ಹುಡುಗ ನೀನು


ಹುಡುಗ ನೀನು 

ದಾರಿಯಲೇ ನಾ ಕಂಡೆ ಒಬ್ಬ ಹುಡುಗ

ನಡೆದಾನೆ ಇವನು ಕೊನೆಯ ತನಕ

ಮನದಲ್ಲಿ ನೊಂದು ಕನಸನ್ನು ಕೊಂದು

ಒಲವಲ್ಲಿ ಮಿಂದು ದಡದಿ ಬೆಂದು 


ಮನಸ್ಸಲಿ ಭಾರ  ಹೊತ್ತು ನಡೆದ ದೂರ

ಸುಂದರ ಹುಡುಗಿಯು ಕೊಟ್ಟ ನೋವಿನ ತೀರ

ಕಡಲ್ಲಲ್ಲಿ ಬಂದು ನೋವಲ್ಲಿ ಮಿಂದು

ಮನಸಿನ ಆಸೆಯ ಹೊಡಲಲ್ಲಿ ಕೊಂದು


ಹುಟ್ಟಿತು ಅಸೆ ನೀನ್ನನ್ನು ನೋಡುವ ಮನಸೇ

ನೋಡಿದಾಗ ಏಕೋ ಸುಂದರ ಕನಸೇ

ನೀ ಹೇಳಿದ ಮೇಲೆ ಸುಂದರ ಕಡಲೆ 

ಮರೆಯುವ ಮುಂಚೆ ಸುಂದರ ಒಡಲೇ


ನೋವೋಲ್ಲಿ ಕೂಡ ತೀರದ ಬಯಕೆ

ಕಂಡ ಕನಸಿಗೆ ಸೋಲಿನ ಅರಕೆ

ಸಾವಲ್ಲೂ ಕೂಡ ಸೇರುವ ಕನಸೇ

ನನ್ನಯ ಮನಸಿಗೆ ನಿನ್ನಯ ಸೊಗಸೆ


ಪ್ರೀತಿಯ ಅಸೆ ಹೇಳಲು ಹೊರಟೆ

ನನ್ನಯ ಪ್ರೀತಿಯು ಸುಂದರ ಅರಟೆ

ಪ್ರೇಮದಿ ಅರಳಿದ ಸುಂದರ ಕವನ

ನಿನಗಾಗಿ ಸೋತಿದೆ ನನ್ನ ಈ ನಯನ



****†****ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35