ನಮ್ಮ ರೈತನು

 


ರೈತನು ರೈತನು ನಮ್ಮ ರೈತನು

ರೈತನು ರೈತನು ದೇಶದ ಉಸಿರು ರೈತನು


ಬೆವರ ಹನಿಯು ಬಿದ್ದರೇನೆ ರೈತ ಎನುವುದು 

ನೇಗಿಲನ್ನು ಇಡಿದರೇನೆ ಹುಳುಮೆ ನಗುವುದು

ಬೀಜ ಬಿತ್ತಿ ಪೈರು ಹುಟ್ಟಿ ತೇನೆಯು ಕುಣಿವುದು 

ಕೊಯ್ದ ಪೈರು ಪಸಲು ಆದ್ರೆ ರೈತ ಗೆಲುವುದು 


ರೈತನು ರೈತನು ನಮ್ಮ ರೈತನು

ರೈತನು ರೈತನು ದೇಶದ ಉಸಿರು ರೈತನು


ಜಗಕೆ ಅನ್ನ ನೀಡೋ ದಣಿಯು ತಾನೆ ನಮ್ಮ ರೈತನು

ಜೀವ ತೈದೂ ಸಾಲ ಮಾಡಿ ನೇಣಿಗೆ ಸತ್ತನು

ಹಸಿರು ಬೆಳೆದು ಕೆಸರು ತುಳಿದು ಬದುಕಿ ಬಿಟ್ಟನು 

ಗೋವು ಸಾಕಿ ಸಗಣಿ ಎತ್ತಿ ಪೈರಿಗೆ ಇಟ್ಟನು 


ರೈತನು ರೈತನು ನಮ್ಮ ರೈತನು

ರೈತನು ರೈತನು ದೇಶದ ಉಸಿರು ರೈತನು


ನೋಡಿದರೆ ಕೊಳಕು ಬಟ್ಟೆ ತೊಟ್ಟು ನಡೆದನು

ಮೈಮೇಲೆ ಹಸಿರು ಹುಲ್ಲು ತಂದು ಎತ್ತಿಗೆ ಇಟ್ಟನು

ಮುದ್ದೆ ರೊಟ್ಟಿ ತಿಂದು ಗಟ್ಟಿ ನಮ್ಮ ರೈತನು

ಬರಡು ಭೂಮಿಯಲ್ಲಿ ಚಿನ್ನ ತೆಗೆದನು


ರೈತನು ರೈತನು ನಮ್ಮ ರೈತನು

ರೈತನು ರೈತನು ದೇಶದ ಉಸಿರು ರೈತನು


ಗೋಳಿನ ಬದುಕು ಕಂಡು ನಿಟ್ಟುಸಿರು ಬಿಟ್ಟನು

ಸಾಲಕಾಗಿ ಬ್ಯಾಂಕಿಗೆ ಮನೆಯ ಒತ್ತೆ ಇಟ್ಟನು 

ಬೆಳೆಗೆ ಬೆಂಬಲ ಬೆಲೆ ಸಿಗದೆ ದಾರಿಗೆ ಸುರಿದನು

ಏಳು ಬೀಳು ಜೀವನ ಕಂಡು ಬಾಳಲಿ ಸೋತನು 


ರೈತನು ರೈತನು ನಮ್ಮ ರೈತನು

ರೈತನು ರೈತನು ದೇಶದ ಉಸಿರು ರೈತನು


ನಮ್ಮ ಆಸ್ತಿ ನಾವು ತಿನ್ನುವ ಅಹಾರ ನಮ್ಮ ರೈತನು

ನಾಡಿಗಾಗಿ ಜೀವ ಒತ್ತೆ ಇಟ್ಟ ಬಾಳಿದ ನಮ್ಮ ರೈತನು 

ಭಾಷೆ ಬೇದ ಜಾತಿ ಬೇದ ಮರೆತ ವೀರ ರೈತನು

ಮೋಸ ಕಪಟ ಇಲ್ಲದ ಶೂರ ನಮ್ಮ ರೈತನು


ರೈತನು ರೈತನು ನಮ್ಮ ರೈತನು

ರೈತನು ರೈತನು ದೇಶದ ಉಸಿರು ರೈತನು


*********ರಚನೆ**********

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Post a Comment

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ