ಬದುಕ ರೈಲು
.jpeg)
ಹಳಿ ಮೇಲೆ ರೈಲೊಂದು ಓಡುತಿತ್ತು ಚುಕು ಬುಕು ಶಬ್ಧವ ಮಾಡುತಿತ್ತು ಮುಗಿಯದ ದಾರಿ ಸವೆಯದ ಗಾಲಿ ಗಾಳಿಯ ಸೀಳಿ ಮುಂದೆ ಸಾಗುತಿತ್ತು ಪಯಾಣಿಕರು ನೂರಾರು ಸುತ್ತುತ್ತ ಊರೂರು ಮುಂದೆ ಬರುವ ಸ್ಟಾಪ್ ಅಲ್ಲಿ ಇಳಿಯಿತಿತ್ತು ನಮ್ಮೂರು ಬಂತು ನಿಮ್ಮೂರು ಎಲ್ಲಿ ಎನ್ನುತ್ತಿತ್ತು ಎತ್ತ ನೋಡಿದರೂ ಜನರು ನಮ್ಮವರನ್ನು ಕೇಳುತ್ತಿತ್ತು ನೂರೆಂಟು ನೋವಲ್ಲಿ ಮನಗಳು ಮಿಡಿಯುತ್ತಿತ್ತು ದೇವರನು ನೆನೆಯುತ್ತಾ ನಿಟ್ಟುಸಿರ ಬಿಡುತ್ತಿತ್ತು ಕಾಣದ ಗೆಲುವು ಸೋಲು ಏಕೋ ಒಲವು ಹಳಿ ತಪ್ಪಿದ ಬದುಕು ಕೂಗಿ ಅಳುತ್ತಿತ್ತು ದಿಕ್ಕು ತಪ್ಪಿಸಿದೆ ವಿಧಿಯ ಶಪಿಸಿತಿತ್ತು ಕಾಶಿಗೆ ಹೊರಟಿಹೆವು ಶಿವನ ಕಾಣಲು ಜೀವನಕೆ ಮುಕ್ತಿಯು ಸಿಗುವುದೇ ಕೇಳುತ್ತಿತ್ತು ಸಾಕು ಈ ಜೀವನ ತಂದ ಸಿಹಿ ಒಲವು ಎದೆಯೊಡ್ಡಿ ಜೀವನ ಸೋತು ಗೆದ್ದ ಚಲವು ಯಾರ್ಯಾರು ಬರುವಿರಿ ಪರಶಿವನ ಪಾದಕೆ ಸಂತೋಷ ತುಂಬಿದ ಭಕ್ತಿಯ ಗುಡಿಗೆ ದ್ವೇಷ ಅಸೂಯೆ ಇಲ್ಲದ ದೂರದ ಜಗಕೆ ಸೋಲು ಗೆಲುವ ಇಲ್ಲದ ಸೂರಿನೆಡೆಗೆ ಹಳಿ ಮೇಲೆ ರೈಲೊಂದು ಓಡುತಿತ್ತು ಚುಕು ಬುಕು ಶಬ್ಧವ ಮಾಡುತಿತ್ತು ಮುಗಿಯದ ದಾರಿ ಸವೆಯದ ಗಾಲಿ ಗಾಳಿಯ ಸೀಳಿ ಮುಂದೆ ಸಾಗುತಿತ್ತು ************ರಚನೆ******** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ