ಕವಿತೆ

 


ಮನದ ಒಳಗೆ ನೂರು ಕವಿತೆ ಕುಕ್ಕೀತೇನು 

ಹೊರಗೆ ಬಂದು ದುಃಖ ಏಕೋ ಉಕ್ಕೀತೇನು 

ಕಂಡ ಕನಸು ಮಸಣದ ಊರ ಸೇರಿತೇನು 

ಆಸೆ ಹೊತ್ತ ಮನವು ಚಿತೇಲಿ ಬೇಯಿತೇನು 


ಪದಗಳಿಗೆ ಸಿಗದ ಸುಂದರದ ಮುದ್ದು ಕವಿತೆ

ಪದಗಳಿಗೆ ಜೊತು ಬಿದ್ದ ನುಚ್ಚು ನೂರು ಕವಿತೆ

ಯಾರೋ ಕೇಳಿ ನಕ್ಕಂತೆ ನನ್ನ ಮನದ ಕವಿತೆ

ಹಾಳು ಬಾವಿಯಲ್ಲಿ ನೀರು ಹುಡುಕೋ ಕವಿತೆ 


ನೆನಪುಗಳ ಸಾಗರದಿ ಮನೆಯ ಮಾಡಿ

ಕಾಣದ ಊರಿನಲ್ಲಿ ಕನಸ ಕೆದರಿ ನೋಡಿ

ಕನಸು ನನಸು ಆಗಲಿಲ್ಲ ಯಾವ ರೂಡಿ 

ಎದೆಯಲಿ ಬೀರಿದ ಕವಿತೆಯ ಪ್ರೀತಿ ಮೋಡಿ 


ಬದುಕ ಹೊತ್ತ ದಾರಿಯಲಿ ಅರಳಲಿಲ್ಲ ಕವಿತೆ 

ಕೆಂಡದೋಕುಳಿಯಲಿ ಕೆಂಪಾಗಿ ಬೆಂದ ಕವಿತೆ

ಬೂದಿಯಾದರುನು ನೋವು ತೋರದ ಕವಿತೆ

ಗೊಬ್ಬರದಲ್ಲಿ ನಕ್ಕು ಹಸಿರು ಮೂಡಿಸಿದ ಕವಿತೆ 


**********ರಚನೆ**********

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple