ಚುಟುಕು ಕವನ-40
🌹 ಅನುರಾಗ 🌹
ಈ ಬಾಳಿನಲ್ಲಿ ಸುಂದರ ಅನುರಾಗ
ನಿನ್ನ ನೆನೆಯುವುದೇ ಪ್ರೀತಿಯ ಸುಯೋಗ
ಬಳಿ ಬರೆ ನಲ್ಲೆ ಇರದೇ ಯಾವುದೇ ರೋಗ
ಕೇಳುವೇನು ನಿನ್ನ ನಾನು ಕನಸಿನಲಿ ಭಾಗ
🌹 ಪ್ರೇಮ 🌹
ಪ್ರೀತಿ ಪ್ರೇಮವನ್ನು ನಂಬೇನು ನಾನು
ಕೈ ಹಿಡಿದ ಮೇಲೆ ಬಿಡೆನು ಇನ್ನು
ಮೋಸವನ್ನು ಮಾಡಬೇಡ ನೀನು ನನಗೆ
ದೈವವು ಕಾಪಾಡುವ ನಮ್ಮನು ಕೊನೆಗೆ
🌹 ಪ್ರಣಯ 🌹
ನೋಡು ನಲ್ಲೆ ಪ್ರಣಯವು ಸುಂದರ
ಯಾಮಾರಿದರೆ ನಾವು ಅದುವೇ ಕಂದರ
ವಯಸ್ಸು ಇಗೆ ನೋಡು ಬಣ್ಣದ ವೇಷ
ಜಾರಿದರೆ ನಾವು ಕುಡಿದ ಹಾಗೆ ವಿಷಪ್ರಾಷ
********ರಚನೆ*********
ಡಾ.ಚಂದ್ರಶೇಖರ್ ಸಿ.ಹೆಚ್
Comments
Post a Comment