Posts

ವಚನಗಳು 17

Image
ಗುರುವಿಗೆ ಗುಲಾಮನಾಗು ಮನಸ್ಸು ಆಳುವ ದೊರೆಯಾಗು ಲಿಂಗವ ಪೂಜಿ ಶಿವನಿಗೆ ಶರಣಾಗೂ ಕಾಯಕವೆಂಬ ಕೈಲಾಸದಿ  ಬಸವಣ್ಣನ ಪ್ರೀತಿ ಪಾತ್ರನಾಗು ನುಡಿದಂತೆ ನಡೆಯಬೇಕು ಇಂಗು ತಿಂದ ಮಂಗನಂತೆ ಕುಣಿಯಬೇಡ ಮಾತಿಗೆ ಬೆಲೆ ಇಲ್ಲದಾಗ ಮೌನವೇ ಲೇಸು ಮನಸ್ಸಿಗೆ ತಪ್ಪಸ್ಸು ನೀಡುವ ಕಾಯಕವೇ ಲೇಸು ನಮ್ಮ ಬಸವಣ್ಣ ಇಚ್ಛೆಯಂತೆ ನಡೆದರೆ ಮನಸ್ಸು ಕುಣಿವುದು ಬುದ್ದಿ ಶುದ್ದಿ ಇಲ್ಲದಿದ್ದರೆ ಕೇಡು ಬರುವುದು ಲಿಂಗವ ಪೋಜಿದೋಡೆ ಶಿವ ಒಲಿವುದು ಕಾಯಕವು ಮಾಡಿದ  ಕರ್ಮವ ತೆಗೆವುದು ನಮ್ಮ ಬಸವಣ್ಣ ******************ರಚನೆ ****************                  ಡಾ. ಚಂದ್ರಶೇಖರ. ಸಿ. ಹೆಚ್ 

ನನಗು ಕನಸು ಇದೆ

Image
  ಅರಸಿ ಬಂದರು ನನ ಮನೆಗೆ ಹಗಲು ಇರುಳು ಎನ್ನದೆ ಸಿಂಗರಿಸಿ ಸೀರೆ ಹುಟ್ಟು ಬಳುಕುವ ನನ್ನ ದೇಹದೊಳಗೆ ಮೈತುಂಬಾ ಬಟ್ಟೆ ನಾನು ಬಿಚ್ಚಿಟ್ಟೆ ಕನಸುಗಳ ಮೂಟೆ ಕಟ್ಟಿ ಸುತ್ತಿಟ್ಟೆ ನನ್ನ ಬದುಕು ಬವಣೆ ಕೇಳುವರು ಯಾರು ದೇಹವನ್ನು ಉಂಡು ಕುಡಿದು ಗುಂಡು ಹಾಡಿಹರು ದೇಹವನ್ನು ಚೆಂಡು ನನಗು ಆಸೆಗಳು ಕನಸುಗಳು ಇವೆ ನನ್ನ ಹೃದಯದ ಮಾತಿಗೆ ಬೆಲೆ ಇಲ್ಲ ನನ್ನ ದೇಹಕೆ ಮಾತ್ರ ಬೆಲೆ ಇಲ್ಲಿ ನುಗ್ಗಿಹರು ಸವುರುತ್ತ ಗಲ್ಲ ವಯಸ್ಸಿಗೆ ಪರಿಮಿತಿ ಇಲ್ಲ  ಬಾಳೆ ಹಣ್ಣು ತಿಂದು ಎಸೆದ ರೀತಿ ಜೇವನವಾಯ್ತು ಬದುಕಿ ಸತ್ತ ಹೆಣದ ರೀತಿ ರೋಕ್ಕ ಬಂದ ಮೇಲೆ ನಾನು ಒಂದು ಮೂಲೆ ವಯಸ್ಸು ಎಷ್ಟು ದಿನ ದೇಹ ಎಷ್ಟು ದಿನ ಬಳುಕುವುದು ಬಳ್ಳಿಯಂತೆ ಕಾವು ಇದ್ದಷ್ಟು ಕ್ಷಣ ಬಾಳು ಬೆಳಕು ಮಾಗಿದ ಹಣ್ಣ ರೀತಿ ದೇಹ ಹುಳುಕು ನೋವು ಉಂಡ ಮನಕೆ ಸಾಕು ಈ ತಳುಕು ನಾಲ್ಕು ಗೋಡೆಯ ಮದ್ಯೆ ಬಂದಿ ನಾನು ರಾಕ್ಷಸರ ಕೈಗೆ ಸಿಕ್ಕು ಚಿಂದಿ ನಾನು ಬಣ್ಣದ ಬಣ್ಣದ ಬಟ್ಟೆ ನಾನು ಕಲರಫುಲ್ ಚಿಟ್ಟೆ ಮನಸ್ಸು ಕನಸ್ಸು ಸುಟ್ಟ ಹೆಣ್ಣು ನಾನು ನನ್ನವರು ನನಗಿಲ್ಲ ಹೊತ್ತು ತಂದಿಹರು ಇಲ್ಲಿ ನೆತ್ತರು ಹರಿಸಿರು ನನ್ನ ಕಚ್ಚಿ ಬಂದು ಉಂಡು ಹೋದವರು ಎಷ್ಟೋ ಜನ ನನ್ನ ಮೆಚ್ಚಿ ನನ್ನವರ ನೆನಪು ನನ್ನ ಕಾಡಿಹುದು ಮತ್ತೆ ನೋಡಲು ಮನಸ್ಸು ಬಯಸಿಹುದು ಕಾಣದ ಪ್ರೀತಿ ಬಂದು ಬಳಗವ ಬೇಡಿಹುದು ಎಲ್ಲವೂ ಕನಸ್ಸು ಈಗ ಮನಸ್ಸು ನೊಂದಿದೆ... ಆಸೆ ಕಳಚಿದೆ ಕಚ್ಚಿ ತುಟಿಯಲಿ ರಕ್ತ ಸೋರಿದೆ ಸೇರುಗು ಜಾರಿದೆ ಬದುಕು ಕಸಿದಿದೆ ಕನ...

ವಚನಗಳ ಅರ್ಪಣೆ

Image
       ಅರ್ಪಣೆ   ಮನಸ್ಸು ಶುದ್ದಿ ಇರಲಿ ನಡತೆ ಶುದ್ದಿ ಇರಲಿ ನಿನ್ನ ಮೇಲೆ ನಂಬಿಕೆ ಇರಲಿ ಕಾಯಕವೇ ಕೈಲಾಸ ನನ್ನೊಬ್ಬ ನರ ಮನುಷ್ಯ ತಪ್ಪಾಗಿರಬಹುದು ವಿಷ್ಯ ಬರೆದೆನು ಸಣ್ಣ ವಚನ ನಮಿಸಿ ಬಸವಣ್ಣನ  ಪಾದ ಚರಣ ಪದಗಳಲಿ ಬಣ್ಣಿಸಲು ಪದಗಳೇ ಸಿಗುತ್ತಿಲ್ಲ ಬಸವಣ್ಣನ ವಚನ ಓದಿ ಸವಿದೆನಲ್ಲ ನುಡಿ ಮುತ್ತುಗಳು ಆ ಬರೆದ ಸಾಲುಗಳು ಜೀವನವ ತೆರೆದಿಡುವ ವಚನಮೃತಾಗಳು  ವಚನ ಬರೆವಷ್ಟು ಜ್ಞಾನಿ ನಾನಲ್ಲ ಆದರೂ ನಾಲ್ಕು ಸಾಲು ಬರೆದಿಹೆನಲ್ಲ  ಜೀವನದಿ ಅನುಭವ ಅಷ್ಟಿಲ್ಲಾ ನನಗೆ ತೊಚಿದ್ದು ಗೀಚಿಹೇನಲ್ಲ ಕ್ಷಮಿಸಿ ಬೀಡು ನನ್ನ ಓ ಯೋಗಿ ಬಸವಣ್ಣ                   ಸಮರ್ಪಣೆ   ***********ರಚನೆ ************* ಡಾ.. ಚಂದ್ರಶೇಖರ. ಸಿ. ಹೆಚ್ 

ವಚನಗಳು -16

Image
ದೇವನೂಬ್ಬ ನಾಮ ಹಲವೂ ಜಾತಿ ನೂರು ಮನುಜ ಕುಲವೊಂದೇ ಸಕಲ ಪ್ರಾಣಿಗಳಲಿ ಹರಿವುದು ರಕ್ತವೆ ಮಾಡುವ ಕಾಯಕ ನಮ್ಮ ಗುರಿತಿಸುವುದು ನಮ್ಮ  ಬಸವಣ್ಣ ಉರಿವ ಬೆಂಕಿಗೆ ತುಪ್ಪ ಹಾಕಿದರೆ ಧರೆಗೆ ಅವರಿಸುವುದು ಸಂಸಾರದಲ್ಲಿ ಹುಳಿ ಹಿಂಡಿದರೆ ಮಸಣವಾಗುವುದು ತಂದಿಕ್ಕಿ ತಮ್ಮಾಷೆ ನೋಡಬೇಡ ಓ ಮನುಜ ಶ್ರದ್ದೆಯಿಂದ ಉತ್ತಮ ಕಾಯಕವ ಮಾಡು ಒಳಿತಾಗುವುದು ನಮ್ಮ ಬಸವಣ್ಣ ಮನದಲ್ಲಿ ಶಿವನ ಚಿಂತೆಯ ಮಾಡು ಶಿವನಲ್ಲಿ ಒಳಿತನ್ನು ಬೇಡು ಮನಸ್ಸು ಶುದ್ದಿಯಾಗಿಟ್ಟು ನೋಡು ಮಾಡುವ ಕಾಯಕವ ಕೈ ಮುಗಿದು ಮಾಡು ಸ್ವರ್ಗದ ಬಾಗಿಲು ತೇರೇವುದು ನೋಡು ನಮ್ಮ ಬಸವಣ್ಣ **************ರಚನೆ **************         ಡಾ. ಚಂದ್ರಶೇಖರ. ಸಿ. ಹೆಚ್ 

ಹೇಗಿತ್ತು ನಿಮ್ಮ ಬಾಲ್ಯ

Image
ನಾನಿನ್ನು ಮೂರನೇ ತರಗತಿ ಯಾರು ಏತ್ತಬೇಕು ನನಗೆ ಆರತಿ ನಮ್ಮಮ್ಮನೇ ಮನೆಯ ಗೌಡತಿ ನಮ್ಮಪ್ಪನೇ ಮನೆಯ ಗೌಡ ಅಜ್ಜಿ ಕೊಟ್ಟ ಬಳುವಳಿಯ ಹಸು ನಮ್ಮನೆ ಹಿತ್ತಲಲ್ಲಿ ಮೇದಿತ್ತು ಹುಲ್ಲು ಜಗಿದು ಜಗಿದು ಕಡಿಯುತ್ತ ಹಲ್ಲು ಬಾಯಿಯಲ್ಲಿ ಸುರಿಸುತ್ತ ಜೊಲ್ಲು  ಶಾಲೆಯ ಮೇಷ್ಟ್ರ ಧರಣಿ ಮಂಡಲ ಕವನ ನನ್ನ ಮನಸ್ಸಲಿ ಹಸುವಿಗೆ ಭಕ್ತಿ ನಮನ ಅಮ್ಮ ಹೇಳುವಳು ದಿನ ಕೆಲಸ ಯಾರು ಮಾಡಬೇಕು ದಿವಸ ಹಿತ್ತಲ ಮನೆಯ ಬಾಗಿಲು ತೆಗೆದು ಹಸುವಿನ ಗಂಜಲ ತೊಟ್ಟಿಗೆ ಮಗೆದು ಬರಿ  ಕೈಲಿ ಸಗಣಿಯ ಮುಟ್ಟಿ ಮಾಡುವರಂತೆ ಸಗಣಿ ಬೆರಣಿ ತಟ್ಟಿ ಸಗಣಿಯ ತಿಪ್ಪೆಗೆ ಎಸೆದು ಬುಟ್ಟಿಯ ದೋಡ್ಡಿಲಿ ಹೊಗೆದು ಶುಭ್ರವಾಗಿ ಕೈಕಾಲು ತೊಳೆದು ಕರುವನ್ನು ಬಿಟ್ಟು ಹಾಲನು ಕುಡಿಯಲು ತಂಬಿಗೆ ತಂದು ಕೆಚ್ಚೆಲಿಗೆ ನೀರನು ಸವರಿ ಗುದ್ದುತಾ ಕರು ಹಾಲಿನ ಸವಿ ಕಂಡು ಹೊಟ್ಟೆಯ ತುಂಬಾ ಹಾಲನು ಉಂಡು ಕರುವನು ಕಟ್ಟಿ ಕೆಚ್ಚೆಲು ಮುಟ್ಟಿ ಹಾಲನು ಕರೆದು ಅಮ್ಮ ಹೇಳಿದ ಪಾತ್ರೆಗೆ ಸುರಿದು ಹಸುವಿನ ಪ್ರೀತಿ ಕರುವಿನ ಕಡೆಗೆ ಕರುವು ಪ್ರೀತಿ ಹಸುವಿನ ಎಡೆಗೆ ಹೇಗೆ ಬಣ್ಣಿಸಲಿ ಈ ಬಾಂದವ್ಯ ಪ್ರೀತಿಯ ನಲ್ಮೆಯ ವಾತ್ಸಲ್ಯ ಮನೆ ದೇವರ ಗುಡಿಗೆ ಪೂಜೆ ಬೇಡಿದೆ ದೇವರ ಒಳ್ಳೇದು ಮಾಡು ವಿದ್ಯಾ ಬುದ್ದಿ ನನಗೆ ನೀಡು ಕಳೆಯಿತು ಈಗೆ ನಮ್ಮ ಬಾಲ್ಯ ತಿನ್ನದೇ ಮುಸುರೆಗೆ ಎಸೆದ ಹಾಗಲಕಾಯಿ ಪಲ್ಯ  ನಮ್ಮ ಪಯಣ ಶಾಲೆಯ ಕಡೆಗೆ ದಿನವೂ ಶಾಲೆಗೆ ನಮ್ಮ ನಡಿಗೆ ***********ರಚನೆ ******* ಡಾ  ಚಂದ್ರಶೇಖರ. ಸಿ. ಹೆಚ್

ಬದುಕು ಬರಿದು

Image
ಬದುಕು ಬರಿದಾದ ಮೇಲೆ ಮುಖದಿ ನಗುವೆಲ್ಲಿದೆ ನೋವು ನೂರೆಂಟು ಹಾಗಿ ಕಣ್ಣ ನೀರು ಬತ್ತಿದೆ ಮನದಿ ಚಿಂತೆಯ ಬೇರು ನನ್ನ ಮನವ ಸುಡುತಿದೆ ಆಟವ ಆಡಿಸುವತನ ಕೈಲಿ ಎಲ್ಲಾ ಅಡಗಿದೆ ಯಾರಿಗೆ ಏಳಲಿ ದುಃಖ್ಖ ಮನದ ಕಟ್ಟೆ ಹೊಡೆದಿದೆ ಪ್ರತಿ ಕ್ಷಣವೂ ನಿನ್ನ ಯೋಚನೆ ಮನೆ ಮಾಡಿದೆ ಬಾರೆ ನನ್ನ ಒಲವೇ ನೋವು ಮರೆಸುವ ಚೆಲುವೆ ಎಲ್ಲಿರುವೆ ನೀನು, ಎಗೆ ಹುಡುಕಲಿ ನಿನ್ನ ಓ ಮನವೇ ಕಾಣದ ದಾರಿಯಲ್ಲಿ ನಾ ಹಾಗೆ ಸಿಲುಕಿದೆ ನಿನ್ನ ಕಾಣದೆ ಏಕೋ ನನ್ನ ತನುವು ಕಲಕಿದೆ ಮುಂಗಾರು ಮಳೆಯ ರೀತಿ ನಿನ ಆಗಮನಕೆ ಕಾದು ಮಣ್ಣು ಅಸನಗೋ ರೀತಿ ನನ ಘಾಯ ಮಾದು ಹಸಿರು ಹುಟ್ಟುವ ರೀತಿ ನನ ಕನಸ್ಸು ಚಿಗುರಲು ಗಿಡ ಮರ ಬಳ್ಳಿ ಹೂವು ಬಿಟ್ಟು ಆಸೆ ಕರೆಯಲು ಮನದಿ ಕಾಡಿದ ನೋವು ಕಣ್ಮರೆಯಾಗಲು ನೀನೇ ನನ್ನ ಊಸಿರು ಎಂದು ಒಲವಲ್ಲಿ ಬರೆಯಲು ನೂರಾಸೆ ಹೊತ್ತ ಬದುಕು ಹಣತೆಯಂತೆ ಊರಿಯಲು  ನೀನು ಬಳಿ ಬಂದು ಬಾಳುಹುಣ್ಣಿಮೆಯಂತೆ ಬೆಳಗಲು ಮುದುಡಿದ ತಾವರೆಯಂತೆ ಕನಸು ಮನಸು ಅರಳಿದೆ  ಜೀವನದಿ ಬೆಂದ ಸೂರು ನಮ್ಮನಿಗಾ ಮತ್ತೆ ಕರೆದಿದೆ ವಿಧಿಯ ಕೈಲಿ ಬೊಂಬೆಯಂತೆ ನಮ್ಮ ಜೀವನ ಆಡಿಸುವತನು ಕುಣಿಸುವಂತೆ ಕುಣಿವ ನಾವು ಅನುದಿನ ಕಾಣದತ ಕರೆದು ವರವ ನೀಡಲು ಒಮ್ಮೆ ನಾವು ಬೇಡಲು ಬಾಳು ಬಂಗಾರ ಬರಡು ಬದುಕು ಹಸಿರು ಸುರಿಸಲು  *************ರಚನೆ ***************          ಡಾ. ಚಂದ್ರಶೇಖರ. ಸಿ. ಹೆಚ್ 

ನೂರಾಸೆ ತುಂಬಿದೆ

Image
ತನನ, ತನನಾ, ತನನ, ತನನಾನನ  ಏ    ಹುಡುಗಿ    ಏಕೆ ನೂರಾಸೆ   ತುಂಬಿದೆ ಮನವೆಕೋ ಇಂದು,  ನಿನ್ನನ್ನೇ ಕೂಗಿದೆ ಬದುಕಿನ ಪಯಣದಿ ನೀ ದಾರಿ ತೋರಿದೆ ಕನಸ್ಸುಗಳ ಮೂಟೆ ಹೋತ್ತು ನಾ ನಿನ್ನಿಂದೆ ಸಾಗಿದೆ ಏ ಹುಡುಗಿ ಏಕೆ ನೂರಾಸೆ ತುಂಬಿದೆ ಏ ಹುಡುಗಿ ಏಕೆ ನೂರಾಸೆ ತುಂಬಿದೆ  ನಿನ ನೆನಪ ಸವಿ ದಾರಿಯಲಿ ನಾ ಕಾಲು ಜಾರಿದೆ ತಿಳಿಯದೆಯೇ ನನಗೆ  ನೀ ದೂರ ಹೋಡಿದೆ ಮನಸ್ಸಿಂದು ನೊಂದು  ಮೂಕವಾಗಿದೆ ಏ ಹುಡುಗಿ ಏಕೆ ನನ್ನಿಂದ ದೂರದೇ ನಿನ್ನಾಸ್ಸೇ ಹೊತ್ತು ನಾ ನಿನ್ನಿಂದೆ ಸಾಗಿದೆ ನನ್ನ ಹೃದಯವಿಗಾ ನಿನ್ನ ಹೆಸರ ಕೂಗಿದೆ ಮನಸ್ಸು ಚುಚ್ಚಿ ನೋವನ್ನು ತುಂಬಿ ನೀನೇಕೆ ಹೊಡಿದೆ ಏ ಹುಡುಗಿ ಹೇಳು ನಿನ್ನ ಹೇಗೆ ಮರೆಯಲಿ ಏ ಹುಡುಗಿ ಹೇಳು ನಿನ ಹೇಗೆ ಮರೆಯಲಿ ನನ್ನ ಈ ಪ್ರೀತಿಗೆ ಏನೆಂದು ಹೆಸರಿಡಿಲಿ ಮನದ ಮೌನದ ಹಾಡು ನಾನೇಗೆ ಮುಚ್ಚಿಡಲಿ ಏ ಹುಡುಗಿ ಒಮ್ಮೆ ಹೇಳಿ ಹೋಗು ಕಾರಣ ಕಾಲವೇಕೋ ಕಾಡುತಿದೆ ಕಹಿ ನೆನಪು ಹೊತ್ತು ನೀನಿರದೆ ನೋಡುತಿದೆ ಪ್ರೀತಿ ನಗುವ ಕಿತ್ತು ಕನಸ್ಸುಗಳಲಿ ಬದುಕಿರುವೆ ಮನದಾಸೆ  ಸತ್ತು ಏ ಹುಡುಗಿ ಏಕೆ ನೂರಾಸೆ ತುಂಬಿದೆ ನಿನ್ನಾಸೆ ಹೊತ್ತು ನಾ ನಿನ್ನಿಂದೆ ಸಾಗಿದೆ *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್,