Posts

ಎಲ್ಲಾ ಉಂಟು

Image
ಒಳಗೆ ಹೊರಗುಂಟು ಈ ಲೋಕ  ಕಗ್ಗಂಟು ಮನಸ್ಸು ಮನಸ್ಸುಗಳ ಮದ್ಯೆ ಚಿಂತೆ ನೊರೆಂಟು ಬಯಸಿದರೆ ಸಿಗದ ಬೆಳಕಲ್ಲಿ ನೋವುಂಟು ನನ್ನಾಸೆ ಹೂವಿಗೆ ಬೇಡಿಕೆ ಬಹಳ ಉಂಟು  ಹಾರುವ ಹಕ್ಕಿಗೆ ನೊರೆಂಟು ತೊಡರುಂಟು ಈಜುವ ಮೀನಿಗೆ ಸಮುದ್ರದಿ ಸಾವುಂಟು ಹಾಡುವ ಕೋಗಿಲೆಗೆ ಮಾಮರದ ಚಿಗುರುಂಟು ಬರಹಕು ಶಾಹಿಯ ಪದದಿ ಕೊನೆಉಂಟು  ಹರಿವ ನದಿಗೆ ಸಮುದ್ರದಿ ನೆಲೆ ಉಂಟು ಹಾರುವ ಗಾಳಿಪಟದ ಮುಗುದಾರ ಕೈಲುಂಟು ನಗುವ ಕೆನ್ನಗೆ ವಯಸ್ಸಲ್ಲೂ ಸುಕ್ಕುಂಟು ಮನಸ್ಸಿನ ವ್ಯಥೆಗೆ ಚಿಂತೆ ಎಂಬ ಸಮಾದಿ ಉಂಟು  ಮಾನವನಿಗೂ ಅರಿಯದ ವಿಸ್ಮಯ ಉಂಟು ಆಕಾಶದಿ ನಕ್ಷತ್ರದ ಮಿಂಚಿನ ಗೂಡು ಉಂಟು ಸೂರ್ಯನಲಿ ಕುದಿಯುವ ಬೆಂಕಿಯ ಸೆಲೆ ಉಂಟು  ಎಲ್ಲವೂ ಉಂಟು ಯಾರಿಗೂ ತಿಳಿಯದ ಕಗ್ಗಂಟು ಎಲ್ಲದಕ್ಕೂ ತನ್ನದೇ ಆದ ಹಿತಿ ಮಿತಿ ಉಂಟು  ಸರ್ವರಿಗೂ ಸಮಪಾಲು ಸಹಬಾಳ್ವೆ ಉಂಟು  **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಹೇನಿದು ಗೋಳು

Image
ಓ ದೇವರೇ ಒಮ್ಮೆ ನೀ ಕೇಳು ಹೇನಿದು ಗೋಳು ಕಣ್ಣ ನೋಟಕೆ ಕುಣಿದಿದೆ ಬಾಳು ತುಂಟ ನಗೆ ಬೀರಿದೆ ವಯಸ್ಸು ಮಾತು ಮಾತು ಮುತ್ತಾಗೋ ಕನಸು ಒಲವ ಪಯಣದಿ ಪ್ರೀತಿ ಮರೆತ ಹೂವು  ಅರಳುವ ಮುಂಚೆಯೇ ಯಾಕೋ ಬಾಡಿದೆ ಮನದ ಆಸೆಯ ಕಿತ್ತು ತಿಂದಿದೆ ನೋವ ತಾಳದೇ ಮನವು ಬೇರೆ ದಾರಿ ಹಿಡಿದಿದೆ ಕಾಣದ ಲೋಕ ಕೈಬಿಸಿ ಕರೆದಿದೆ ಪ್ರೀತಿಲಿ ಸೋತು ನೊಂದ ಮನವನು ಸಂತೈಸಿ ಹೇಳಿದೆ ನನ್ನ ಅಳುವ ದೊರೆ ನೀನೇ ಈ ಲೋಕವು ನಾನೇ ಹೇನಿದು ಗೋಳು ಓ ದೇವರೇ ಕೇಳು ಕಣ್ಣ ನೋಟಕೆ ಕುಣಿದಿದೆ ಬಾಳು ಜಗವ ಗೆಲ್ಲೊ ಚಲದಿ ಬಂದ ಇವನ ಬದುಕು ತರಗೇಲೇಯಂತೆ ಹುದುರಿ ನಿಂತಿದೆ ಸಾವು ಒಂದೂ ಸನಿಹಕೆ ಬಂದು ಕನಸು ಕೊಂದು ನೂರಾಸೆ ತಿಂದು ಬದುಕ ಮುಗಿಸಿದೆ ಓ ದೇವರೇ ನೋಡು ಗೋಳು ಈ ಸಾವು ನ್ಯಾಯವೇ ಹೇಳು *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ನಡೆದು ಹೋಯಿತಲ್ಲ

Image
ಕವಿಯಾಗ ಬಯಸಿ ನಾ ಕವನ ಗೀಚಲಿಲ್ಲ ಅಂಕೆಗಳ ಮುಂದೆ ನಾನಿದ್ದರೆ  ಬೆಲೆ ಎಂದು ಸೊನ್ನೆ ಹುಟ್ಟಲಿಲ್ಲ ಹರಿವ ಸಿಹಿ ನದಿಯ ನೀರು ಉಪ್ಪೆಂದು ತಿಳಿದು ಸಮುದ್ರ ಸೇರಲಿಲ್ಲ ಅರಣ್ಯದಲ್ಲಿ ವನ್ಯ ಮೃಗಗಳ    ನೋಡಿ ಜಿಂಕೆ ಜೀವಿಸುತಿಲ್ಲ ಸಮುದ್ರದಿ ಸಾವೆಂದು ತಿಳಿದು ಮೀನು ಈಜು ಕಲಿಯಲಿಲ್ಲ ಬೆಂಕಿಯಲಿ ಬೇಯುವೆ ಎಂದು ಹೆದರಿ ಮರಗಿಡ ಬೆಳೆಯಲು ನಿಲ್ಲಿಸಲಿಲ್ಲ ದ್ರೋಣಚಾರ್ಯ ಎಂಬ ಗುರುವು  ಶಿಷ್ಯ ಏಕಲವ್ಯಾನಿಗೆ ವಿದ್ಯೆ ಕಲಿಸಲಿಲ್ಲ ಸೀತೆಯು ರಾವಣನ ನೋಡಿ ರಾಮಾಯಣ ಶುರುವಾಗಲಿಲ್ಲ  ಶಕುನಿ ಆಡಿದ ಪಗಡೆಯಟಕೆ ಮಹಾಭಾರತ ನಡೆಯಲಿಲ್ಲ ನನ್ನ ನಲ್ಲೆಯ ಕುಡಿ ನೋಟದ ಮೃದು ಮಾತಿಗೆ ಸೋತು ನಾನು ನಲ್ಲ ನಾಗಲಿಲ್ಲ ಚಂದ್ರನಿಗೆ ಹೆದರಿ ಓಡಿ ಸೂರ್ಯ ಮುಳುಗಲಿಲ್ಲ ಮನುಷ್ಯನ ಸೃಷ್ಟಿ ನೋಡಿ ಪ್ರಕೃತಿಯ ದೈವ ಬೆರಗಾಗಲಿಲ್ಲ  ನಡೆವ ಕಾಲದಿ ತಡೆಯದೆಯೇ ಎಲ್ಲಾ   ನಡೆದು  ಹೋಯಿತಲ್ಲ. *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಯುಗಾದಿ

Image
ನವ  ವಸಂತದ ಯುಗಾದಿ ಹೊಸವರುಷದ ಬುನಾದಿ ಚಿಗುರೆಲೇ ಚಿಗುರಿ ವನದಿ ಹಕ್ಕಿ ಚಿಲಿಪಿಲಿ ಕೂಗಿ ಸಂತಸದಿ ಮುಂಗಾರು ಮಳೆಯೂ ಬಂತು ನೋಗವ ಕಟ್ಟಿ ಜಗವ ಗೆಲ್ಲುವಂತೆ  ಹುಳುಮೆ ಭೂಮಿ ಅಸನು ಆತು ರೈತನ ಮೋಗಾದಿ ಖೂಷಿ ತಂತು ಹರಿಶಿನ ಎಣ್ಣೆ ನೀರು ಮೈ ತಾಕಿ ಚರ್ಮದ ಕಣವ ಇಂಚಿಚು ಸೋಕಿ ಕೊಳೆಯೋ ತೆಗೆಯೋ ಸ್ನಾನವೇ ಪಾಪ ಕಳೆಯೋ ಯೋಗವೆ ಆಗಸದಿ ತುಂಡಾದ  ಚಂದಿರ ನೋಡಲು ಏಕೋ ಅವಸರ ಕಂಡ ಒಡನೆ ಬೇವು ಬೆಲ್ಲ ಕಷ್ಟ ಸುಖವು ಸಮದಿ ಬಾಳ ಲ್ಲೆಲ್ಲಾ  ಊರ ತುಂಬಾ  ಒಳ್ಳೆ ಸಡಗರ ಹಿರಿಯರ ಆಶೀರ್ವಾದ ಜಯಕರ  ಈ ವರುಷ ಮಳೆಯೂ ಜಾಸ್ತಿ ಬೀಸೋ ಗಾಳಿ ಕಡಿಮೆ ಓ ಅರ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಮಾತಲಿ ಬೆಲ್ಲ

Image
ನಲ್ಲೆಯೇ ನಿನ್ನ ನೋಟಕೆ ಸುಮ್ಮನೆ ಸೋತಿಹೇ ನಾನೀಗ ನಿನ್ನ ಮೋಹಕ ನಗುವಿಗೆ ಪ್ರೇಮಿಯೂ ನಾನೀಗ ಮಾತಲ್ಲಿ ಬೆಲ್ಲ ಮುದ್ದಾದ ಗಲ್ಲ ಸವಿಯಲಿ ಹಿಡಿದ ನಾನೆ ನಲ್ಲ ಪಿಸು ಪಿಸು ಮಾತು ಹಾಡು ಮೆಲ್ಲ ಬಳುಕುವ ಸೊಂಟ ಕಾಮನಬಿಲ್ಲ ಹದಿಹರೆಯದ ವಯಸ್ಸು ಉಕ್ಕುವ ಸುಂದರಸೋಗಸು  ಮನದಲ್ಲಿ ಬಿತ್ತಿದೆ ಕನಸ್ಸು ಏಕೋ ಏನೋ ನಿನ ಮೇಲೆ ಮನಸ್ಸು ಕಾಡುವ ಸುಂದರ ಮೊಗದೂಳೆ  ಮುಡಿಯಲ್ಲಿ ಮಲ್ಲಿಗೆ ಮುಡಿದವಳೇ ಕಣ್ಣಲೇ ನನ್ನ ಕರೆದವಳೇ ನಗುವಲಿ ನನ್ನ ಸೆಳೆದವಳೇ ಕುಂತರು ಹಾಗೆ ನಿನ ಧ್ಯಾನ ನಿನ್ನ ಮಾತು ಸುಂದರ ಗಾನ ಆಸೆ ಏಕೋ ಬಯಸಿ ಮಿಲನ ಪ್ರೀತಿಗೆ ಪ್ರೀತಿಯ ನೆನಪೇ ಮೌನ ***********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಕಣ್ಣಮುಚ್ಚಾಲೆ

Image
ಕಣ್ಣು ಕಾಣದಾಯಿತೇ ಕುರುಡು ಪ್ರೀತಿಗೆ ನೋಟವೇಕೋ ನಾಟಿತೆ ಮನದ ಒಲವಿಗೆ ನಿನ್ನ ಆಟ ಕಣ್ಣ ಮುಚ್ಚಾಲೆ ಸೋತ ಪ್ರೀತಿ ಊಯ್ಯಾಲೆ ಬದುಕು ಭಾರ ನಿನ್ನ ಗುಂಗಲ್ಲೇ ಮರೆತೇ  ನಿನ್ನ ನನ್ನ ಕನಸ್ಸಲ್ಲೇ ಕಾಣದ ಪ್ರೀತಿ ಏಕೋ ಕತ್ತಲೆ ಬಾಳ ಕೈಯೊಂದು ಬೆನ್ನಲ್ಲೇ ಮನವು ಕೆರಳಿತು ಮತ್ತಲ್ಲೇ ನಿನ್ನ ನೆನಪು ಬಂದಾಗ ಓ ನಲ್ಲೆ ಹೃದಯ ಭಾರವಾಯಿತು ಮನಸ್ಸು ಮೌನವಾಯಿತು ಕನಸ್ಸು ಕರಗಿ ಹೋಯಿತು ನಿನ್ನ ಹೆಸರಲ್ಲಿ ಸೋಲು ನನದಾಯಿತು *************ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಪ್ರೀತಿ ನೋವು

Image
  ಮನಸ್ಸು ಯಾಕೋ ಬರಿದಾಯ್ತು ನಿನ್ನ ನೆನಪೇ ಕೊನೆಯಯ್ತು ಯಾರು ಬರೆದ ಹಣೆಯ ಬರಹ ಅಳಿಸಲಾರದ ನೋವೇ ವಿರಹ ನೀನು ಇರದ ಬದುಕು ಕಾದ ಕಬ್ಬಿಣದ ಸರಕು ಬಾಳ ನೋಗವೆ ಬಿರುಕು ತಿರುಗೋ ಕಾಲ ಚಕ್ರ ಮುರುಕು ನೂರು ಬಾರಿ ದೇವರ ಶಪಿಸಿ ಒಲವಿಗಾಗಿ ಪರಿತಪಿಸಿ ಕಾಣೆಯಾಯ್ತು ಕಂಡ ಕನಸ್ಸು ಕುಲುಮೆಯಾಗಿದೆ ಈ ಮನಸ್ಸು ಕಣ್ಣ ಹನಿಯು ರಕ್ತವಾಯ್ತೆ ಜೀವನದ ಕಥೆಯು ಮುಗಿದುವೋಯ್ತೆ ಹಾಳೆ ಹರಿದು ಗಾಳಿ ಪಟವು ಗಾಳಿಯಲ್ಲಿ ಹಾರದಾಯ್ತೆ  ಬಾಳ ಆಟದಲ್ಲಿ ಸೋತೆ ನಾನು ದಾರಿ ತಪ್ಪಿ ಅಲೆದೆ ನಾನು ತನುವು ಒಮ್ಮೆ ಹಾಗೆ ಕರಗಿ ಬಾರದೆ ಹೃದಯ ಮರುಗಿ ನೀನು ಇರದ ಲೋಕ ಶೂನ್ಯ ನಿನ್ನ ನಗುವೇ ಪ್ರೀತಿ ಮಾನ್ಯ ಬದುಕು ಒಂದೂ ಬರಡು ಭೂಮಿ ನಾನು ನಿನ್ನ ಹುಚ್ಚು ಪ್ರೇಮಿ  *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್