ನಮ್ಮ ಸ್ವಾತಂತ್ರ್ಯ


ಸ್ವಾತಂತ್ರ್ಯ 


ಆಳಿದ ದೊರೆಗಳು ಹಳಿದ ಮೇಲೆ

ಬಂದಿತು ನಮಗೆ ಸ್ವಾತಂತ್ರ್ಯ

ಕೆಚ್ಚೆದೆಯ ವೀರರು ಸುರಿಸಿದ

ರಕ್ತಕೆ ಬಂದ ಸ್ವಾತಂತ್ರ್ಯ


ಶಾಂತಿಯ ಮಂತ್ರ ಪಟಿಸಿದ

ನಮಗೆ ಸಿಕ್ಕ ಸ್ವಾತಂತ್ರ್ಯ

ಇಂಗ್ಲೀಷರು ದೇಶ ಬಿಟ್ಟ ಮೇಲೆ

ಒಲಿದಿದೆ ನಮಗೆ ಸ್ವಾತಂತ್ರ್ಯ

ಅದುವೇ 1947 ನೇ ಆಗಸ್ಟ್15ರ  ಸ್ವಾತಂತ್ರ್ಯ



ಧರ್ಮಗಳು ಬೇರೆ ದೇವರುಗಳು ಬೇರೆ

ನಾವೆಲ್ಲಾ ಒಂದೇ ಎಂದು

ಜೀವಿಸುತ್ತಿರುವ ಸ್ವಾತಂತ್ರ್ಯ

ಜಾತಿಗಳು ನೂರು ಬಾಷೆಗಳ ತವರು

ಇದ್ದರು ಇಲ್ಲಿ ಸಮಾನತೆಯ ಸ್ವಾತಂತ್ರ್ಯ



ಸಿರಿತನವಿದ್ದರೂ ಬಡತನ ಬಂದರು

ಕಲೆತು ಬೆರೆಯುವ ಸ್ವಾತಂತ್ರ್ಯ

ಮೇಲು ಕೀಳು ನಮ್ಮಯ ಗೋಳು

ಮರೆತು ಕುಣಿಯುವ ಸ್ವಾತಂತ್ರ್ಯ


ಅಜ್ಞಾನವ ಅಳಿಸಿ ವಿಜ್ಞಾನವ ಬೆಳೆಸಿ

 ಪರಿಸರ ಉಳಿಸಿ ಯುವಜನತೆಯ

ಸುಂದರ ಸ್ವಾತಂತ್ರ್ಯ

ದೇಶದ ಯುಕ್ತಿ ಸೈನಿಕನ ಶಕ್ತಿ

ಮುನ್ನೆಡಿಸಿ ನಲಿಯುತಿಹಾ ಸ್ವಾತಂತ್ರ್ಯ


ರೈತನು ಶ್ರಮಿಸುತ ಅನ್ನವ ನೀಡುತಾ

ಕಾರ್ಮಿಕ ದುಡಿಯುತ

ಜೀವನವ ಸಾವೇಸುತ

ಚಲದಲಿ ಬದುಕುವ ಸ್ವಾತಂತ್ರ್ಯ 


ದೇಶದ ಹೆಸರು ಬಾಹ್ಯಕಾಶದಲ್ಲಿ

ರಂಜಿಸುತ್ತಿರುವ ಸ್ವಾತಂತ್ರ್ಯ

ಸಾಗಿದೆ ನಮ್ಮ ಅಂದ ಚೆಂದದ

75 ರ ಭಾರತ ಸ್ವಾತಂತ್ರ್ಯ.


*******ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35