ಓ ಮಲ್ಲಿಗೆ
ಊರ ಹೇರಿ ಹೂವ ಬನದಾಗ
ಮಲ್ಲಿಗೆ ಒಂದು ನಗುತ್ತಿತ್ತು
ಹಸಿರೆಲೆಯ ತುಂಬಾ ಅರಳಿ ಘಮ್ಮ
ಎಂದು ಸುವಾಸನೆ ಬೀರಿತ್ತು
ಬಿಳಿಯ ಬಣ್ಣದ ಮಲ್ಲಿಗೆ ಎಲ್ಲಾರ
ಮನವ ಸೆಳೆದಿತ್ತು ಗಲ್ಲಿಗೆ
ದುಂಬಿಯು ದಾರೀಲಿ ಬರುತ ಕಣ್ಣ
ಅಂಚಲಿ ಸಂಚು ಮಾಡಿತ್ತು
ಅರ್ಪಿಸಿದರೆ ದೇವರ ಮೈಮೇಲೆ
ನಗು ನಗುತ ಬಾಳತೀನಿ
ಘಮ್ಮನೆ ನೀರೆಯ ಜಡೆ
ಏರಿ ಕುಳಿತು ಬೀಗತ್ನಿ
ಅರಳಿದರೆ ಜನನ
ಬಾಡಿದರೆ ಮರಣ
ಮುಡಿದರೆ ನಗುತಿನಿ
ಬಾಡಿದಾರೆ ಅಳುತೀನಿ
ಮೊದಲ ರಾತ್ರಿ ಮುಡಿಯೇರಿ
ಹಾಸಿಗೆಯಲ್ಲಿ ಕೊನೆಸೇರಿ
ಕೆರಳಿದ ಹೃದಯದಿ ಕನಸಿನ
ಅಲೆಯೊಂದು ಮೂಡಿತ್ತು
ಬದುಕಲ್ಲಿ ತಣ್ಣನೆಯ ಗಾಳಿಯ
ಘಮ ಬೀರಿತು
ಮುಖದಲ್ಲಿ ಮಂದಹಾಸ
ಜೀವನದಿ ಹೊಸ ಹರ್ಷ ತಂದಿತು
ಕಂಗಳಲಿ ಕುಡಿನೋಟ
ಚೆಂದದ ಮೈಮಾಟ
ಅರಳಿದ ಮನಸೋ
ಚೆಲುವಾದ ನನಸೋ
ಬಾಳೊಂದು ಬಂಗಾರ
ಬಣ್ಣದ ಕಾಮನಬಿಲ್ಲ ಸಂಚಾರ
ಮೈಲಿಗೆ ಮನಕೇನು
ಅರಳಿದ ತನು ನೀನು
***********ರಚನೆ*********
ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments
Post a Comment