ನನ್ನ ಹಾಡು
ಬರೆಯಲು ಹೊರಟೆ ಪದವ
ತೆಗೆದು ಜ್ಞಾನದ ಸವಿ ಕದವ
ಪದಗಳಲ್ಲಿ ಇತ್ತು ಸೊಬಗು
ಮೋಡಿ ಮಾಡುವ ಚಿನ್ನದ ಬೆರಗು
ಪದಗಳಿಗೆ ಹಾಡಿನ ಮೆರಗು
ಹಾಡಿದ ಹಾಡು ನೀ ಗುನುಗು
ಮನವು ಕುಣಿಯಿತು ಪದಕ್ಕೆ
ಜಗವು ಉರಿಯಿತು ಕುಣಿಕೆ
ಯಾರೋ ಕೂಗಿ ಕರೆದಂತೆ ನನ್ನ
ಬದುಕು ಬಣ್ಣದ ಸವಿ ಚಿನ್ನ
ನೋಡು ಬಾ ನಮ್ಮೂರ ತೇರು
ಹಾಡಿನ ಗೀತೆಗಳು ಬಲು ಜೋರು
ನನ್ನ ನಾ ಮರೆತಂತೆ ಏಕೋ
ನಿನ್ನಲಿ ನಾ ಬೆರೆತಂತೆ ಬೇಕೋ
ಚಲಿಸಿತು ಜೀವನದ ಬಂಡಿ
ಬೆಳಗಿತು ಹಣತೆಯ ಕಿಂಡಿ
*************ರಚನೆ***********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment