💃💃❤ನಮ್ಮ ಕಥೆಗೆ ನಾನೇ ಹೀರೋ ಯಾರು ಕೇಡಿ 💃💃❤




ಭಾಗ -1     ಬಾಲ್ಯದ ಆಟ ಮತ್ತು ಪಾಠ 

ಒಂದೂ ಊರಿನಲ್ಲಿನ ಬಾಲ್ಯದ ಹುಡುಗರ ಕಥೆಯನ್ನು ಇಲ್ಲಿ ಹೇಳಲು ಹೊರಟ್ಟಿದ್ದೇನೆ. ಸುಮಾರು ಅ ಶಾಲೆಯಲಿ 100 ಮಕ್ಕಲ್ಲಿರಬಹುದು ಹಾಗು ಸರ್ಕಾರಿ ಶಾಲೆ. ನಾವು ನಮ್ಮ ಬದುಕನ್ನು ನೋಡಿದಾಗ ಕೆಲವಾರು ವಿಷಯಗಳ್ಳಲ್ಲಿ ಬೇರೆಯವರಿಗಿಂತ ಬಿನ್ನವಾಗಿರುತೇವೆ ಅಂದರೆ ಮುಂದೆ ಅಥವಾ ಇಂದೆ ಇರುತ್ತೇವೆ  ಆದರೇ ನಾವೆಲ್ಲರೂ ಬಾಲ್ಯದಲ್ಲಿ ಒಟ್ಟಿಗೆ ಓದಿದವರು ಒಂದೇ ಶಾಲೆಯಲ್ಲಿ ಕಲಿತವರು.. ಉತ್ತರಗಳ್ಳನ್ನು ಹುಡುಕುತ ಹೊರಟಾಗ ಒಬ್ಬರಿಗೂ ಸಾವಿರಾರು ಪ್ರಶ್ನೆಗಳು ಮೂಡಬಹುದು. ಇದೀಗ ವಿಷಯಕ್ಕೆ ಬರುವುದಾದರೆ ಮೊದಲ್ಲೆಲ್ಲ ಸರ್ಕಾರಿ ಶಾಲೆಯಲ್ಲಿ ಕಲಿತವರು ಹೆಚ್ಚು ಈ ಆದುನಿಕ ಯುಗದಲ್ಲಿ ಪ್ರೀ ನರ್ಸರಿ  ಹಾಗು LKG ಶಾಲೆಗಳು ಇವೆ 
ಒಂದೂ ಊರಿನ ಹಳ್ಳಿಯ ಶಾಲೆಯಲ್ಲಿನ ಒಂದನೇ ತರಗತಿಯ ವಿದ್ಯಾರ್ಥಿಗಳು ಸುಮಾರು 10 ವಿದ್ಯಾರ್ಥಿಗಳು ಇರಬಹುದು  ಪ್ರತಿಯೊಬ್ಬರಿಗೂ ಭಿನ್ನವಾಗಿದ್ದರು ನಾವು ಯೋಚನೆ ಮಾಡುವುದಾದರೆ ಬಾಲ್ಯದಲ್ಲಿನ ಮಕ್ಕಳು ದೇವರ ಸಮಾನ ಎಂದು ಹೇಳುತ್ತೇವೆ ಯಾಕೆಂದರೆ ಅವರ ಮನಸ್ಸಿನ್ನಲ್ಲಿ ದ್ವೇಷ, ಅಸೂಯೆ ಎಂಬ ಕಲ್ಮಶಗಳು ಇರುವುದಿಲ್ಲ ಶಾಲೆಯಲ್ಲಿ ಅ ಹುಡುಗರು ಆಡುತ್ತಾರೆ, ಕುಣಿಯುತ್ತಾರೆ ಹಾಗು ನಲಿಯುತ್ತಾರೆ, ಹೇಳಿಕೊಟ್ಟ ಕನ್ನಡದ ಅಕ್ಷರಗಳನ್ನು ಕಲಿಯುತ್ತಾರೆ ಆದರೇ ಪ್ರತಿಯೊಬ್ಬರ ಆಸಕ್ತಿಯನ್ನು ಗಮನಿಸಿದಾಗ ಎಲ್ಲರೂ ವಿಭಿನ್ನವಾಗಿ ಕಾಣುತ್ತಾರೆ ಹಾಗು ತಮ್ಮ 5ನೇ ತರಗತಿಯವರೆಗೂ ಈಗೆಯೇ ತಮ್ಮ ಶಾಲೆಯಲ್ಲಿನ್ನ ಪಯಣ ಸಾಗುತ್ತದೆ. 
ಆದರೇ ನಮ್ಮ  ಪರಿಸರ ಹಾಗು ಅ ಮನೆಯ ವಾತಾವರಣದ ಮೇಲೆ ಅವರ ಬೆಳವಣಿಗೆ ನಿಂತಿರುತ್ತದ್ದೆ. ಮನೆಯೇ ಮೊದಲ ಪಾಠ ಶಾಲೆ ಎಂದು ಹೇಳುವ ಹಾಗೇ ತಂದೆ ತಾಯಿಯರ ವರ್ತನೆಗಳು ಅ ಮಕ್ಕಳ ಮೇಲೆ ಪರಿಣಾಮ ಬೀಳಬಹುದು ಉದಾಹರಣೆ  ತಂದೆ ಕುಡಿದು ಬಂದು ತಾಯಿಗೆ ಜಗಳವಾಡುವುದು ಇದನ್ನು ನೋಡಿದ ಅ ಹುಡುಗರ ಮೇಲೆ  ಎಚ್ಚಗಿ ಪರಿಣಾಮ ಬೀಳಬಹುದು ಹಾಗೆಯೇ ಊರಿನ ಯಜಮಾನ ಮನುಷ್ಯ ಅಂಗಡಿಯ ಮುಂದೆ ಕುಳಿತು ಬೀಡಿ ಸೇದಿ ಎಸೆದ ತುಂಡನ್ನು ಚಿಕ್ಕ ವಯಸ್ಸಿನ ಹುಡುಗರು ಅನುಕರಿಸಿದನ್ನು ನಾವು ಕಾಣಬಹುದು. ಆದರೇ ಅ ಹುಡುಗರು ಅದನ್ನು ಅರಿಯುವ ಬುದ್ದಿ ಇರಲಾರದು ಹೀಗೆ ಶಾಲೆಯ ಎಲ್ಲ ಮಕ್ಕಳು ಮನೆಯ ಪರಿಸರ ಹಾಗು ಶಾಲೆಯ ಪರಿಸರದ ಮೇಲೆ ಅವರ ಬೆಳವಣಿಗೆ ಅವಲಂಬಿತವಾಗಿರುತ್ತದ್ದೆ. ಅವರನ್ನು ಸರಿಯಾದ ಬಾಲ್ಯಕ್ಕೆ ತರಲು ತಂದೆ ತಾಯಿಯಾರಿಗೆ ಸಾಧ್ಯವೇ ಎಂದು ನೋಡಿದರೆ ಔದು ಅಥವಾ ಇಲ್ಲ ಎಂದು ಹೇಳಬಹುದು ಈ ಆದುನಿಕ ಯುಗದಲ್ಲಿ ತಂದೆ ತಾಯಿ ಇಬ್ಬರು ವೃತ್ತಿ ಮಾಡುವುದರಿಂದ ಸಾಧ್ಯವಾಗದೆ ಇರಬಹುದು ಯಾಕೆಂದರೆ ಅವರಿಗೆ ಹೆಚ್ಚಾಗಿ ಸಮಯವಿರುವಿದಿಲ್ಲ 
ಹಾಗಾದರೆ ಅ ಊರಿನ 10 ಮಕ್ಕಳ ಬಾಲ್ಯವನ್ನು ನೋಡಿದಾಗ ಕೆಲವರು ಓದಿನಲ್ಲಿ ಇನ್ನು ಕೆಲವರು ಆಟಗಳ್ಲಲಿ ಮುಂದೆ ಅಥವಾ ಹಿಂದೆ ಇರುತ್ತಾರೆ ಯಾಕೆ ಇಗೆ ಎಂದು ತಿಳಿಯುವುದು ಸುಲಭವಲ್ಲ 
ಇಲ್ಲಿ ತಿಳಿಯುವುದೇನೆಂದರೆ ಅ ಮಕ್ಕಳ ಬಾಲ್ಯ ಉತ್ತಮವಾಗಿರಲು ಮನೆಯ ಪರಿಸರ, ಶಾಲೆಯ ಪರಿಸರ ಹಾಗು ಊರಿನ ಪರಿಸರ ಉತ್ತಮವಾಗಿರಬೇಕು ಇಲ್ಲವೆಂದಲ್ಲಿ ಇಲ್ಲವೆಂದಲ್ಲಿ ಮಕ್ಕಳು ಬಾಲ್ಯದಲ್ಲಿ ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಇಚ್ಛಿಸಿದಲ್ಲಿ ಅ ಮಕ್ಕಳ್ಳಿಗೆ ಓದಿನ ಜೊತೆಗೆ ಗಾಯನ, ನೃತ್ಯ, ಆಟ ಹಾಗು ದೇವರ ಪೂಜೆ ಮಾಡುವುದು ಹಾಗು ದೇವರ ನಾಮ ಸ್ಮರಿಸುವುದು ಮುಂತಾದವಗಳ್ಳನ್ನು ತಮ್ಮ ಮಕ್ಕಳಿಗೆ ಬೋದಿಸುವುದರಿಂದ ಮಕ್ಕಳ ಬಾಲ್ಯ ರೂಪಿಸಲು ಸಹಕಾರಿಯಾಗಬಹುದು 
ನಾನು ಹೇಳಲು ಹೊರಟಿರುವ 10 ಜನರಲ್ಲಿ ಒಬ್ಬ ಹುಡುಗ ಓದಿನಲ್ಲಿ ಮುಂದಿರುತ್ತಾನೆ ಹಾಗು ಎಲ್ಲರಿಗಿಂತ ಬಿನ್ನವಾಗಿರುತ್ತಾನೆ ಹಾಗು ಅ ಊರಿನ ಹುಡುಗರು ಸುಂದರ ಬಾಲ್ಯದ ದಿನಗಳನ್ನು ಕಳೆಯುತ್ತಾರೆ ಹಾಗು ಎಲ್ಲಾ ಹುಡುಗರಿಗೂ ಶಿಕ್ಷಕರೆಂದರೆ ಅಪಾರ ಪ್ರೀತಿ ಅದೇ ರೀತಿ ಶಿಕ್ಷಕರಿಗೂ ಮಕ್ಕಳ ಮೇಲೆ ವಾತ್ಸಲ್ಯವಿರುತ್ತದೆ 

**********ಲೇಖಕರು ********

ಡಾ. ಚಂದ್ರಶೇಖರ. ಸಿ. ಹೆಚ್ 



Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ