ಚುಟುಕು ಕವನ-62
🌹 ಗುಟ್ಟು 🌹
ಜೀವನ ಎಂಬುದು ಯಾರಿಗು ತಿಳಿಯದ ಗುಟ್ಟು
ಬದುಕು ನೋವು ನಲಿವೆಂಬ ಮಾಯದ ಕಟ್ಟು
ಕಾಲವು ಮಾಡುವುದು ಪ್ರತಿಕ್ಷಣವ ರಟ್ಟು
ಬಾಳಿ ಬದುಕಿ ಪ್ರೀತಿ ಸ್ನೇಹದ ಬಾಗಿಲು ತಟ್ಟು
🌹 ಕವಿತೆ 🌹
ನೂರು ಸುಂದರ ಕವಿತೆ
ನಿನಗಾಗಿ ಬರೆದೆ ವನಿತೆ
ಸಾಲು ಹೇಳಿವೆ ರಕ್ತ ಚರಿತೆ
ನನ್ನನು ನಾನು ಅರಿತೆ
ಬದುಕನ್ನು ಏಕೋ ಅರಿಯದೆ ಮರೆತೇ
🌹ಮುಲಾಮು 🌹
ಮನಸ್ಸಿನ ಘಾಯಕೆ ಇಲ್ಲ ಮುಲಾಮು
ಚಿಂತೆ ಎಂಬ ಚಿತೆಯೇ ನಿನಗೆ ಸಲಾಮು
ಕಣ್ಣೀರಿನ ರಭಸಕ್ಕೆ ಮಾದಿದೆ ಗಾಯ
ಕಣ್ಣ ರೆಪ್ಪೆಗೆ ನೊವಿನ ಛಾಯಾ
*********ರಚನೆ*********
ಡಾ.ಚಂದ್ರಶೇಖರ್. ಸಿ. ಹೆಚ್
nice lines sr
ReplyDelete