ನೆನಪು
ನೂರು ನೆನಪು ಮೂಡಿದೆ ಮನದ ಕಡಲಲಿ
ಹೃದಯ ಏಕೋ ಬಡಿದಿದೆ ಜೀವದ ಹಡಗಲಿ
ಕಾಣೆ ನಾನು ಕನಸ ಒಂದೂ ಎದೆಯ ಗೂಡಲಿ
ನೋವು ಬಂದು ತಾಗಿದೆ ಮನಸ್ಸ ಮಡಿಲಲಿ
ದಾರಿ ನೂರು ಕಾಣುತ್ತಿದೆ ಎತ್ತ ಹೇಗೆ ಸಾಗಲಿ
ಗುರಿಯ ನಾನು ಮುಟ್ಟುವೆನೆ ಯಾರ ಕೇಳಲಿ
ಕಾಲವೊಂದು ಓಡುತಿದೆ ನೆನಪುಗಳ ಬಿಟ್ಟಿ
ನೆನಪು ಮನಸ್ಸ ಕೇದಕುತಿದೆ ನನ್ನ ನಗುವ ಸುಟ್ಟಿ
ಯಾರಿಗೆ ಹೇಳಲಿ ನೆತ್ತರಿನ ನೋವನು
ಬದುಕು ಕಲಿಸುತ್ತಿದೆ ಪಾಠ ಬಿತ್ತಿ ಪೈರನು
ಬಾಳ ಬಂಡಿಯಲಿ ಹಚ್ಚ ಹಸಿರು ತುಂಬದೇ
ಎತ್ತ ನೋಡಿದರೂ ಜೀವ ಬೆಂಕಿ ಸುಡುತ್ತಿದೆ
ಕಣ್ಣ ನೀರು ಬತ್ತಿದೆ ಬೆಳಕ ಜಾಡಲಿ
ಮುಖುವು ಸುಕ್ಕು ಗಟ್ಟಿದೆ ಬಿಸಿಲ ಜಳದಲಿ
ಹೊಳಪು ಈಗ ಎಲ್ಲಿದೆ ಬಾಳ ಬೆಳಕಲಿ
ಕಪ್ಪು ಈಗ ತುಂಬಿದೆ ನೋವ ಬದುಕಲಿ
**********ರಚನೆ********
ಡಾ. ಚಂದ್ರಶೇಖರ್ ಸಿ. ಹೆಚ್
Comments
Post a Comment