Posts

ದೀಪ ಬೆಳಗಿತೆ

Image
  ಮನದ ಒಳಗೆ ಒತ್ತಿದ ಹಣತೆ  ಉರಿಯಿತು ವಿಷದ ನಂಜಲ್ಲೇ  ದ್ವೇಷದ ಕಾವು ಹಚ್ಚಿತು ಕಿಚ್ಚು  ಕಾಣದೆ ನೋವಿನ ಮರೆಯಲ್ಲೇ  ಪ್ರೀತಿಗೆ ಸಿಲುಕಿದ ಒಲವಿನ ಹೂವು ಬಾಡಿತು  ಹೃದಯದ ರಕ್ತದ ಮಡಿಲಲ್ಲೇ  ಕನಸಿನ ಗೋಪುರ ಕುಸಿದು  ಕುಳಿತಿತು ನಿನ್ನಯ ನೆನಪಲ್ಲೇ  ಕಾಲವು ಹೇಳಿತು ಉತ್ತರ  ಮಾಸಿದ ನೆತ್ತರ ಮಸಿಯಲ್ಲೇ  ಕಾದ ನೆನಪಿನ ಕಾವಲಿಗೆ ಕೊನೆ ಬದುಕಿನ ಚಿಂತೆಯ ಚಿತೆಯಲ್ಲೆ  ಯಾರು ಇಲ್ಲದ ಬದುಕು ತಂದೀತು   ಏಕೋ ಮಸಣದ  ನೋವೋಂದ  ಘೋರಿಯು ಕೂಗಿ ಹೇಳಿತು ಬೆಂದ ಸಾವಿನ ಕಥೆಯೊಂದ  ದೀಪವು ಬೆಳಗಿತೆ ಬಾಳಲಿ ಮತ್ತೆ ಹೊಸ ಆಸೆಯ ಮಡಿಲಲ್ಲೆ  ಪ್ರಕೃತಿ ಚೈತ್ರವು ಚಿಗುರಿತು ಮತ್ತೇ  ಹೊಸ ಬೆಳಕಿನ ಪ್ರೀತಿಯ ಕಡಲಲ್ಲೇ  ***********ರಚನೆ******** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಜ್ವಾಲೆ ಸುಡುತ್ತಿದೆ

Image
  ಎದೆಯ ಒಳಗೆ ಬೆಂಕಿ ಹತ್ತಿದೆ  ವಿಷದ ಜ್ವಾಲೆಯು ಸುಡುತ್ತಿದೆ  ಮಳೆಯ ನೀರು, ಮೈಯಿಗೆ ಬಿದ್ದರೆ  ಕಣ್ಣ ನೀರು ನಿಂತು ಬಿಡುವುದೇ ಹರಿವ ನದಿಯು ಕಟ್ಟೇ ಹೊಡೆದು  ಹಸಿರು ಪೈರಿನ ಬಸಿರ ತೆಗೆವುದೇ  ಯಾರು ಬಲ್ಲರೂ ವಿಧಿಯಾಟ  ಮೂರು ದಿನದ ಈ ಬದುಕ ದಾರಿಯಲ್ಲಿ  ವಿಷದ ಕಿಡಿಯಲಿ ಬೆಂಕಿ ಉರಿದಿದೆ  ದ್ವೇಷವೆಕೋ ನೆತ್ತರು ಬೇಡಿದೆ ಮೂರು ದಿನದ ಈ ಬದುಕಲಿ ಯಾರಿಗಿಲ್ಲ ಯಾರು ಜೊತೆಯಲ್ಲಿ ಯಾರು ಹೆತ್ತರು ಎಷ್ಟು ಅತ್ತರು ಬಾಳಲಿ  ಮೂರಡಿ ಆರಡಿ ಗುಂಡಿ ಸಿಗುವುದು ಇಲ್ಲಿ  ಮನುಜ ನಿನ್ನ ಅಟ್ಟಹಾಸಕ್ಕೆ ಕೊನೆಯೆಲ್ಲಿ  ದೈವ ಏಕೋ ನೋಡಿ ನಗುತಿಹನು ಕೊನೆಯಲಿ  ************ರಚನೆ*************   ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ನೋವ ಸಹಿಸಿ

Image
  ಎದೆಯಾ ಒಳಗೆ ಮೌನದ  ಮಾತು ನೂರು  ನೋವ ಸಹಿಸಿ ಉರಿದಂತಿತ್ತು  ಚಿಂತೆಯ ಚೂರು ಸಾವಿರ ವಿರಹದ ವ್ಯಥೆಗೆ  ಸುಟ್ಟವರು ಯಾರು  ನಗುವಿನ ಇಂದಿನ ಸಂಕಟಕ್ಕೆ  ಬೆಲೆ ತೆತ್ತವರು ಯಾರು  ನ್ಯಾಯ ನೀತಿಯ ನಡುವೆ  ಮುನಿಸುಗಳು ಎಷ್ಟೋ  ಪ್ರೀತಿ ಪ್ರೇಮದ ನೆಪದಿ  ಬೆಂದ ಕನಸುಗಳು ಎಷ್ಟೋ  ನಿನ್ನ ನೋವನ್ನು ಅಳಿಸುವೆ  ನಾನು ಬಿಡದೆ  ಕಣ್ಣ ನೀರನ್ನು ಹೊರೆಸುವೆ  ನಾನು ಕೊನೆಗೆ  ಬಾಳು ಬದುಕಿನಲ್ಲಿ ಮನಕೆ  ಬಂದ ಹಾಗೆ ದೂಕು ದಿನಗಳನ್ನು ನೆಮ್ಮದಿ  ಹುಡುಕಿ ನಿನಗೆ  ***********ರಚನೆ *********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ನನ್ನ ಹಾಡು

Image
  ಬರೆಯಲು ಹೊರಟೆ ಪದವ ತೆಗೆದು ಜ್ಞಾನದ ಸವಿ ಕದವ  ಪದಗಳಲ್ಲಿ ಇತ್ತು ಸೊಬಗು  ಮೋಡಿ ಮಾಡುವ ಚಿನ್ನದ ಬೆರಗು  ಪದಗಳಿಗೆ ಹಾಡಿನ ಮೆರಗು  ಹಾಡಿದ ಹಾಡು ನೀ ಗುನುಗು  ಮನವು ಕುಣಿಯಿತು ಪದಕ್ಕೆ  ಜಗವು ಉರಿಯಿತು ಕುಣಿಕೆ  ಯಾರೋ ಕೂಗಿ ಕರೆದಂತೆ ನನ್ನ  ಬದುಕು ಬಣ್ಣದ ಸವಿ ಚಿನ್ನ  ನೋಡು ಬಾ ನಮ್ಮೂರ ತೇರು  ಹಾಡಿನ ಗೀತೆಗಳು ಬಲು ಜೋರು  ನನ್ನ ನಾ ಮರೆತಂತೆ ಏಕೋ  ನಿನ್ನಲಿ ನಾ ಬೆರೆತಂತೆ ಬೇಕೋ ಚಲಿಸಿತು ಜೀವನದ ಬಂಡಿ  ಬೆಳಗಿತು ಹಣತೆಯ ಕಿಂಡಿ *************ರಚನೆ***********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಓದುವ ಪುಸ್ತಕ

Image
ನೂರು ಪದಗಳ ಹುಡುಕಿ  ಬರೆದೆ ಅರ್ಥವು ನಗುತಿದೆ  ನೂರು ಗೀತೆ ಹಾಡಲು  ಯಾರು ಇಲ್ಲದೆ ಕೊರಗಿದೆ  ಓದು ಬರಹ ವಿದ್ಯೆಯೆ ಏಕೋ ಸೊರಗಿ ಕುಂತಿದೆ  ಕನಸು ಕಾಣುವ ವಯಸ್ಸು  ಏಕೋ ಕುಂತು ಅಳುತಿದೆ  ಓದುವ ಹೃದಯ ಸೊರಗಿ ಅಕ್ಷರಗಳಿಗೆ ಬೆಲೆ ಎಲ್ಲಿದೆ  ನೂರು ಪುಟಗಳ ತುಂಬಿದರೇನು  ಓದುವ ಮನಸುಗಳಿಲ್ಲದೆ ಅಳುವ ಪುಸ್ತಕ ಎದ್ದು  ನಿಂತು ಕೂಗಿ ಕರೆದಿದೆ  ಬಾರೋ ಗೆಳೆಯ ಓದು ದೇಶವ ಕಟ್ಟುವ ನಾಳೆ ನಮ್ಮದೇ  *********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -50

Image
ನೆಗೆದು ನೆಗದು ಜಿಗಿದು ಜಿಗಿದು  ಓಡುತಿರುವೆ ಏಕೆ ಕಂದಮ್ಮ  ಗುಡಿಯಲ್ಲಿ ಗಣಪ ಕಾಯುತಿಹನು  ಬಾರೆ ಹೋಗೋಣ ಚಿನ್ನಮ್ಮ  ನೀರಲ್ಲಿ ಬೆಳಕು ಚುಮ್ಮುತಿಹುದು  ಬಣ್ಣ ಬಣ್ಣದ ನೀರು ಸುರಿಯುತಿಹುದು  ನೋಡಲು ಚಂದ ಬಾರಮ್ಮ  ಕುಣಿದು ಕುಣಿದು ಆಡು ಬಾರೆ ಕಂದಮ್ಮ  ಗಣಪನ ಪೂಜೆ ಮುಗಿದಿಹುದು  ಪಲ್ಲಾರವೆಲ್ಲ  ಅಂಚಿಹುದು  ತಿನ್ನುವ ಬಾರೆ ಚಿನ್ನಮ್ಮ  ಜಗಿದು  ತಿನ್ನು ಕಂದಮ್ಮ  ಭಾರೆ ಮನೆಗೆ ಹೋಗೋಣ  ಮುದ್ದು ನಗುವಿನ ಕಂದಮ್ಮ  ಮತ್ತೆ ನಾಳೆ ಬರೋಣ  ಗಣಪನ ಪೂಜೆ ಮಾಡೋಣ **********ರಚನೆ**********  ಡಾ. ಚಂದ್ರಶೇಖರ ಚನ್ನಾಪುರ ಹಾಲಪ್ಪ

ಪಯಣ ಸೋತಿದೆ

Image
  ನೋವು ಏಕೋ ಭಾರವಾಗಿ  ಮನಸು ಮೌನವಾಗಿದೆ  ಹೃದಯವೇಕೋ ಬಡಿದು ಬಡಿದು  ಕಣ್ಣ ನೀರು ಅಳುತಿದೆ  ಪಯಣದಲ್ಲಿ ಯಾರಿಗೆ ಯಾರೋ  ದಾರಿ ದೂರವಾಗಿದೆ  ನಡುವೆ ಬಂದ ಎಡರು ತೊಡರು ದಾರಿ ದೂಡುವಂತಿದೆ ಕಾಣದ ಊರ ನೆನೆದು ನೆನೆದು  ಕಾಲ ಏಕೋ ಸೋತಿದೆ  ಎದೆಯ ಗಾಯ ಜಿನುಗಿ ಜಿನುಗಿ  ದೀಪ ಒಂದು ಉರಿದಿದೆ  ಸತ್ತ ಮೇಲೆ ಒತ್ತಿದ ಹಣತೆ  ಯಾರಿಗಾಗಿ ಬೆಳಕು ನೀಡಿದೆ ಮಳೆ ಇಲ್ಲದೆ ಬಿತ್ತಿದ ಬೀಜ  ಮಣ್ಣಿನಲ್ಲಿ ಮಣ್ಣಾಗಿದೆ ಮೂರು ದಿನದ ಬಣ್ಣದ ಬದುಕು ಯಾರಿಗಾಗಿ ಕಾಲ ಕೇಳಿದೆ  ನಿನ್ನ ನೀನು ಅರಿತು ಕಲಿತು  ಮಾಯವಾಗು ಎಂದಿದೆ ***********ರಚನೆ********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ