Posts

Showing posts from March, 2025

ಶಿಶು ಗೀತೆ

Image
  ಚಂದಿರನ ತೋರುವೆ  ಅಂಗಳದ ಆ ಬನದಲ್ಲಿ ತಿಂಗಳ ಹುಣ್ಣಿಮೆ ಬೆಳಕಲ್ಲಿ  ಚಂದಿರನಾ ತೊರುವೆ ಬಾರೆ ನನ್ನ ಕಂದ  ನಿನ್ನ ಮೊಗದ ಚೆಲುವಿಗೆ  ಚಂದಿರನು ನಗುವನು  ನೋಡಿ ನಿನ್ನ ಅಂದ  ಪುಟ್ಟ ಪುಟ್ಟ ಹೆಜ್ಜೆ ಇಟ್ಟು  ಹಂಸದಂತೆ ನೀ ಬರಲು  ಭೂತಾಯಿ ಹಸಿರಲಿ ನಕ್ಕಾಳು  ತುಂಟ ನಗುವ  ಬೀರಿ  ನೋಟ ನಿನ್ನ  ಸೆಳೆಯಲು ಕತ್ತಲ ರಾತ್ರಿ ದೂರ ಸರಿದಾಳು  ಮೂತಿ ಮೇಲೆ ಸಿಟ್ಟು ಕೆನ್ನೆಯಲ್ಲಿ ಕೋಪ  ಹೇ..ಹೆ..ಎಂದು ನೀ ಚೀರಲು  ಉಲ್ಕೆ ಉರಿದು ಬಿದ್ದಾವು  ಮೆಲ್ಲನೆ ನೀ ಬಳಿ ಬಂದು ಅಮ್ಮ ಅಮ್ಮ ಎನ್ನಲು  ನಕ್ಷತ್ರ ನೋಡಿ ನಿನ್ನ ನಕ್ಕಾವು  ಕುಡಿ ನೋಟ ಒಮ್ಮೆ ಬೀರಿ  ಅಪ್ಪ ಅಪ್ಪ  ಎಂದು ಕೂಗಲು  ಬಿಳಿಯ ಮೋಡ ನೀಲಿಯಾದವು ಅಂಗಳದ ಆ ಬನದಲ್ಲಿ ತಿಂಗಳ ಹುಣ್ಣಿಮೆ ಬೆಳಕಲ್ಲಿ  ಚಂದಿರನಾ ತೊರುವೆ ಬಾರೆ ನನ್ನ ಕಂದ  ನಿನ್ನ ಮೊಗದ ಚೆಲುವಿಗೆ  ಚಂದಿರನು ನಗುವನು  ನೋಡಿ ನಿನ್ನ ಅಂದ  *********ರಚನೆ********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಕವಿತೆ

Image
  ಮನದ ಒಳಗೆ ನೂರು ಕವಿತೆ ಕುಕ್ಕೀತೇನು  ಹೊರಗೆ ಬಂದು ದುಃಖ ಏಕೋ ಉಕ್ಕೀತೇನು  ಕಂಡ ಕನಸು ಮಸಣದ ಊರ ಸೇರಿತೇನು  ಆಸೆ ಹೊತ್ತ ಮನವು ಚಿತೇಲಿ ಬೇಯಿತೇನು  ಪದಗಳಿಗೆ ಸಿಗದ ಸುಂದರದ ಮುದ್ದು ಕವಿತೆ ಪದಗಳಿಗೆ ಜೊತು ಬಿದ್ದ ನುಚ್ಚು ನೂರು ಕವಿತೆ ಯಾರೋ ಕೇಳಿ ನಕ್ಕಂತೆ ನನ್ನ ಮನದ ಕವಿತೆ ಹಾಳು ಬಾವಿಯಲ್ಲಿ ನೀರು ಹುಡುಕೋ ಕವಿತೆ  ನೆನಪುಗಳ ಸಾಗರದಿ ಮನೆಯ ಮಾಡಿ ಕಾಣದ ಊರಿನಲ್ಲಿ ಕನಸ ಕೆದರಿ ನೋಡಿ ಕನಸು ನನಸು ಆಗಲಿಲ್ಲ ಯಾವ ರೂಡಿ  ಎದೆಯಲಿ ಬೀರಿದ ಕವಿತೆಯ ಪ್ರೀತಿ ಮೋಡಿ  ಬದುಕ ಹೊತ್ತ ದಾರಿಯಲಿ ಅರಳಲಿಲ್ಲ ಕವಿತೆ  ಕೆಂಡದೋಕುಳಿಯಲಿ ಕೆಂಪಾಗಿ ಬೆಂದ ಕವಿತೆ ಬೂದಿಯಾದರುನು ನೋವು ತೋರದ ಕವಿತೆ ಗೊಬ್ಬರದಲ್ಲಿ ನಕ್ಕು ಹಸಿರು ಮೂಡಿಸಿದ ಕವಿತೆ  **********ರಚನೆ********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ