ನೋವ ಸಹಿಸಿ
ಎದೆಯಾ ಒಳಗೆ ಮೌನದ
ಮಾತು ನೂರು
ನೋವ ಸಹಿಸಿ ಉರಿದಂತಿತ್ತು
ಚಿಂತೆಯ ಚೂರು
ಸಾವಿರ ವಿರಹದ ವ್ಯಥೆಗೆ
ಸುಟ್ಟವರು ಯಾರು
ನಗುವಿನ ಇಂದಿನ ಸಂಕಟಕ್ಕೆ
ಬೆಲೆ ತೆತ್ತವರು ಯಾರು
ನ್ಯಾಯ ನೀತಿಯ ನಡುವೆ
ಮುನಿಸುಗಳು ಎಷ್ಟೋ
ಪ್ರೀತಿ ಪ್ರೇಮದ ನೆಪದಿ
ಬೆಂದ ಕನಸುಗಳು ಎಷ್ಟೋ
ನಿನ್ನ ನೋವನ್ನು ಅಳಿಸುವೆ
ನಾನು ಬಿಡದೆ
ಕಣ್ಣ ನೀರನ್ನು ಹೊರೆಸುವೆ
ನಾನು ಕೊನೆಗೆ
ಬಾಳು ಬದುಕಿನಲ್ಲಿ ಮನಕೆ
ಬಂದ ಹಾಗೆ
ದೂಕು ದಿನಗಳನ್ನು ನೆಮ್ಮದಿ
ಹುಡುಕಿ ನಿನಗೆ
***********ರಚನೆ ***********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment