Posts

ನಮ್ಮ ಸ್ವಾತಂತ್ರ್ಯ

Image
ಸ್ವಾತಂತ್ರ್ಯ  ಆಳಿದ ದೊರೆಗಳು ಹಳಿದ ಮೇಲೆ ಬಂದಿತು ನಮಗೆ ಸ್ವಾತಂತ್ರ್ಯ ಕೆಚ್ಚೆದೆಯ ವೀರರು ಸುರಿಸಿದ ರಕ್ತಕೆ ಬಂದ ಸ್ವಾತಂತ್ರ್ಯ ಶಾಂತಿಯ ಮಂತ್ರ ಪಟಿಸಿದ ನಮಗೆ ಸಿಕ್ಕ ಸ್ವಾತಂತ್ರ್ಯ ಇಂಗ್ಲೀಷರು ದೇಶ ಬಿಟ್ಟ ಮೇಲೆ ಒಲಿದಿದೆ ನಮಗೆ ಸ್ವಾತಂತ್ರ್ಯ ಅದುವೇ 1947 ನೇ ಆಗಸ್ಟ್15ರ  ಸ್ವಾತಂತ್ರ್ಯ ಧರ್ಮಗಳು ಬೇರೆ ದೇವರುಗಳು ಬೇರೆ ನಾವೆಲ್ಲಾ ಒಂದೇ ಎಂದು ಜೀವಿಸುತ್ತಿರುವ ಸ್ವಾತಂತ್ರ್ಯ ಜಾತಿಗಳು ನೂರು ಬಾಷೆಗಳ ತವರು ಇದ್ದರು ಇಲ್ಲಿ ಸಮಾನತೆಯ ಸ್ವಾತಂತ್ರ್ಯ ಸಿರಿತನವಿದ್ದರೂ ಬಡತನ ಬಂದರು ಕಲೆತು ಬೆರೆಯುವ ಸ್ವಾತಂತ್ರ್ಯ ಮೇಲು ಕೀಳು ನಮ್ಮಯ ಗೋಳು ಮರೆತು ಕುಣಿಯುವ ಸ್ವಾತಂತ್ರ್ಯ ಅಜ್ಞಾನವ ಅಳಿಸಿ ವಿಜ್ಞಾನವ ಬೆಳೆಸಿ  ಪರಿಸರ ಉಳಿಸಿ ಯುವಜನತೆಯ ಸುಂದರ ಸ್ವಾತಂತ್ರ್ಯ ದೇಶದ ಯುಕ್ತಿ ಸೈನಿಕನ ಶಕ್ತಿ ಮುನ್ನೆಡಿಸಿ ನಲಿಯುತಿಹಾ ಸ್ವಾತಂತ್ರ್ಯ ರೈತನು ಶ್ರಮಿಸುತ ಅನ್ನವ ನೀಡುತಾ ಕಾರ್ಮಿಕ ದುಡಿಯುತ ಜೀವನವ ಸಾವೇಸುತ ಚಲದಲಿ ಬದುಕುವ ಸ್ವಾತಂತ್ರ್ಯ  ದೇಶದ ಹೆಸರು ಬಾಹ್ಯಕಾಶದಲ್ಲಿ ರಂಜಿಸುತ್ತಿರುವ ಸ್ವಾತಂತ್ರ್ಯ ಸಾಗಿದೆ ನಮ್ಮ ಅಂದ ಚೆಂದದ 75 ರ ಭಾರತ ಸ್ವಾತಂತ್ರ್ಯ. *******ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಹುಡುಗ ನೀನು

Image
ಹುಡುಗ ನೀನು  ದಾರಿಯಲೇ ನಾ ಕಂಡೆ ಒಬ್ಬ ಹುಡುಗ ನಡೆದಾನೆ ಇವನು ಕೊನೆಯ ತನಕ ಮನದಲ್ಲಿ ನೊಂದು ಕನಸನ್ನು ಕೊಂದು ಒಲವಲ್ಲಿ ಮಿಂದು ದಡದಿ ಬೆಂದು  ಮನಸ್ಸಲಿ ಭಾರ  ಹೊತ್ತು ನಡೆದ ದೂರ ಸುಂದರ ಹುಡುಗಿಯು ಕೊಟ್ಟ ನೋವಿನ ತೀರ ಕಡಲ್ಲಲ್ಲಿ ಬಂದು ನೋವಲ್ಲಿ ಮಿಂದು ಮನಸಿನ ಆಸೆಯ ಹೊಡಲಲ್ಲಿ ಕೊಂದು ಹುಟ್ಟಿತು ಅಸೆ ನೀನ್ನನ್ನು ನೋಡುವ ಮನಸೇ ನೋಡಿದಾಗ ಏಕೋ ಸುಂದರ ಕನಸೇ ನೀ ಹೇಳಿದ ಮೇಲೆ ಸುಂದರ ಕಡಲೆ  ಮರೆಯುವ ಮುಂಚೆ ಸುಂದರ ಒಡಲೇ ನೋವೋಲ್ಲಿ ಕೂಡ ತೀರದ ಬಯಕೆ ಕಂಡ ಕನಸಿಗೆ ಸೋಲಿನ ಅರಕೆ ಸಾವಲ್ಲೂ ಕೂಡ ಸೇರುವ ಕನಸೇ ನನ್ನಯ ಮನಸಿಗೆ ನಿನ್ನಯ ಸೊಗಸೆ ಪ್ರೀತಿಯ ಅಸೆ ಹೇಳಲು ಹೊರಟೆ ನನ್ನಯ ಪ್ರೀತಿಯು ಸುಂದರ ಅರಟೆ ಪ್ರೇಮದಿ ಅರಳಿದ ಸುಂದರ ಕವನ ನಿನಗಾಗಿ ಸೋತಿದೆ ನನ್ನ ಈ ನಯನ ****†****ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಕೆರೆ ತುಂಬಿ ಬಂತು

Image
ಮದಗದ ಕೆರೆ  ಕೆರೆಯನ್ನು ನೋಡಿ       ಕುಣಿದಾಡುವಾಸೆ ನಿನ್ನನ್ನು ಕಂಡು       ಕುಣಿಯಿತು ಮನಸೇ ಕೆರೆ ಏರಿ ಮೇಲೆ ಬಂದವಳೇ      ನೀರನ್ನು ಕಂಡು ನಿಂತಾವಳೇ ನೀರಲ್ಲಿ ಮಿಂದು       ನನ್ನನ್ನು ಕಂಡು ನಕ್ಕವಳೆ ನೀನ್ನನ್ನು ನೋಡಿ ಸೊಬಗನ್ನು ಬೇಡಿ           ಹಸಿರುಟ್ಟು ಮೈತುಂಬಾ ನಿಂತಾವಳೇ ನನ್ನಾಸೆ ನೀನು ಕನಸೆಲ್ಲ ಜೇನು         ಹಾಲಜೇನಿನಂತೆ ಕಂಡವಳೇ ನೀನು ತುಂಬಾ ಕೆಂಪು         ಮುಖವೆಲ್ಲಾ ಬಿಳಿಪು ನೋಡುಲು ಸೋಂಪು        ನೀ ಹರಿದ ಕಂಪು ಜಾರುತ್ತಾ ಕೆರೆ ಏರಿ                 ಹರಿದವಳೇ ಕಾಲುವೆಯಲಿ ಹರಿದು                ಒಲವೆಲ್ಲ ತೋಯ್ದು ಮನದಲ್ಲಿ ಹಸಿರು                ನೀನುಟ್ಟ್ ಪಸಿರು ಪ್ರೀತಿಯ ಹೆಸರು                ಜೀವದ ಉಸಿರು ನನ್ನನ್ನು ಕೊಚ್ಚಿ ಮನದಲಿ                  ಚಚ್ಚಿ ನಡೆದವಳೇ ಪ್ರೀತಿಯಲಿ ಕಚ್ಚಿ ಹಸಿರುನು         ...
Image
ಮನಸ್ಸಿನ ಅಸೆ  ಮನಸ್ಸಿನ ಅಸೆ ಹೇಳಲು ಬಂದೆ  ನನ್ನಯ ಕನಸಿಗೆ ನೀ ಬಂದೆ  ನೂರೆಂಟು ತವಕವ ನೀ ಏಕೆ ತಂದೆ  ಒಡಳಾದಲ್ಲಿ ಮುಚ್ಚಿಟ್ಟು ಕೊಂದೆ ಪೀತಿಯ ಸೊಬಗು ಕನಸಿನ ಮೆರಗು  ಮರೆತೋದೆ ನಾನು ನಿನ್ನಯ ಸೆರಗು  ಸೊಬಗಿಗೆ ಜಾರಿ ಪ್ರೇಮವ ತೋರಿ  ಬಳಿ ಬಂದೆ ನಾನು ಕುದುರೆಯ ಏರಿ  ನಿಂತಲ್ಲೆಲ್ಲಾ ನೀನು ಕುಂತಲ್ಲಿ ನೀನು  ಮನಸ್ಸನ್ನು ಕದ್ದೆ ಪೀತಿಯ ಗೆದ್ದೇ  ಯಾಕೋ ಏನೋ ನಿನ್ನಯ ತವಕ  ಮನದಾಸೆಯನ್ನು ಏಳಲು ನಡುಕ  ಎಳು ನೀ ಒಮ್ಮೆ ಪ್ರೀತಿಯ ಬಯಕೆ  ಕೇಳುವೆ ನಾನು ದೇವರಿಗೆ ಅರಕೆ  ಮರೆತೋದ ಅಸೆಪ್ರೀತಿಯ  ದುರಾಸೆ  ನೋಡುತ ನಿಂತೆ ಯಾರದು ಕನಸೇ  ಕನಸ್ಸಲ್ಲಿ ಕಂಡೆ ನಿನ್ನಯ ಸ್ವಪ್ನ  ಮನಸ್ಸಲ್ಲಿ ಬಂದು ಕಾಡಿದ ಸ್ವಪ್ನ  ಬಾರೆ ಬಾಳಿಗೆ ಸುಂದರ ಕಾಡಿಗೆ  ನನ್ನಯ ಅಸೆ ನೀನ್ನಿಟ್ಟ ಮಾಳಿಗೆ  ಮಾಳಿಗೆಯೂ ಸೋರಿ ಮಳೆಯಲ್ಲಿ ಜಾರಿ  ನಾ ಕಂಡೆ ನನ್ನಯ ಸುಂದರ ಪೋರಿ  ಬಾರೆ ನೀ ಚೆಲುವೆ ನಾ ಕಂಡ ಒಲುಮೆ  ನಿನ್ನಯ ಪ್ರೀತಿಯಲ್ಲಿ ಈ ನನ್ನ ಕುಲುಮೆ  **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಮಳೆ ಬಂತು ನೋಡ

Image
ತಣ್ಣನೆ ಗಾಳಿ ಬಿಸ್ಯತೇ  ಮೋಡಗಳು ಚದುರಯತೇ  ಮುಸುಕಾದ ಮೋಡ  ಮಳೆ ಬಂತು ನೋಡ  ಮಿಚ್ಹೊಂದು ಮೂಡಿ  ಸಿಡಿಲೊಂದು ಬಡಿದು  ತೆಂಗಿನ ಸುಳಿಯನ್ನು ಸುಟ್ಟ್ಯತೆ  ಕುರಿ ಇಂಡು ಬಂದು ಬೆಚ್ಚಯತೆ  ಕುರಿಗಾಹಿ ಎದೆಯಲಿ ನಡುಕ  ಮರದಡಿಯ ಹನಿಯಿಂದ ಜಳಕ  ಮೈಲ್ಲೇಲ ನೆಂದು ಮರವೊಂದು ಬೆಂದು  ಕುರಿಗಾಹಿ ಮನವನ್ನು ಕೊಂದು  ನೀರೆಲ್ಲ ಕಾಲುವೆ  ತುಂಬಾ ಹರಿದ್ಯಾತೆ  ಕೆರೆ ತುಂಬಿ ಬಂದು  ಕೋಡಿಯ ಹೊರಚಾಚಿ ಸೋರಿಯತೇ  ಪೈರೆಲ್ಲ ಹಸಿರು  ಹೊಲವೆಲ್ಲ ಕೆಸರು  ರೈತನ ಮನದಲ್ಲಿ ಉಸಿರು   ಜೀವಂತವಾಗಿದೆ ಹೆಸರು  ದನಕರು ಮೈಯೆದು  ಹಾಲ್ಲನ್ನು ಕರೆದು  ಮನೆಗೆಲ್ಲ ಅಮೃತದ  ಹಾಲು ನೀಡಿಯಾತೀ           ಮಳೆ ಬಂತು ನೋಡ  ಬರವೋಯ್ತು ಹಾಡ  ನೆಮ್ಮದಿಯ ಬದುಕು  ಭರವಸೆಯ  ಬೆಳಕು  ಹಳ್ಳಿಯ ಜನರ  ಮನದಲ್ಲಿ ಮೂಡೈಯ್ತೀ  ಯುವಕರು ಕುಣಿದು  ಕುಪ್ಪಳಿಸಿ ಬೆಳೆದ್ಯ್ಯತಿ  ತಣ್ಣನೆ ಗಾಳಿ ಬಿಸ್ಯತೇ  ಮೋಡಗಳು ಚದುರಯತೇ  ಮುಸುಕಾದ ಮೋಡ  ಮಳೆ ಬಂತು ನೋಡ  **********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಫಾದರ್ಸ್ ಡೇ

Image
ಫಾದರ್ಸ್ ಡೇ   ಅಪ್ಪ ಎಂದರೆ ನನಗೆ ಅಕ್ಕರೆ  ಪ್ರೀತಿಯ ಅಪ್ಪ ಜೀವನದ ಸಕ್ಕರೆ  ತನ್ನ ನೋವಲು ನಲಿವಿನ ಪಾಠ  ಸೋತರು ಕೂಡ ಗೆಲುವಿನ ಆಟ  ನನ್ನಯ ಮನದಿ ಮೊದಲ ಹೀರೋ  ನಾ ಕಂಡ ಬದುಕಿನ ಸ್ಟಾರ್  ತನ್ನಯ ಬುಜದಿ ಹೊತ್ತು ಸಾವರಿ  ತೋರಿದ ನನಗೆ ಜೀವನ ದಾರಿ  ಎಳು ಬಿಳಿನ ಪಯಣದಿ ಮುನ್ನೆಡಿಸಿ  ಸಾಗಿಸಿದ ನನ್ನ ಬದುಕನು ಸವಿಸಿ  ಅಪ್ಪ ಎಂಬ ಪದದಿ ಪ್ರೀತಿ ಉಂಟು  ಅವನೇ ನಮ್ಮ ಪರಿವಾರದ ನಂಟು  ನನ್ನಯ ಬದುಕಿಗೆ ಅವನೇ ಮುನ್ನುಡಿ  ಅವನು ತೋರಿದ ಪ್ರೀತಿಯೇ ಕಿರುನುಡಿ  ಸಾಗಿತು ಜೀವನ ಕಟ್ಟಿದ ಸೂರಡಿ  ಪೂಜಿಸುವೆವು ನಾವು ಪ್ರೀತಿಯ ತೆರಡಿ  ಅಪ್ಪ ಎಂದರೆ ನನ್ನಯ ಹೀರೋ  ಅವನೇ ನನ್ನ ಬದುಕಿನ ಸ್ಟಾರ್  ಪ್ರೀತಿಯ ನೆನಪಲಿ ಜಾತ್ರೆಯು ಜೋರು  ಹೊರಡೋಣ ನಾವು ಸೈಕಲ್ ಹೇರು  ಎಲ್ಲರಿಗೂ ಫಾದರ್  ಡೇ ಶುಭಾಶಯಗಳು  *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಬಣ್ಣದ ಹೂವು

Image
ಸಂಪಿಗೆ  ಅಸೆ ಎಂಬ ಬಣ್ಣದ ಹೂವು ಮಿಂಚುತ ಬಂತು  ದುರಾಸೆ ಎಂಬ ಮುಳ್ಳಿನ ಗಿಡವ ತಂತು  ಹೂವನು ಮೂಡಿದ ಹೆಣ್ಣಿನ ಸೆಳೆತ  ನನ್ನ ಮನಸ್ಸಲಿ ಒಳಪಿನ ಕೊರೆತ  ಸುಂದರ ಹೂವಿನ ನಗೆಯವಳು  ಸಂಪಿಗೆ ಮುಡಿದು ಬಂದವಳು  ಪ್ರೀತಿಯ ಊಟ ಇಟ್ಟವಳು  ನನ್ನ ಎದೆಯ ಬಡಿತವೇ ನನ್ನವಳು  ಕಾಣದ ಅಸೆ ಏಕೋ ದುರಾಸೆ  ವಂಚಿಸಿ ಬಂತು ನನ್ನೆಡೆಗೆ  ಪ್ರೀತಿಯ ಅಮಲು ನಗುವಿನ ಕಡಲು  ಬರಸೆಳೆದು ಬಂತು ನಂಕಡೆಗೆ  ಏಕೋ ಇಗೆ ಯೋಚಿಸುವಾಗಲೇ  ಪ್ರೀತಿಯು ಬಳಿ ಬಂತು  ನಾನೆ ಅವಳು ಸಂಪಿಗೆ ಮುಡಿದವಳು  ನಿನ್ನಾಸೆಯು ಎಳು ನನಗೆ  ಪ್ರೀತಿಯ ನೋವು ತಾಳದೆ ನಾನು  ಹೇಳಿದೆ ಅವಳಿಗೆ ಹೈ  ಲವ್ ಯು  ನನ್ನಯ ಕರೆಗೆ ಹೋಗಟ್ಟ ಸಂಪಿಗೆಯಿಂದ  ಉತ್ತರ ಬಂತು ನನಗೆ ಹೈ  ಹೇಟ್ ಯು  ನೋವುನು ನುಂಗಿದೆ ಹೂವನು ಬೇಡಿದೆ  ಪ್ರೀತಿ ಕೊಡುವೆಯ ನನಗಾಗಿ  ಹೂವು ಹೇಳಿತು ನಾ ಮೂಡಿದ ಸಂಪಿಗೆ  ನಿನ್ನಯ ಪ್ರಾಣವ ಕೇಳಿತು ವಿಷವಾಗಿ  ಸಂಪಿಗೆ ಒಲವ ಹರಿಯಲು  ಚೆಲುವ ಬಯಸಿದೆ ತನಗಾಗಿ  ವಿಷದ ಹಾವು ವಂಚಿಸಿ ಬಂತು ಪ್ರಾಣವ ತೆಗಿಯುತು  ಪ್ರೀತಿಯ ನೆನಪು ತಿಳಿಯುವುದೊರಳಗಾಗಿ  ಸ್ನೇಹದಿ ಕರೆದು ಸಂಪಿಗೆ ಮುಡಿದು  ಬಂದು ನನ್ನ ಕರೆದವಳೇ  ಪ್ರೀತಿಯ ಹುಚ್ಚು ಹಿಡಿಸಿ ನನಗೆ  ಮೊಸಾದಿ ನನ್ನ ಕೊಂದವಳೇ  ಅಸೆ...