Posts

ನೆನಪು

Image
  ನೂರು ನೆನಪು ಮೂಡಿದೆ ಮನದ ಕಡಲಲಿ  ಹೃದಯ ಏಕೋ ಬಡಿದಿದೆ ಜೀವದ ಹಡಗಲಿ  ಕಾಣೆ ನಾನು ಕನಸ ಒಂದೂ ಎದೆಯ ಗೂಡಲಿ  ನೋವು ಬಂದು ತಾಗಿದೆ ಮನಸ್ಸ ಮಡಿಲಲಿ ದಾರಿ ನೂರು ಕಾಣುತ್ತಿದೆ ಎತ್ತ ಹೇಗೆ ಸಾಗಲಿ  ಗುರಿಯ ನಾನು ಮುಟ್ಟುವೆನೆ ಯಾರ ಕೇಳಲಿ  ಕಾಲವೊಂದು ಓಡುತಿದೆ ನೆನಪುಗಳ ಬಿಟ್ಟಿ  ನೆನಪು ಮನಸ್ಸ ಕೇದಕುತಿದೆ ನನ್ನ ನಗುವ ಸುಟ್ಟಿ  ಯಾರಿಗೆ ಹೇಳಲಿ ನೆತ್ತರಿನ ನೋವನು ಬದುಕು ಕಲಿಸುತ್ತಿದೆ  ಪಾಠ ಬಿತ್ತಿ ಪೈರನು  ಬಾಳ ಬಂಡಿಯಲಿ ಹಚ್ಚ ಹಸಿರು ತುಂಬದೇ  ಎತ್ತ ನೋಡಿದರೂ ಜೀವ ಬೆಂಕಿ ಸುಡುತ್ತಿದೆ  ಕಣ್ಣ ನೀರು ಬತ್ತಿದೆ  ಬೆಳಕ ಜಾಡಲಿ  ಮುಖುವು ಸುಕ್ಕು ಗಟ್ಟಿದೆ ಬಿಸಿಲ ಜಳದಲಿ  ಹೊಳಪು ಈಗ ಎಲ್ಲಿದೆ ಬಾಳ ಬೆಳಕಲಿ ಕಪ್ಪು ಈಗ ತುಂಬಿದೆ ನೋವ ಬದುಕಲಿ **********ರಚನೆ******** ಡಾ. ಚಂದ್ರಶೇಖರ್ ಸಿ. ಹೆಚ್

ನೆಮ್ಮದಿ ಎಲ್ಲಿದೆ

Image
  ನೆಮ್ಮದಿಯ ಹುಡುಕುತ ಮನವು ಕೂತಿರಲು ಒಲವಿನಲಿ ನೊಂದು ಬೇಯುತ ಕನಸು ಅರಳಿರಲು ಚೆಲುವೊಂದು ಏಕೋ ಏನೋ ಕೂಗಿ ಕರೆದಿರಲು ಹಗಲುಗಳು ಕತ್ತಲೆಯಾಗಿ ಭೂಮಿ ಅಳುತಿರಲು  ನೊವೊಂದು ಬಳಿ ಬಂದು ಹೃದಯವ ಕೊಲ್ಲುತ್ತಿದೆ  ಕಣ್ಣಿರಲಿ ಮುಳುಗಿದ ಬದುಕು ದಾರಿ ತಪ್ಪುತ್ತಿದೆ ಎಲ್ಲಿ ನೋಡಿದರು ವೇದನೆಯ ನರಳಾಟ  ಕನಸುಗಳ ಕಿತ್ತ ಮಗುವಿನ ಕಂಬನಿ ಗೋಳಾಟ  ಅಕ್ಕರೆ ಇಲ್ಲದ ಜೀವನ ಸೊಕ್ಕಿದೆ ಪಯಣದಲ್ಲಿ  ಬಾಳಿನಲಿ ಸಕ್ಕರೆ ಕಾಣುವುದು ಎಂದು ಕೊನೆಗಿಲ್ಲಿ ನೂರೆಂಟು ಎಡರು ತೊಡರು ಹಾಗೆ ನಮಗಿಲ್ಲಿ ಬಾಳ ಬಂಡಿಯ ಎಳೆಯಲು ಹೊರಟವಗೆ ಸಾವಿಲ್ಲಿ  ಎಲ್ಲಿ ನೋಡಿದರೂ ನೆತ್ತರ ಹೊಳೆ ಹರಿಯುತಿದೆ  ದಾಟಲು ಹೋದವಗೆ  ಬಂದು ಜೀವ ಹಿಂಡುತಿದೆ ಬದುಕಿನಲ್ಲಿ ಈಗ ಏಕೋ ಉಸಿರು ಸಿಕ್ಕಂತೆ  ಬೊಂಬೆ ಆಡಿಸುವವನು ನಮ್ಮ ನೋಡಿ ನಕ್ಕಂತೆ **********ರಚನೆ********** ಡಾ. ಚಂದ್ರಶೇಖರ್. ಸಿ.ಹೆ ಚ್

ಮನದ ಕವಿತೆ

Image
  ಮನದ ಒಳಗೆ ನೋವಿನ ಕವಿತೆ  ಹೊರಗೆ ಬರಲು ಅಳುತಾ ಚಿಂತೆ ಸಾವಿನ  ಬದುಕ ಅಂತೆ ಕಂತೆ  ಮಾಗಿದ ಘಾಯವು ಪ್ರೀತಿ ತಂತೆ  ಉತ್ತರ ಹುಡುಕಲು ನೂರು ಯೋಚನೆ ಬದುಕಿನ ಪಯಣ ಸುಡುತಿದೆ ಸುಮ್ಮನೆ  ಮರಣವು ಬಂದರೆ ಜೀವನ ತಣ್ಣನೇ  ಮಾಗಿದ ಬದುಕು ನೂಕು ನೀ ಕಾಲವನೆ  ನೆನಪುಗಳು ನೂರು ಜೀವ ಹಿಂಡಿದೆ  ಬಯಕೆಗಳು ಬಂದು ನೆತ್ತರು ಹೀರಿದೆ  ಮನವು ಏಕೋ ಕಣ್ಣ ಹನಿ ತಂದಿದೆ ಆಗಸದ ಸೂರು ಹನಿಯ ನೂಕಿದೆ ಓಡಿದೆ ಪಯಣ ದಾರಿ ಕಾಣದೆ ಬರಡು ಜೀವ ಬದುಕಾ ಕುಡಿದಿದೆ ಗುರಿಯು ಇಲ್ಲದ ದಾರಿ ಮುಂದಿದೆ  ಮುಟ್ಟುವೇನೆ  ಒಲವ  ತೀರಾ ಎಂದಿದೆ  ************ರಚನೆ*******       ಡಾ. ಚಂದ್ರಶೇಖರ್ ಸಿ. ಹೆಚ್

ಚುಟುಕು ಕವನ-64

Image
             🌹ರಜಾ 🌹 ಮೂಡದ ಆಸೆಗಳಿಗೆ ಕಣ್ಣೀರ ರಜಾ ಬದುಕಿನ ಭಾವನೆಗಳಿಗೆ ನಗುವೆ ಸಜಾ ಬಾಳಿನ ಒಲವಿಗೆ ಖುಷಿಯ ಕ್ಷಣ ಮಜಾ  ನೋವಿನ ವ್ಯಥೆಗೆ ಕಂಬನಿ ಮಿಡಿತ ನಿಜಾ                🌹ಆಸೆ 🌹 ನೂರು ಆಸೆ ತಂದೆ ಪ್ರೀತಿಯ ಒಲವೇ ನನ್ನೇ ನಾನು ಗೆದ್ದಂತ ಏನೋ ಗೆಲುವೇ  ಕಾಣದ ದೇವರು ನನ್ನ ಕೈಯ ಇಡಿದಂತೆ  ಮರೆಯಾಯಿತು ಈಗ ಎಲ್ಲಾ ಚಿಂತೆ               🌹 ಸೋಲು 🌹 ಸೋಲು ಗೆಲುವು ಬಾಳಲಿ ಸಹಜ ಅರಿತು ಬಾಳು ನೀನು ಮನುಜ ಬಿದ್ದರೆ ಎಲ್ಲಾ ಮುಗಿದು ಹೋಯಿತೇ  ಬೀಳದೆ ಹೋದರೆ ಎಲ್ಲಾ ಹಾಯಿತೇ  **†****ರಚನೆ********** ಡಾ. ಚಂದ್ರಶೇಖರ್. ಸಿ. ಹೆಚ್

ಚುಟುಕು ಕವನ-62

Image
        🌹 ಗುಟ್ಟು 🌹 ಜೀವನ ಎಂಬುದು ಯಾರಿಗು ತಿಳಿಯದ ಗುಟ್ಟು ಬದುಕು ನೋವು ನಲಿವೆಂಬ ಮಾಯದ ಕಟ್ಟು ಕಾಲವು ಮಾಡುವುದು ಪ್ರತಿಕ್ಷಣವ ರಟ್ಟು ಬಾಳಿ ಬದುಕಿ  ಪ್ರೀತಿ ಸ್ನೇಹದ ಬಾಗಿಲು ತಟ್ಟು    🌹 ಕವಿತೆ 🌹 ನೂರು ಸುಂದರ ಕವಿತೆ ನಿನಗಾಗಿ ಬರೆದೆ ವನಿತೆ ಸಾಲು ಹೇಳಿವೆ ರಕ್ತ ಚರಿತೆ  ನನ್ನನು ನಾನು ಅರಿತೆ ಬದುಕನ್ನು ಏಕೋ ಅರಿಯದೆ ಮರೆತೇ     🌹ಮುಲಾಮು 🌹 ಮನಸ್ಸಿನ ಘಾಯಕೆ ಇಲ್ಲ ಮುಲಾಮು ಚಿಂತೆ ಎಂಬ ಚಿತೆಯೇ ನಿನಗೆ ಸಲಾಮು ಕಣ್ಣೀರಿನ ರಭಸಕ್ಕೆ ಮಾದಿದೆ ಗಾಯ ಕಣ್ಣ ರೆಪ್ಪೆಗೆ ನೊವಿನ ಛಾಯಾ *********ರಚನೆ********* ಡಾ.ಚಂದ್ರಶೇಖರ್. ಸಿ. ಹೆಚ್

ಚುಟುಕು ಕವನ-40

Image
       🌹 ಅನುರಾಗ 🌹 ಈ ಬಾಳಿನಲ್ಲಿ ಸುಂದರ ಅನುರಾಗ ನಿನ್ನ ನೆನೆಯುವುದೇ ಪ್ರೀತಿಯ ಸುಯೋಗ ಬಳಿ ಬರೆ ನಲ್ಲೆ ಇರದೇ ಯಾವುದೇ ರೋಗ ಕೇಳುವೇನು ನಿನ್ನ ನಾನು ಕನಸಿನಲಿ ಭಾಗ                   🌹 ಪ್ರೇಮ 🌹 ಪ್ರೀತಿ ಪ್ರೇಮವನ್ನು ನಂಬೇನು ನಾನು ಕೈ ಹಿಡಿದ ಮೇಲೆ ಬಿಡೆನು ಇನ್ನು ಮೋಸವನ್ನು ಮಾಡಬೇಡ ನೀನು ನನಗೆ  ದೈವವು ಕಾಪಾಡುವ ನಮ್ಮನು ಕೊನೆಗೆ         🌹 ಪ್ರಣಯ 🌹 ನೋಡು ನಲ್ಲೆ ಪ್ರಣಯವು ಸುಂದರ ಯಾಮಾರಿದರೆ ನಾವು ಅದುವೇ ಕಂದರ ವಯಸ್ಸು ಇಗೆ ನೋಡು ಬಣ್ಣದ ವೇಷ ಜಾರಿದರೆ ನಾವು ಕುಡಿದ ಹಾಗೆ ವಿಷಪ್ರಾಷ ********ರಚನೆ*********  ಡಾ.ಚಂದ್ರಶೇಖರ್ ಸಿ.ಹೆಚ್

ಶಿಶು ಗೀತೆ -4

Image
  🌹ಹಾರುತ್ತಿರುವ ಹಕ್ಕಿ 🌹 ಹಾರುತಿರುವ ಹಕ್ಕಿಯೇ ನೋಡುಬಾರೆ  ನನ್ನ ಕಂದಮ್ಮ ಅಳುತವಳೇ ಕೇಳುಬಾರೆ  ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ತೆವಳುತವಳೇ  ಕಾಲಿನಲ್ಲಿ ಗೆಜ್ಜೆ ತೊಟ್ಟು ಸದ್ದು ಮಾಡುತವಳೇ  ಮೊಗದಲಿ ಏಕೋ ಕೋಪ ತೋರುತವಳೇ ಸುಮ್ನೆ ನನಗೆ ಏಕೋ ಒಡೆಯುತವಳೇ ಒಮ್ಮೆ ಮೊಗದಲ್ಲಿ ನಗೆ ತೋರುತವಳೆ ಕುಡಿ ನೋಟ ಬೀರಿ ಕೇಕೆ ಹಾಕುತವಳೇ ಹಾರುತ್ತಿರುವ ಹಕ್ಕಿಯೇ ನೋಡು ಬಾರೆ  ನನ್ನ ಕಂದಮ್ಮ ಅಳುತಿಹಳು ಕೇಳುಬಾರೆ ಗುಬ್ಬಿಯಂಗೆ ಒಮ್ಮೆ ಮಾತ ಆಡುತವಳೇ ನನ್ನ ನೋಡಿ ಸಿಟ್ಟಿನಲ್ಲಿ ಪರಚುತವಳೇ ಮಳೆರಾಯ ಬಂದವನೇ ನಮ್ಮ ಊರಿಗೆ ದಾರಿಯಲಿ ಏಕೋ ಕೆಸರು ನಮ್ಮ ಬೀದೀಲಿ ಕಂದಮ್ಮ ನೀರು ನೋಡಿ ಕುಣಿಯುತವಳೇ ಬಟ್ಟೆಯೆಲ್ಲಾ ಒದ್ದೆ ಯಾಗಿ ಚಿರುತವಳೆ ಹಾರುತ್ತಿರುವ ಹಕ್ಕಿಯೇ ನೋಡು ಬಾರೇ ಕಂದಮ್ಮ ಅಳುತವಳೆ ಕೇಳು ಬಾರೆ ಪ್ರೀತಿಯಲ್ಲಿ ಚಿಲಿಪಿಲಿ ಎನ್ನುಬಾರೆ ನನ್ನ ಕಂದಮ್ಮನ ಒಮ್ಮೆ ನೀನು ನಗಿಸುಬಾರೆ  ***********ರಚನೆ******** ಡಾ. ಚಂದ್ರಶೇಖರ್ ಸಿ.ಹೆಚ್