ಓದುವ ಪುಸ್ತಕ
ನೂರು ಪದಗಳ ಹುಡುಕಿ
ಬರೆದೆ ಅರ್ಥವು ನಗುತಿದೆ
ನೂರು ಗೀತೆ ಹಾಡಲು
ಯಾರು ಇಲ್ಲದೆ ಕೊರಗಿದೆ
ಓದು ಬರಹ ವಿದ್ಯೆಯೆ
ಏಕೋ ಸೊರಗಿ ಕುಂತಿದೆ
ಕನಸು ಕಾಣುವ ವಯಸ್ಸು
ಏಕೋ ಕುಂತು ಅಳುತಿದೆ
ಓದುವ ಹೃದಯ ಸೊರಗಿ
ಅಕ್ಷರಗಳಿಗೆ ಬೆಲೆ ಎಲ್ಲಿದೆ
ನೂರು ಪುಟಗಳ ತುಂಬಿದರೇನು
ಓದುವ ಮನಸುಗಳಿಲ್ಲದೆ
ಅಳುವ ಪುಸ್ತಕ ಎದ್ದು
ನಿಂತು ಕೂಗಿ ಕರೆದಿದೆ
ಬಾರೋ ಗೆಳೆಯ ಓದು ದೇಶವ
ಕಟ್ಟುವ ನಾಳೆ ನಮ್ಮದೇ
*********ರಚನೆ**********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment