ಶಿಶು ಗೀತೆ -8
ಚಂದ್ರಮ ನೀನು ತಾನೆ
ಮನದ ಒಳಗೆ ನೂರು ಕನಸು ಕಂದಮ್ಮ
ನೀನು ತಾನೇ ನನ್ನ ಮುದ್ದು ಚಿನ್ನಮ್ಮ
ಪ್ರೀತಿಯಲ್ಲಿ ನಗುವ ತೋರು ಮುದ್ದಮ್ಮ
ನಿನಗಾಗಿ ಕಾದು ಕೂತ ಬಾನ ಚಂದ್ರಮ
ಅಗಸವೇ ನೀಲಿ ಸೀರೆ ತೊಟ್ಟಂತೆ
ಬಿಳಿಯ ಮೋಡ ನಿನ್ನ ಮುದ್ದು ಮೊಗದಂತೆ
ನಕ್ಷತ್ರಗಳು ನೀನು ಹಲ್ಲು ಬಿಟ್ಟಂತೆ
ಉಲ್ಕೆಗಳು ನೀನು ಕಣ್ಣು ಹೊಡೆದಂತೆ
ನಿನ್ನ ಮೊಗವು ಚಂದಿರನು ಕೂಡ ನಕ್ಕಂತೆ
ನಿನ್ನ ಬಣ್ಣ ಭೂಮಿಯ ಹಸಿರ ಗಿಡದಂತೆ
ನೀನು ತೊಟ್ಟ ಧಿರಿಸು ಸಮುದ್ರದ ಅಲೆಯಂತೆ
ನಿನ್ನ ನಡುಗೆ ಭೂಮಿಗೆ ಮಳೆ ಹನಿ ಬಿದ್ದಂತೆ
ಏನು ಹೇಳಲಿ ನಾನು ನೀನೇ ನನ್ನ ಬೆರಗು
ಕಾದು ಕುಳಿತಿರುವೆ ನೋಡಲು ನಿನ್ನಾ ಸೊಬಗು
ನಕ್ಕು ಬಿಡೆ ನನ್ನ ಮುದ್ದು ಒಲವ ಕಂದಮ್ಮ
ಗುಮ್ಮ ಬಂದ ಎಂದು ಹೆದರಿಸಲಾರೆ ನನ್ನಮ್ಮ
**********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment