ಚುಟುಕು ಕವನ-64
🌹ರಜಾ 🌹
ಮೂಡದ ಆಸೆಗಳಿಗೆ ಕಣ್ಣೀರ ರಜಾ
ಬದುಕಿನ ಭಾವನೆಗಳಿಗೆ ನಗುವೆ ಸಜಾ
ಬಾಳಿನ ಒಲವಿಗೆ ಖುಷಿಯ ಕ್ಷಣ ಮಜಾ
ನೋವಿನ ವ್ಯಥೆಗೆ ಕಂಬನಿ ಮಿಡಿತ ನಿಜಾ
🌹ಆಸೆ 🌹
ನೂರು ಆಸೆ ತಂದೆ ಪ್ರೀತಿಯ ಒಲವೇ
ನನ್ನೇ ನಾನು ಗೆದ್ದಂತ ಏನೋ ಗೆಲುವೇ
ಕಾಣದ ದೇವರು ನನ್ನ ಕೈಯ ಇಡಿದಂತೆ
ಮರೆಯಾಯಿತು ಈಗ ಎಲ್ಲಾ ಚಿಂತೆ
🌹 ಸೋಲು 🌹
ಸೋಲು ಗೆಲುವು ಬಾಳಲಿ ಸಹಜ
ಅರಿತು ಬಾಳು ನೀನು ಮನುಜ
ಬಿದ್ದರೆ ಎಲ್ಲಾ ಮುಗಿದು ಹೋಯಿತೇ
ಬೀಳದೆ ಹೋದರೆ ಎಲ್ಲಾ ಹಾಯಿತೇ
**†****ರಚನೆ**********
ಡಾ. ಚಂದ್ರಶೇಖರ್. ಸಿ. ಹೆಚ್
Comments
Post a Comment