ಶಿಶು ಗೀತೇ -7

  


ಅಪ್ಪನ ಕೂಗು

ಕಂದ ಎಂದು ಬಳಿಗೆ ಬಂದರೆ 

ಅಳುತ್ತಾ  ಕೂರುವೆ  ಏಕಮ್ಮ

ಅಪ್ಪನ ನೋಡಿ ದೂರ ಸರಿದು 

ತೆವಳಿ ಓಡುವೆ ಏಕೆ ಕಂದಮ್ಮ


ಅಮ್ಮನ ಕಂಡು ಕಣ್ಣನ್ನು ಅರಳಿಸಿ 

ನಗುತಾ ತಬ್ಬುವೆ ಚಿನ್ನಮ್ಮ 

ನಿನ್ನ ನಗುವ ನೋಡಿ ಅಪ್ಪಗೆ 

ತುಂಬಾ ಸಂತಸ ಮುದ್ದಮ್ಮ 


ಮುದ್ದು ಮಾಡಲು ಬಂದರೆ 

ನಿನಗೆ ಏನೋ ತೊಂದರೆ 

ಅಮ್ಮ ನಿನ್ನ ಕೂಗಿ ಕರೆದರೆ 

ಅದುವೇ ನಿನಗೆ ಸಂತಸದ ಹೊಸ ಧರೆ


ಅಪ್ಪನ ಕಂಡರೆ ಅಕ್ಕರೆ ಇಲ್ಲವೇ 

ಸಕ್ಕರೆ ಅಂತ ಸವಿ ನೀನೆ ಅಲ್ಲವೇ 

ಕಿರುಚುತ ನೀನು ಅಪ್ಪನ ಜಿಗುಟಲು 

ಅಪ್ಪನ ಮುಖವು ಏಕೋ ಮುರುಕಲು 


ಕಂದ ಎಂದು ಬಳಿಗೆ ಬಂದರೆ 

ಅಳುತ್ತಾ ಕೂರುವೆ ಏಕಮ್ಮ 

ಅಪ್ಪನ ನೋಡಿ ದೂರ ಸರಿದು 

ತೆವಳಿ ಓಡುವೆ  ಏಕೆ ಕಂದಮ್ಮ 


**********ರಚನೆ**********

ಡಾ. ಚಂದ್ರಶೇಖರ  ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಹೆತ್ತು ಹೊತ್ತ ತಾಯಿ

ಚುಟುಕು ಕವನ-35