ದೇಹವೆಂಬ ದೇಗುಲ

 



ದೇಹದೊಳಗೆ ಮನವು ಏಕೋ ಮಸಣವಾಗಿದೆ 

ಚಿಗುರಿದ ಆಸೆಗಳು ಕೊಳೆತು ಘಾಸಿಯಾಗಿದೆ

ಅರಳಿದ ಬಯಕೆಗಳು ಏಕೋ ನೆತ್ತರು ಕುಡಿದಿದೆ 

ಮಾತು ಬರದೆ ಮನವು ನೊಂದು ಮೌನವಾಗಿದೆ 


ಎದೆಯ ಬಡಿತ ಹೆದರಿ ಹೆದರಿ ಬಡಿದಿದೆ 

ರಕ್ತವೇಕೋ ನರಗಳಲ್ಲಿ ಬಿರುಸಿನಿಂದ ಓಡಿದೆ 

ನೋವಿನಿಂದ ಮೂಳೆಗಳು  ಸವೆದು ಹೋಗಿದೆ 

ಕೊಬ್ಬಿದ ಮಾಂಸಖಂಡ ಮುದುಡಿ ನಿಂತಿದೆ 


ಚರ್ಮವೆಲ್ಲ ಸುಕ್ಕುಗಟ್ಟಿ ವಯಸ್ಸು ಏಕೋ ಕರೆದಿದೆ 

ಕಣ್ಣು ಹೇಗೋ ಮೌನವಾಗಿ ಮೂಕ ಕತೆ ಹೇಳಿದೆ 

ನಾಲಿಗೆಯು ಹೆದರಿ ತೋಡರಿ ಮೌನದಿಂದ ತುಂಬಿದೆ

ತುಟಿಗಳೇಕೋ ಬತ್ತಿ ಬರಡು ಭೂಮಿಯಾಗಿದೆ 


ಶ್ವಾಸದಲ್ಲಿ ಗಾಳಿ ಸುಮ್ಮನೆ ಸಿಲುಕಿ ನುಸುಳಿದೆ 

ದೇಹವೆಲ್ಲ ನಲುಗಿ-ನಲುಗಿ ನರಳಿ ನರಳಿ ನಿಂತಿದೆ 

ಕೈಕಾಲು ಎರಡು ಕೂಡ ದೇವರನ್ನು ಕರೆದಿದೆ 

ದೇಹವೆಲ್ಲ ಚದುರಿ ಆರು ಮುರಡಿ ಗುಂಡಿ ಬೇಡಿದೆ 


ಬ್ರಹ್ಮ ಹಣೆಬರಹ ಬರೆದನೆ ಏಕೆ ಹೀಗೆ 

ವಿಧಿಯ ಆಟವನ್ನು ಮಟ್ಟ ಹಾಕುವುದೇಗೆ

ಕಟ್ಟಬೇಕೆ ಇಲ್ಲಿ ನಾವು ಬಿದಿರು ಚಟ್ಟವ 

ಹೊರಡಬೇಕೆ ಇಲ್ಲಿಂದ ನಾವು ನೆನೆದು ದೈವವ


*********ರಚನೆ********* 

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ