ದೀಪ ಬೆಳಗಿತೆ
ಮನದ ಒಳಗೆ ಒತ್ತಿದ ಹಣತೆ
ಉರಿಯಿತು ವಿಷದ ನಂಜಲ್ಲೇ
ದ್ವೇಷದ ಕಾವು ಹಚ್ಚಿತು ಕಿಚ್ಚು
ಕಾಣದೆ ನೋವಿನ ಮರೆಯಲ್ಲೇ
ಪ್ರೀತಿಗೆ ಸಿಲುಕಿದ ಒಲವಿನ ಹೂವು
ಬಾಡಿತು ಹೃದಯದ ರಕ್ತದ ಮಡಿಲಲ್ಲೇ
ಕನಸಿನ ಗೋಪುರ ಕುಸಿದು
ಕುಳಿತಿತು ನಿನ್ನಯ ನೆನಪಲ್ಲೇ
ಕಾಲವು ಹೇಳಿತು ಉತ್ತರ
ಮಾಸಿದ ನೆತ್ತರ ಮಸಿಯಲ್ಲೇ
ಕಾದ ನೆನಪಿನ ಕಾವಲಿಗೆ ಕೊನೆ
ಬದುಕಿನ ಚಿಂತೆಯ ಚಿತೆಯಲ್ಲೆ
ಯಾರು ಇಲ್ಲದ ಬದುಕು ತಂದೀತು
ಏಕೋ ಮಸಣದ ನೋವೋಂದ
ಘೋರಿಯು ಕೂಗಿ ಹೇಳಿತು
ಬೆಂದ ಸಾವಿನ ಕಥೆಯೊಂದ
ದೀಪವು ಬೆಳಗಿತೆ ಬಾಳಲಿ ಮತ್ತೆ
ಹೊಸ ಆಸೆಯ ಮಡಿಲಲ್ಲೆ
ಪ್ರಕೃತಿ ಚೈತ್ರವು ಚಿಗುರಿತು ಮತ್ತೇ
ಹೊಸ ಬೆಳಕಿನ ಪ್ರೀತಿಯ ಕಡಲಲ್ಲೇ
***********ರಚನೆ********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Vary nice sir 👌 👍
ReplyDelete