ಕೆರೆ ತುಂಬಿ ಬಂತು
ಮದಗದ ಕೆರೆ |
ಕೆರೆಯನ್ನು ನೋಡಿ
ಕುಣಿದಾಡುವಾಸೆ
ನಿನ್ನನ್ನು ಕಂಡು
ಕುಣಿಯಿತು ಮನಸೇ
ಕೆರೆ ಏರಿ ಮೇಲೆ ಬಂದವಳೇ
ನೀರನ್ನು ಕಂಡು ನಿಂತಾವಳೇ
ನೀರಲ್ಲಿ ಮಿಂದು
ನನ್ನನ್ನು ಕಂಡು ನಕ್ಕವಳೆ
ನೀನ್ನನ್ನು ನೋಡಿ ಸೊಬಗನ್ನು ಬೇಡಿ
ಹಸಿರುಟ್ಟು ಮೈತುಂಬಾ ನಿಂತಾವಳೇ
ನನ್ನಾಸೆ ನೀನು ಕನಸೆಲ್ಲ ಜೇನು
ಹಾಲಜೇನಿನಂತೆ ಕಂಡವಳೇ
ನೀನು ತುಂಬಾ ಕೆಂಪು
ಮುಖವೆಲ್ಲಾ ಬಿಳಿಪು
ನೋಡುಲು ಸೋಂಪು
ನೀ ಹರಿದ ಕಂಪು
ಜಾರುತ್ತಾ ಕೆರೆ ಏರಿ
ಹರಿದವಳೇ
ಕಾಲುವೆಯಲಿ ಹರಿದು
ಒಲವೆಲ್ಲ ತೋಯ್ದು
ಮನದಲ್ಲಿ ಹಸಿರು
ನೀನುಟ್ಟ್ ಪಸಿರು
ಪ್ರೀತಿಯ ಹೆಸರು
ಜೀವದ ಉಸಿರು
ನನ್ನನ್ನು ಕೊಚ್ಚಿ ಮನದಲಿ
ಚಚ್ಚಿ ನಡೆದವಳೇ
ಪ್ರೀತಿಯಲಿ ಕಚ್ಚಿ ಹಸಿರುನು
ಬಿತ್ತಿ ಹೋರಾಟವಳೇ
ಮದಗದ ಕೆರೆಯಲ್ಲಿ
ನೊರೆ ಹಾಲಿನಂತೆ
ನನ್ನನ್ನು ನೋಡಿ ಕಣ್ಣನ್ನು
ತಿರುಗಿಸಿ ನಕ್ಕವಳೇ
********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Super sir
ReplyDelete