ಶಿಶು ಗೀತೆ -6
ಎದೆಯೊಳಗೆ ಫೋನು ಬಂದು
ಏಕೋ ರಿಂಗ್ ಆಯ್ತು
ನಿನ್ನ ಮಧುರ ಧ್ವನಿಯಾ ಕೇಳಿ
ಮನಸ್ಸು ಕುಣಿದಾಯ್ತು
ನೂರೊಂದು ಕನಸು ನಿನ್ನ
ಕೂಗಿ ಕರೆದಾಯ್ತು
ಕಣ್ಣೊಳಗೆ ಬಂದು ನೀನು
ಮನೆಯ ಮಾಡಾಯ್ತು
ನಡುಗೆಯಲ್ಲಿ ಸೆಳೆದ ನಿನ್ನ
ರೂಪ ಏನ್ ಚಂದಾ
ಕೈ ಹಿಡಿದು ನಡೆಸುವೆ ನಿನ್ನ
ಅಳಿಸದ ಈ ಅನುಬಂಧ
ನಕ್ಕರೆ ನೀನು ಸಕ್ಕರೆ ತಾನೇ
ಓ ನನ್ನ ಗುಲಾಬಿ
ಸಕ್ಕರೆಯಲ್ಲಿ ಅಕ್ಕರೆ ತೋರುವ
ನೀ ಮುದ್ದು ಶರಾಬಿ
ಕುಡಿ ನೋಟದಿ ಕದ್ದೆ ನೀನು
ನನ್ನ ಈ ಮನವ
ಕವನವನ್ನು ಬರೆಯಲೇನೆ
ವರ್ಣಿಸಿ ನಿನ್ನ. ಗುಣವ
ಎದೆಯೊಳಗೆ ಫೋನು ಬಂದು
ಏಕೋ ರಿಂಗ್ ಆಯ್ತು
ನಿನ್ನ ಮಧುರ ಧ್ವನಿಯಾ ಕೇಳಿ
ಮನಸ್ಸು ಕುಣಿದಾಯ್ತು
***********ರಚನೆ********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment