ನೆಮ್ಮದಿ ಎಲ್ಲಿದೆ
ನೆಮ್ಮದಿಯ ಹುಡುಕುತ ಮನವು ಕೂತಿರಲು
ಒಲವಿನಲಿ ನೊಂದು ಬೇಯುತ ಕನಸು ಅರಳಿರಲು
ಚೆಲುವೊಂದು ಏಕೋ ಏನೋ ಕೂಗಿ ಕರೆದಿರಲು
ಹಗಲುಗಳು ಕತ್ತಲೆಯಾಗಿ ಭೂಮಿ ಅಳುತಿರಲು
ನೊವೊಂದು ಬಳಿ ಬಂದು ಹೃದಯವ ಕೊಲ್ಲುತ್ತಿದೆ
ಕಣ್ಣಿರಲಿ ಮುಳುಗಿದ ಬದುಕು ದಾರಿ ತಪ್ಪುತ್ತಿದೆ
ಎಲ್ಲಿ ನೋಡಿದರು ವೇದನೆಯ ನರಳಾಟ
ಕನಸುಗಳ ಕಿತ್ತ ಮಗುವಿನ ಕಂಬನಿ ಗೋಳಾಟ
ಅಕ್ಕರೆ ಇಲ್ಲದ ಜೀವನ ಸೊಕ್ಕಿದೆ ಪಯಣದಲ್ಲಿ
ಬಾಳಿನಲಿ ಸಕ್ಕರೆ ಕಾಣುವುದು ಎಂದು ಕೊನೆಗಿಲ್ಲಿ
ನೂರೆಂಟು ಎಡರು ತೊಡರು ಹಾಗೆ ನಮಗಿಲ್ಲಿ
ಬಾಳ ಬಂಡಿಯ ಎಳೆಯಲು ಹೊರಟವಗೆ ಸಾವಿಲ್ಲಿ
ಎಲ್ಲಿ ನೋಡಿದರೂ ನೆತ್ತರ ಹೊಳೆ ಹರಿಯುತಿದೆ
ದಾಟಲು ಹೋದವಗೆ ಬಂದು ಜೀವ ಹಿಂಡುತಿದೆ
ಬದುಕಿನಲ್ಲಿ ಈಗ ಏಕೋ ಉಸಿರು ಸಿಕ್ಕಂತೆ
ಬೊಂಬೆ ಆಡಿಸುವವನು ನಮ್ಮ ನೋಡಿ ನಕ್ಕಂತೆ
**********ರಚನೆ**********
ಡಾ. ಚಂದ್ರಶೇಖರ್. ಸಿ.ಹೆ ಚ್
Comments
Post a Comment