ಜ್ವಾಲೆ ಸುಡುತ್ತಿದೆ

 



ಎದೆಯ ಒಳಗೆ ಬೆಂಕಿ ಹತ್ತಿದೆ 

ವಿಷದ ಜ್ವಾಲೆಯು ಸುಡುತ್ತಿದೆ 

ಮಳೆಯ ನೀರು, ಮೈಯಿಗೆ ಬಿದ್ದರೆ 

ಕಣ್ಣ ನೀರು ನಿಂತು ಬಿಡುವುದೇ


ಹರಿವ ನದಿಯು ಕಟ್ಟೇ ಹೊಡೆದು 

ಹಸಿರು ಪೈರಿನ ಬಸಿರ ತೆಗೆವುದೇ 

ಯಾರು ಬಲ್ಲರೂ ವಿಧಿಯಾಟ 

ಮೂರು ದಿನದ ಈ ಬದುಕ ದಾರಿಯಲ್ಲಿ 


ವಿಷದ ಕಿಡಿಯಲಿ ಬೆಂಕಿ ಉರಿದಿದೆ 

ದ್ವೇಷವೆಕೋ ನೆತ್ತರು ಬೇಡಿದೆ

ಮೂರು ದಿನದ ಈ ಬದುಕಲಿ

ಯಾರಿಗಿಲ್ಲ ಯಾರು ಜೊತೆಯಲ್ಲಿ


ಯಾರು ಹೆತ್ತರು ಎಷ್ಟು ಅತ್ತರು ಬಾಳಲಿ 

ಮೂರಡಿ ಆರಡಿ ಗುಂಡಿ ಸಿಗುವುದು ಇಲ್ಲಿ 

ಮನುಜ ನಿನ್ನ ಅಟ್ಟಹಾಸಕ್ಕೆ ಕೊನೆಯೆಲ್ಲಿ 

ದೈವ ಏಕೋ ನೋಡಿ ನಗುತಿಹನು ಕೊನೆಯಲಿ 


************ರಚನೆ************* 

 ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ