Posts

❤💃💃ನಮ್ಮ ಕಥೆಗೆ ನಾನೆ ಹೀರೋ ಯಾರು ಕೇಡಿ❤💃💃

Image
ಪ್ರಿಯಾ ಗೆಳೆಯರೇ   ಕೆಲವು  ಬಾಲ್ಯದ  ಹಾಗು ಯ್ಯವ್ವನ ಹಾಗು ಮುಪ್ಪುಗಳ ವಿವರಣೆ  ಇಗೆ ಈ ಕತೆಯಲ್ಲಿ ಬರುವ ಹೀರೋ ಯಾರಿಗೆ ಕೇಡಿ ಇವನ ಜೀವನದಲ್ಲಿ ಯಾರು ಕೇಡಿ ಇವನು ಯಾರಿಗೆ ಹೀರೋ  ಎಂಬ ಮನಸ್ಸಿನ ಕಥೆಯನ್ನು ಹೇಳಲು ಹೊರಟ್ಟಿದ್ದೇನೆ ಓದಿ ತಪ್ಪಿದ್ದರೆ ತಿಳಿಸಿ ಹಾಗು ಕಾಮೆಂಟ್ ಮಾಡಿ  *********ಲೇಖಕರು ********* ಡಾ. ಚಂದ್ರಶೇಖರ. ಸಿ. ಹೆಚ್

💃💃❤ನಮ್ಮ ಕಥೆಗೆ ನಾನೇ ಹೀರೋ ಯಾರು ಕೇಡಿ 💃💃❤

Image
ಭಾಗ -1     ಬಾಲ್ಯದ ಆಟ ಮತ್ತು ಪಾಠ  ಒಂದೂ ಊರಿನಲ್ಲಿನ ಬಾಲ್ಯದ ಹುಡುಗರ ಕಥೆಯನ್ನು ಇಲ್ಲಿ ಹೇಳಲು ಹೊರಟ್ಟಿದ್ದೇನೆ. ಸುಮಾರು ಅ ಶಾಲೆಯಲಿ 100 ಮಕ್ಕಲ್ಲಿರಬಹುದು ಹಾಗು ಸರ್ಕಾರಿ ಶಾಲೆ. ನಾವು ನಮ್ಮ ಬದುಕನ್ನು ನೋಡಿದಾಗ ಕೆಲವಾರು ವಿಷಯಗಳ್ಳಲ್ಲಿ ಬೇರೆಯವರಿಗಿಂತ ಬಿನ್ನವಾಗಿರುತೇವೆ ಅಂದರೆ ಮುಂದೆ ಅಥವಾ ಇಂದೆ ಇರುತ್ತೇವೆ  ಆದರೇ ನಾವೆಲ್ಲರೂ ಬಾಲ್ಯದಲ್ಲಿ ಒಟ್ಟಿಗೆ ಓದಿದವರು ಒಂದೇ ಶಾಲೆಯಲ್ಲಿ ಕಲಿತವರು.. ಉತ್ತರಗಳ್ಳನ್ನು ಹುಡುಕುತ ಹೊರಟಾಗ ಒಬ್ಬರಿಗೂ ಸಾವಿರಾರು ಪ್ರಶ್ನೆಗಳು ಮೂಡಬಹುದು. ಇದೀಗ ವಿಷಯಕ್ಕೆ ಬರುವುದಾದರೆ ಮೊದಲ್ಲೆಲ್ಲ ಸರ್ಕಾರಿ ಶಾಲೆಯಲ್ಲಿ ಕಲಿತವರು ಹೆಚ್ಚು ಈ ಆದುನಿಕ ಯುಗದಲ್ಲಿ ಪ್ರೀ ನರ್ಸರಿ  ಹಾಗು LKG ಶಾಲೆಗಳು ಇವೆ  ಒಂದೂ ಊರಿನ ಹಳ್ಳಿಯ ಶಾಲೆಯಲ್ಲಿನ ಒಂದನೇ ತರಗತಿಯ ವಿದ್ಯಾರ್ಥಿಗಳು ಸುಮಾರು 10 ವಿದ್ಯಾರ್ಥಿಗಳು ಇರಬಹುದು  ಪ್ರತಿಯೊಬ್ಬರಿಗೂ ಭಿನ್ನವಾಗಿದ್ದರು ನಾವು ಯೋಚನೆ ಮಾಡುವುದಾದರೆ ಬಾಲ್ಯದಲ್ಲಿನ ಮಕ್ಕಳು ದೇವರ ಸಮಾನ ಎಂದು ಹೇಳುತ್ತೇವೆ ಯಾಕೆಂದರೆ ಅವರ ಮನಸ್ಸಿನ್ನಲ್ಲಿ ದ್ವೇಷ, ಅಸೂಯೆ ಎಂಬ ಕಲ್ಮಶಗಳು ಇರುವುದಿಲ್ಲ ಶಾಲೆಯಲ್ಲಿ ಅ ಹುಡುಗರು ಆಡುತ್ತಾರೆ, ಕುಣಿಯುತ್ತಾರೆ ಹಾಗು ನಲಿಯುತ್ತಾರೆ, ಹೇಳಿಕೊಟ್ಟ ಕನ್ನಡದ ಅಕ್ಷರಗಳನ್ನು ಕಲಿಯುತ್ತಾರೆ ಆದರೇ ಪ್ರತಿಯೊಬ್ಬರ ಆಸಕ್ತಿಯನ್ನು ಗಮನಿಸಿದಾಗ ಎಲ್ಲರೂ ವಿಭಿನ್ನವಾಗಿ ಕಾಣುತ್ತಾರೆ ಹಾಗು ತಮ್ಮ 5ನೇ ತರಗತಿಯ...

🌴🌴ಕೊರೊನ ವೈರಸ್🌴🌴

ದೇಶ ದೇಶಗಳ ನಡುವೆ ಮುಸುಕಿನ ಗುದ್ದಾಟ  ಹಣದ ಇಂದೇ ಬಿದ್ದ ಮದಗಜಗಳ ಜಗ್ಗಾಟ  ನಾ ಮುಂದೆ ತಾ ಮುಂದೆ ಎಂದು ಮಾಡುತ ವಂಚೂ  ಜನಿಸಿತು ಒಂದೂ ಕಿಲ್ಲರ್ ವೈರಸ್  ಅದರ ಹೆಸರೇ ಕೊರೊನ ವೈರಸ್ ವೈರಸ್ ಹಬ್ಬಿತು ಜಗತ್ತಿನ ಎಲ್ಲೆಡೆ  ಊಸಿರನೇ ನಿಲ್ಲಿಸುವ ಸಂಚು ಒಂದೆಡೆ  ವೈರಸ್ ಇಂದ ಸತ್ತರು ಜನರು  ಸತ್ತವರ ಅಣೆಬರಹ ಯಾರು ಬಲ್ಲರು  ಕಾರೋನ ವೆಂಬ ಮಾರಿಯ ಬಲೆಗೆ ಪ್ರಪಂಚವೇ ತತ್ತರ  ಭಾರತ ಕೊಟ್ಟಿತು ಈ ವೈರಸ್ ಗೆ ದೀಪ ಬೆಳಕಿನ ಉತ್ತರ  ಕಾರೋನವೆಂಬ ವೈರಸ್ ಮಾರಿಗೆ ಸಾವೇ ಇಲ್ಲ  ವಿಜ್ಞಾನಿಗಳು ಹುಡುಕುತ ಕುಳಿತರು ಓಷಧವನ್ನೆಲ್ಲ  ಸಿಗುವುದೇ ಓಷಧಿ ಹೊರಡಲು ಕೊರೊನ ವಿರುದ್ಧ  ಕಂಡು ಇಡಿದ ವಿಜ್ಞಾನಿಗೆ ಬಹುಮಾನವೂ ಸಿದ್ದ  ವೈರಸ್ ಎಂಬ ಕಾಣದ ಜೀವಿಯು  ಜಗತ್ತಿನೆಲ್ಲೆಡೆ ಮಾಡಿತು ಮೋಡಿಯೂ  ಕೊರೊನ ವೈರಸ್ ಹುಟ್ಟಿದ ಊರು  ಸಾವಿರ ವೈರಸ್ ಗಳ  ತವರು  ದೇಶ ದೇಶಗಳ ನಡುವೆ ಆರ್ಥಿಕ ಸಮರ  ಮನುಶ್ಯನ ಜೀವನವೇ ಒಂದೂ ಕಳೇಬರಹ  ***********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

💃💃ಡಿಂಪಲ್ ಕೆನ್ನೆ 💃💃

 ಡಿಂಪಲ್ ಕೆನ್ನೆಯ ಹುಡುಗಿ                         ಕಣ್ಣ ಸನ್ನೆಯ ಬೆಡಗಿ  ನಿನ ನೋಟ ಬಲು ಚೆಂದ                          ಪದವಿಲ್ಲ ಬಣ್ಣಿಸಲು ನಿನ್ನ ಅಂದ  ಆ ನಿನ್ನ ಮೈಮಾಟ ಬಳುಕುವ                           ಬಳ್ಳಿಯ ತೆನೆಯಾಟ  ನಿನ ನಡುಗೆ ಸೂಗಸಂತೆ                            ಹೂವೊಂದು ನೆಲದಲ್ಲಿ ಬಿದ್ದಂತೆ  ಆ ನಿನ್ನ ವೈಯಾರ ನೋಡುತ                            ನಿಂತ ರಾಜಕುಮಾರ  ನಿನ ಮಾತು ಮುತ್ತಂತೆ                             ಜೇನಿನ ಸಿಹಿಯಂತೆ  ಸೌಂದರ್ಯದ ಗಣಿ ನೀನು                              ಗುಣದಲ್ಲಿ ನೀರಿನಲ್ಲಿನ ಮೀನು  ನಡತ...

👸👸ನಕ್ಷತ್ರ ನಗುತಿರಲು 👸👸

 ಬರಗಾಲದಂತೆ ಬರಿದಾದ ಮನಸ್ಸು  ಒಲವಿಲ್ಲದ ಹೃದಯಕೆ ಚೆಲುವೆಂಬ ಕನಸ್ಸು  ನೀ ದೂರ ನಿಂತಿರಲು ನನಗಾಯಿತು ಮುನಿಸು  ನೀ ಬಳಿ ಇರಲು ಜೀವನವೇ ಸೂಗಸು  ಮನಸ್ಸಲಿ ನೀ ಬಂದೆ ಕನಸ್ಸನ್ನು ನೀ ತಂದೆ  ಖುಷಿಯಿಂದ ನಾವಿರಲು ಸ್ವರ್ಗವೇ ತೆರೆದಂತೆ  ಹೋಗುವೆ ನೀ ದೂರ ನನಗೇಕೆ ಈ ಬಾರ  ನಿನ್ನಿಂದ ನಾ ಬರಲು ನಕ್ಷತ್ರ ನಗುತಿರಲು  ಜೀವನವೇ ಒಂದೂ ಚಿತ್ತಾರ  ***************ರಚನೆ ************** ಡಾ. ಚಂದ್ರಶೇಖರ. ಸಿ. ಹೆಚ್ 

🌳🌳ಸೆರೆಯಾದೆ ನಾನು 🌳🌳

 ಈ ಪಯಣದಿ ನೀ ಜೊತೆಯಾದೆ  ನನ ಬಾಳಿಗೆ ನೀ ಸಖಿಯಾದೆ  ನಿನ್ನಯ ಪ್ರೀತಿಗೆ ನಾ ಮೂಖನಾದೆ  ಆ ನಿನ್ನ ಮಾತಿಗೆ ನಾ ಸೋತೋದೆ  ಸಿಡಿಲಂತೆ ಬಂದ ಈ ಪ್ರೀತಿ  ಮಿಂಚಂತೆ ಆಗಸದಿ ಬಂದೈತಿ  ಮಳೆ ಹನಿಯು ಸುರಿದು  ಆ ಹನಿಯಲ್ಲಿ ತೋಯ್ದು   ಭೂಮಿಗೆ ತಂಪು ನಿಡೈತಿ  ನೀ ನನಗಾಗಿ ತಂದ ಈ ಪ್ರೀತಿ  ಮಾತೆಲ್ಲ ಮುತ್ತಂತೆ  ನೋಟವು ಕಾಮನಬಿಲ್ಲಂತೆ  ಬಣ್ಣಗಳು ಆಕಾಶದಿ ಮೂಡಿ  ಆ ಮೊಡವೆ ತಿಳಿ ನೀಲಿ  ಮಳೆ ಹನಿಯು ಬಿದ್ದಂಗೆ ಮನದಲ್ಲಿ  ನಿನ್ನ ಗೆಜ್ಜೆಯ ಸದ್ದು ಬಾಳಲಿ  ನಕ್ಷತ್ರದಂತೆ ಆ ನಿನ್ನ ನೋಟ  ಸೆರೆಯಾದೆ ನಾನು ಆ ನಿನ್ನ ತುಂಟ ಕಣ್ಣಾಟ  ***********ರಚನೆ ************ ಡಾ. ಚಂದ್ರಶೇಖರ. ಸಿ. ಹೆಚ್ 

🌺🥀ಒಂದು ಹುಡುಗಿಯ ಕಥೆ 🥀🌺

ನಗುವಿನ ಮೊಗದ ಚೆಲುವನೇ ನೀನು  ಸುಂದರ ಹುಡುಗಿಯ ನೋಡಲೇ ನಾನು  ಅವನು ನಕ್ಕನು ಹುಡುಗಿಯ ನೋಡಿ  ಹುಡುಗಿ ಆದಳು ಇವನಿಗೆ ಜೋಡಿ  ಅವನಿಗಾಗಿ ಮುಡಿದಳು ಮಲ್ಲಿಗೆ ಹೂವು  ಅವನು ಕೊಟ್ಟನು ಆಕೆಯ ಜೀವನದಿ ನೋವು  ಕಣ್ಣಲಿ ಹೊಳಪು ಹಾಲಿನ ಬಿಳುಪು  ಸೋತನು ಅವನು ನೋಡಿ ಚೆಲುವಿನ ಬಿಳಿಪು  ಮನದಲಿ ಮಿಡಿತ ಹೃದಯದಿ ತುಡಿತ  ಅವನ ಮೋಸಕೆ ನೋವಿನ ಪ್ರೀತಿ ಖಚಿತ  ಅವನ ನೋಟ ಆಕೆಗೆ ಕಲಿಸಿತು ಪಾಠ  ಜೀವನದಲ್ಲಿ ತಿಳಿದಳು ನಿಜವಾ  ಅವನು ಮಾಡಿದ ಮೋಸದ ಒಲವ  ಹುಡುಗಿ ಎತ್ತಳು  ಒಂದೂ ಮಗುವ  ಬೀದಿಯಲ್ಲಿ ಬಿಟ್ಟಳು ತಬ್ಬಲಿ ಮಾಡಿ ಮಗುವ  ನೋವಿನ ತೇರು ಬಿಟ್ಟಳು ಊರು  ದೂರದ ಊರಲಿ ಸಿಕ್ಕಿತು ಸೂರು  ಆ ಸೂರಲಿ ಕಂಡಳು ನೋವಿನ ಬದುಕು  ದೇವರು ಕೊಟ್ಟನು ನೆಮ್ಮದಿ ಬದುಕು  ಜೀವನವೆಂಬುದು ಅರಿಯದ ಮಾಯೆ  ಬದುಕಲು ಕಲಿತಳು ಮರೆತು ನೋವಿನ ಛಾಯೆ  ಹೇಳಿದೆ ನಾನು ಹುಡಿಗಿಯ ಕಥೆಯ  ನೊಂದು ಬೆಂದ ಜೀವನದ ವ್ಯಥೆಯ  **********ರಚನೆ *********** ಡಾ ಚಂದ್ರಶೇಖರ. ಸಿ. ಹೆಚ್