😹😹ಮೌನದ ಮಾತು 😹😹


ಮೌನವೇ ಮಾತಾದಾಗ 

ಮಾತಿಗೆಲ್ಲಿದೆ ಬೆಲೆ 

ನಗುವೇ ನೆನೆಪಾದಾಗ 

ದುಃಖದ ಕೊಲೆ 


ಪ್ರೀತಿಯೇ ವಿಷವಾದಾಗ 

ಪ್ರೇಮವೇ ಹುರುಳು 

ಖುಷಿಯೇ ಬೆಳಕಾದಾಗ 

ನೋವಿಗೆಲ್ಲಿದೆ ನೆರಳು 


ಮನಸ್ಸು ಕಲ್ಲದಾಗ 

ಭಾವನೆಗೆಲ್ಲಿದೆ  ದಿನ 

ನೋವು ಮರುಕಳಿಸಿದಾಗ 

ಚಿಂತೆಯಲ್ಲಿ ಈ ಮನ 


ನೆನಪು ಕೊಲೆಯಾದಾಗ 

ಸಾವು ಕೂಡ ಸುಖ  

ವಯಸ್ಸು ಮರೆಯಾಗುವಾಗ 

ಯವ್ವನ ಕೂಡ ನರಕ 


ಸೌಂದರ್ಯ  ಅಳಿಸಿದಾಗ   

ವಿಕಾರವೇ ಶತ್ರು 

ಬುದ್ದಿ ಕಳೆದೋದಾಗ 

ದಡ್ಡನೇ ಮಿತ್ರ 


ನಾನು ಎನ್ನುವಾಗ 

ನನ್ನವರು ಎನ್ನುವುದು ಭ್ರಮೆ 

ದುಡ್ಡಿನ ಮದವೇರಿದಾಗ 

ಮಾನಾವಿಯತೇಯೇ ವಿಮೆ 


ಜೀವವೇ ಹೋದಾಗ 

ಹುಟ್ಟು ಒಂದು ಅಚ್ಚರಿ

ಸಾವು ಬಂದಾಗ 

ಮನುಷ್ಯ ಕೂಡ ನಿಶಾಚರಿ 


*********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35