Posts

Image
ಮನಸ್ಸಿನ ಅಸೆ  ಮನಸ್ಸಿನ ಅಸೆ ಹೇಳಲು ಬಂದೆ  ನನ್ನಯ ಕನಸಿಗೆ ನೀ ಬಂದೆ  ನೂರೆಂಟು ತವಕವ ನೀ ಏಕೆ ತಂದೆ  ಒಡಳಾದಲ್ಲಿ ಮುಚ್ಚಿಟ್ಟು ಕೊಂದೆ ಪೀತಿಯ ಸೊಬಗು ಕನಸಿನ ಮೆರಗು  ಮರೆತೋದೆ ನಾನು ನಿನ್ನಯ ಸೆರಗು  ಸೊಬಗಿಗೆ ಜಾರಿ ಪ್ರೇಮವ ತೋರಿ  ಬಳಿ ಬಂದೆ ನಾನು ಕುದುರೆಯ ಏರಿ  ನಿಂತಲ್ಲೆಲ್ಲಾ ನೀನು ಕುಂತಲ್ಲಿ ನೀನು  ಮನಸ್ಸನ್ನು ಕದ್ದೆ ಪೀತಿಯ ಗೆದ್ದೇ  ಯಾಕೋ ಏನೋ ನಿನ್ನಯ ತವಕ  ಮನದಾಸೆಯನ್ನು ಏಳಲು ನಡುಕ  ಎಳು ನೀ ಒಮ್ಮೆ ಪ್ರೀತಿಯ ಬಯಕೆ  ಕೇಳುವೆ ನಾನು ದೇವರಿಗೆ ಅರಕೆ  ಮರೆತೋದ ಅಸೆಪ್ರೀತಿಯ  ದುರಾಸೆ  ನೋಡುತ ನಿಂತೆ ಯಾರದು ಕನಸೇ  ಕನಸ್ಸಲ್ಲಿ ಕಂಡೆ ನಿನ್ನಯ ಸ್ವಪ್ನ  ಮನಸ್ಸಲ್ಲಿ ಬಂದು ಕಾಡಿದ ಸ್ವಪ್ನ  ಬಾರೆ ಬಾಳಿಗೆ ಸುಂದರ ಕಾಡಿಗೆ  ನನ್ನಯ ಅಸೆ ನೀನ್ನಿಟ್ಟ ಮಾಳಿಗೆ  ಮಾಳಿಗೆಯೂ ಸೋರಿ ಮಳೆಯಲ್ಲಿ ಜಾರಿ  ನಾ ಕಂಡೆ ನನ್ನಯ ಸುಂದರ ಪೋರಿ  ಬಾರೆ ನೀ ಚೆಲುವೆ ನಾ ಕಂಡ ಒಲುಮೆ  ನಿನ್ನಯ ಪ್ರೀತಿಯಲ್ಲಿ ಈ ನನ್ನ ಕುಲುಮೆ  **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಮಳೆ ಬಂತು ನೋಡ

Image
ತಣ್ಣನೆ ಗಾಳಿ ಬಿಸ್ಯತೇ  ಮೋಡಗಳು ಚದುರಯತೇ  ಮುಸುಕಾದ ಮೋಡ  ಮಳೆ ಬಂತು ನೋಡ  ಮಿಚ್ಹೊಂದು ಮೂಡಿ  ಸಿಡಿಲೊಂದು ಬಡಿದು  ತೆಂಗಿನ ಸುಳಿಯನ್ನು ಸುಟ್ಟ್ಯತೆ  ಕುರಿ ಇಂಡು ಬಂದು ಬೆಚ್ಚಯತೆ  ಕುರಿಗಾಹಿ ಎದೆಯಲಿ ನಡುಕ  ಮರದಡಿಯ ಹನಿಯಿಂದ ಜಳಕ  ಮೈಲ್ಲೇಲ ನೆಂದು ಮರವೊಂದು ಬೆಂದು  ಕುರಿಗಾಹಿ ಮನವನ್ನು ಕೊಂದು  ನೀರೆಲ್ಲ ಕಾಲುವೆ  ತುಂಬಾ ಹರಿದ್ಯಾತೆ  ಕೆರೆ ತುಂಬಿ ಬಂದು  ಕೋಡಿಯ ಹೊರಚಾಚಿ ಸೋರಿಯತೇ  ಪೈರೆಲ್ಲ ಹಸಿರು  ಹೊಲವೆಲ್ಲ ಕೆಸರು  ರೈತನ ಮನದಲ್ಲಿ ಉಸಿರು   ಜೀವಂತವಾಗಿದೆ ಹೆಸರು  ದನಕರು ಮೈಯೆದು  ಹಾಲ್ಲನ್ನು ಕರೆದು  ಮನೆಗೆಲ್ಲ ಅಮೃತದ  ಹಾಲು ನೀಡಿಯಾತೀ           ಮಳೆ ಬಂತು ನೋಡ  ಬರವೋಯ್ತು ಹಾಡ  ನೆಮ್ಮದಿಯ ಬದುಕು  ಭರವಸೆಯ  ಬೆಳಕು  ಹಳ್ಳಿಯ ಜನರ  ಮನದಲ್ಲಿ ಮೂಡೈಯ್ತೀ  ಯುವಕರು ಕುಣಿದು  ಕುಪ್ಪಳಿಸಿ ಬೆಳೆದ್ಯ್ಯತಿ  ತಣ್ಣನೆ ಗಾಳಿ ಬಿಸ್ಯತೇ  ಮೋಡಗಳು ಚದುರಯತೇ  ಮುಸುಕಾದ ಮೋಡ  ಮಳೆ ಬಂತು ನೋಡ  **********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಫಾದರ್ಸ್ ಡೇ

Image
ಫಾದರ್ಸ್ ಡೇ   ಅಪ್ಪ ಎಂದರೆ ನನಗೆ ಅಕ್ಕರೆ  ಪ್ರೀತಿಯ ಅಪ್ಪ ಜೀವನದ ಸಕ್ಕರೆ  ತನ್ನ ನೋವಲು ನಲಿವಿನ ಪಾಠ  ಸೋತರು ಕೂಡ ಗೆಲುವಿನ ಆಟ  ನನ್ನಯ ಮನದಿ ಮೊದಲ ಹೀರೋ  ನಾ ಕಂಡ ಬದುಕಿನ ಸ್ಟಾರ್  ತನ್ನಯ ಬುಜದಿ ಹೊತ್ತು ಸಾವರಿ  ತೋರಿದ ನನಗೆ ಜೀವನ ದಾರಿ  ಎಳು ಬಿಳಿನ ಪಯಣದಿ ಮುನ್ನೆಡಿಸಿ  ಸಾಗಿಸಿದ ನನ್ನ ಬದುಕನು ಸವಿಸಿ  ಅಪ್ಪ ಎಂಬ ಪದದಿ ಪ್ರೀತಿ ಉಂಟು  ಅವನೇ ನಮ್ಮ ಪರಿವಾರದ ನಂಟು  ನನ್ನಯ ಬದುಕಿಗೆ ಅವನೇ ಮುನ್ನುಡಿ  ಅವನು ತೋರಿದ ಪ್ರೀತಿಯೇ ಕಿರುನುಡಿ  ಸಾಗಿತು ಜೀವನ ಕಟ್ಟಿದ ಸೂರಡಿ  ಪೂಜಿಸುವೆವು ನಾವು ಪ್ರೀತಿಯ ತೆರಡಿ  ಅಪ್ಪ ಎಂದರೆ ನನ್ನಯ ಹೀರೋ  ಅವನೇ ನನ್ನ ಬದುಕಿನ ಸ್ಟಾರ್  ಪ್ರೀತಿಯ ನೆನಪಲಿ ಜಾತ್ರೆಯು ಜೋರು  ಹೊರಡೋಣ ನಾವು ಸೈಕಲ್ ಹೇರು  ಎಲ್ಲರಿಗೂ ಫಾದರ್  ಡೇ ಶುಭಾಶಯಗಳು  *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಬಣ್ಣದ ಹೂವು

Image
ಸಂಪಿಗೆ  ಅಸೆ ಎಂಬ ಬಣ್ಣದ ಹೂವು ಮಿಂಚುತ ಬಂತು  ದುರಾಸೆ ಎಂಬ ಮುಳ್ಳಿನ ಗಿಡವ ತಂತು  ಹೂವನು ಮೂಡಿದ ಹೆಣ್ಣಿನ ಸೆಳೆತ  ನನ್ನ ಮನಸ್ಸಲಿ ಒಳಪಿನ ಕೊರೆತ  ಸುಂದರ ಹೂವಿನ ನಗೆಯವಳು  ಸಂಪಿಗೆ ಮುಡಿದು ಬಂದವಳು  ಪ್ರೀತಿಯ ಊಟ ಇಟ್ಟವಳು  ನನ್ನ ಎದೆಯ ಬಡಿತವೇ ನನ್ನವಳು  ಕಾಣದ ಅಸೆ ಏಕೋ ದುರಾಸೆ  ವಂಚಿಸಿ ಬಂತು ನನ್ನೆಡೆಗೆ  ಪ್ರೀತಿಯ ಅಮಲು ನಗುವಿನ ಕಡಲು  ಬರಸೆಳೆದು ಬಂತು ನಂಕಡೆಗೆ  ಏಕೋ ಇಗೆ ಯೋಚಿಸುವಾಗಲೇ  ಪ್ರೀತಿಯು ಬಳಿ ಬಂತು  ನಾನೆ ಅವಳು ಸಂಪಿಗೆ ಮುಡಿದವಳು  ನಿನ್ನಾಸೆಯು ಎಳು ನನಗೆ  ಪ್ರೀತಿಯ ನೋವು ತಾಳದೆ ನಾನು  ಹೇಳಿದೆ ಅವಳಿಗೆ ಹೈ  ಲವ್ ಯು  ನನ್ನಯ ಕರೆಗೆ ಹೋಗಟ್ಟ ಸಂಪಿಗೆಯಿಂದ  ಉತ್ತರ ಬಂತು ನನಗೆ ಹೈ  ಹೇಟ್ ಯು  ನೋವುನು ನುಂಗಿದೆ ಹೂವನು ಬೇಡಿದೆ  ಪ್ರೀತಿ ಕೊಡುವೆಯ ನನಗಾಗಿ  ಹೂವು ಹೇಳಿತು ನಾ ಮೂಡಿದ ಸಂಪಿಗೆ  ನಿನ್ನಯ ಪ್ರಾಣವ ಕೇಳಿತು ವಿಷವಾಗಿ  ಸಂಪಿಗೆ ಒಲವ ಹರಿಯಲು  ಚೆಲುವ ಬಯಸಿದೆ ತನಗಾಗಿ  ವಿಷದ ಹಾವು ವಂಚಿಸಿ ಬಂತು ಪ್ರಾಣವ ತೆಗಿಯುತು  ಪ್ರೀತಿಯ ನೆನಪು ತಿಳಿಯುವುದೊರಳಗಾಗಿ  ಸ್ನೇಹದಿ ಕರೆದು ಸಂಪಿಗೆ ಮುಡಿದು  ಬಂದು ನನ್ನ ಕರೆದವಳೇ  ಪ್ರೀತಿಯ ಹುಚ್ಚು ಹಿಡಿಸಿ ನನಗೆ  ಮೊಸಾದಿ ನನ್ನ ಕೊಂದವಳೇ  ಅಸೆ...

ಓ ಯೇಸುವೇ

Image
  ಓ ಯೇಸುವೇ  ಓ ಯೇಸುವೇ ನನ್ನ ಮೊರೆಯನು ಕೆಳೆಯ  ಬಳಲಿದ ಜೀವಕೆ ಆಸರೆ ಹಾಗೆಯೇ  ನಿನ್ನ ಪಾದಕೆ ನಮಸ್ಕರಿಸಿದೆ  ನನ್ನನು ನೀನು ಅರಸೆಯ  ಕಷ್ಟಗಳ ಸರಮಾಲೆಯಲಿ ನೊಂದು ಬೇಡಿದೆ  ನನ್ನ ಕರೆಗೆ ನೀ ತೋರು ಕೃಪೆಯ ಜನದ ಜಂಗುಳಿಯಲಿ ನೋವು ಬಂದಿದೆ  ನನ್ನ ನೋವನು  ನೀನು ನುಂಗೆಯ  ಒಂಟಿ ಜೀವವು ಜೊತೆಯ ಬೇಡಿದೆ  ಪ್ರೀತಿಯಲಿ ನೀ ಕರುಣಿಸೆಯ  ಯಾಕೋ ಏನೋ ಹೀ ಮನಸು ಬಳಲಿದೆ  ಈ ಜೀವಕೆ ಶಕ್ತಿ ನೀಡೆಯ  ಅಸೆ ಹೋತ್ತು ನಾ ಪುಸ್ತಕ ಓದಿದೆ  ವಿದ್ಯಾವಂತನ ನೀ ಮಾಡೆಯ  ನೂರು ದಾರಿಯೇ ನನ್ನ ಮುಂದಿದೆ   ಸರಿ ದಾರಿಯ ನೀ ತೊರೆಯ  ಪಾಪವೆಲ್ಲವು ಪುಣ್ಯವಾಗಲು ನಿನ್ನ ಕೂಗಿ  ನಾ ಕರದೇ ಬಂದು ನಿಲ್ಲೆಯ  ಓ ಯೇಸುವೇ ನಿನ್ನ ಬೇಡಿದೆ  ನಿನ್ನ ಕಂದನ  ಮನ್ನಿಸೆಯ  *****ರಚನೆ ***-* ಡಾ. ಚಂದ್ರಶೇಖರ. ಸಿ. ಹೆಚ್

ಭಗವಂತ

Image
ಅಸೆ ಭಗವಂತ  ಬದುಕುವ  ಅಸೆ ಭಗವಂತ  ನೀ ಕೊಟ್ಟಿರೋ ಜೀವನ ನಂಗಂತ  ಬೇಡುವೆ ನಿನ್ನನ್ನು ಪ್ರೀತಿಯಲ್ಲಿ  ನಡೆಸು  ನನ್ನ ಸನ್ಮಾರ್ಗದಲ್ಲಿ  ಕತ್ತಲೆ ಸರಿದು ಬೆಳುಕು ಬಂದಿದೆ  ನಿನ್ನಯ ಕರುಣೆಯಲ್ಲಿ  ಮಾಡುವೆ  ನಿನ್ನಯ ಭಜನೆಯನ್ನು  ಕೊಡು ನೀನು ನನ್ನ ಮನಕೆ ಶಾಂತಿಯನು  ಸಾವಿರ ಭಕ್ತರ ಸಂಮುಖದಿ ನಡೆದಿದೆ ನಿನಗೆ ಅರ್ಚನೆಯು  ಭಕ್ತತರ ನೋವು ನಿಗಿದೆ ನೀನು  ಪ್ರೀತಿಯ ಬದುಕು ಕರುಣಿಸಿದೆ ಯೇನು  ನೀನ್ನಯ ಒಲವಲಿ ಮಿಂದೇನು ನಾ  ಹೆಸರನು ಪಠಿಸಿ ಬೇಡಿದೆ ನಾ  ಯಾಕೋ ಇಂದು ಉಲ್ಲಾಸ್  ನಿನ್ನ ಹೆಸರಲ್ಲಿಯೇ ಇದೇ ಆತ್ಮವಿಶ್ವಾಸ  ಸಾವಿರ ನೋವಿಗೆ ಮದ್ದು ನೀ  ಸುಂದರವಾದ  ವಿದ್ಯೆಯು ನೀ ರುಚಿಸಿದೆ ರೊಟ್ಟಿ ನಿನ್ನಿಂದ  ಸವಿದೆ ನಾನು ಸೊಬಗಿನಿಂದ   ಬದುಕುವ ಅಸೆ ಭಗವಂತ  ನೀ ಕೊಟ್ಟಿರೋ ಭಿಕ್ಷೆ ಜೀವಂತ ನಿನ್ನಯ ಪಾದಕೆ ನಮಿಸಿದೆ ನಾ  ಕೋಟಿ ನಮನ ತಿಳಿಸಿದೆ ನಾ  **********ರಚನೆ ******* ಡಾ ಚಂದ್ರಶೇಖರ. ಸಿ. ಹೆಚ್

ಇದ್ದಾಗ ಸಾದಿಸು

Image
ಇದ್ದಾಗ ಸಾದಿಸು  ಸತ್ತಾಗ ಸುಟ್ಟರೆ ಬೂದಿಯಾಗುವೆ  ಊತಗ ಮಣ್ಣಲಿ ಮಣ್ಣಾಗುವೆ ಇದ್ದಾಗ ಏನಾದರೂ ಸಾದಿಸು  ಪ್ರಪಂಚದ ಒಳಿತಿಗಾಗಿ ಏನಾದರೂ ತಿಳಿಸು  ನೀನುಟ್ಟ ಬಟ್ಟೆ ನಿನಿಂದೆ ಬರಲಿಲ್ಲ  ನೀನಿಟ್ಟ ಗಂಟು ನೀ ಕೋಂಡಯೋಲಿಲ್ಲ  ನೀ ಮಾಡಿದ ಹೆಸರು ನಿನ್ನ ಕಥೆ ಹೇಳಿದೆಯೆಲ್ಲ  ನಿನ್ನ ಉಸಿರು ಯಾಕೋ ಇಂದು ಗಾಳಿಯಾಗಿದೆಯೆಲ್ಲ  ವಿಧಿ ಆಟ ಯಾರು ಬಲ್ಲವರಿಲ್ಲ  ಅವನಾಟದಂತೆ ಜೀವನ ನಡೆವುದೆಲ್ಲ  ಇದ್ದಾಗ ಬಾಳು ನೂರ ಜನ ಮೆಂಚುವಂತೆ  ಚಿಂತೆ ಬೇಡ ನಿನಗೆ ನೋಡಿ ನಗುವರೆಲ್ಲ  ಪ್ರೀತಿಸು ನಿನ್ನವರ ಬದುಕಿನ ಕೊನೆಯತನಕ  ಮರೆಯಾಗದಿರಲಿ ನಿನ್ನ ಹೆಸರು ಮರೆಯೋತನಕ  ಸಾದಿಸು ನೀನು ಕೊನೆ ಉಸಿರಿರುವತನಕ  ತೀರಿಸು ನೀನು ಈ ಮಣ್ಣ ಋಣ ಮುಗಿಯುವತನಕ  ನೋವ ಕೊಟ್ಟರು ನುಂಗಲಿ ದೇವರು  ಕಾಲು ಎಳೆಯೋರಿಗೆ ಕಾಲವೇ ಉತ್ತರಿಸಲಿ  ಪ್ರೀತಿ ಕೊಟ್ಟರು ಉಳಿಯಲಿ ಹೃದಯದಿ  ಪ್ರಾಣ ಹೋದಾಗ ತೆರೆಯಲಿ ಸ್ವರ್ಗ  ಮರೆತು ನೀನು ಹೋಗುವೆ ಈ ನರಕ ಸತ್ತಾಗ ಸುಟ್ಟರೆ ಬೂದಿಯಾಗುವೆ  ಊತಗ ಮಣ್ಣಲಿ ಮಣ್ಣಾಗುವೆ ಇದ್ದಾಗ ಏನಾದರೂ ಸಾದಿಸು  ಪ್ರಪಂಚದ ಒಳಿತಿಗಾಗಿ ಏನಾದರೂ ತಿಳಿಸು  ********ರಚನೆ. ******** ಡಾ. ಚಂದ್ರಶೇಖರ. ಸಿ. ಹೆಚ್