ಕಾಯುತಿದೆ ದಿವಸ ನೀ ಬರಲು ಸನಿಹ 

ಹೊಸ ವರಷುಕೆ ನವ ಬೆಳಕು ಬಂದಂತೆ 

ಬಾಳ್ಳಿಗೆ ಹೊಸ ಚಿಗುರು ನಿನ್ನಂತೆ 

ನಿನಗಾಗಿ ಈ ಹೃದಯ ಮಿಡಿದಂತೆ 

ಹೊಸತನಕೆ ಸ್ಪೂರ್ತಿಯು ಕರೆದಂತೆ 


*******ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್

Comments

Post a Comment

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20