ಶಿಶು ಗೀತೆ
ಚಂದಿರನ ತೋರುವೆ
ಅಂಗಳದ ಆ ಬನದಲ್ಲಿ
ತಿಂಗಳ ಹುಣ್ಣಿಮೆ ಬೆಳಕಲ್ಲಿ
ಚಂದಿರನಾ ತೊರುವೆ
ಬಾರೆ ನನ್ನ ಕಂದ
ನಿನ್ನ ಮೊಗದ ಚೆಲುವಿಗೆ
ಚಂದಿರನು ನಗುವನು
ನೋಡಿ ನಿನ್ನ ಅಂದ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಹಂಸದಂತೆ ನೀ ಬರಲು
ಭೂತಾಯಿ ಹಸಿರಲಿ ನಕ್ಕಾಳು
ತುಂಟ ನಗುವ ಬೀರಿ
ನೋಟ ನಿನ್ನ ಸೆಳೆಯಲು
ಕತ್ತಲ ರಾತ್ರಿ ದೂರ ಸರಿದಾಳು
ಮೂತಿ ಮೇಲೆ ಸಿಟ್ಟು
ಕೆನ್ನೆಯಲ್ಲಿ ಕೋಪ
ಹೇ..ಹೆ..ಎಂದು ನೀ ಚೀರಲು
ಉಲ್ಕೆ ಉರಿದು ಬಿದ್ದಾವು
ಮೆಲ್ಲನೆ ನೀ ಬಳಿ ಬಂದು
ಅಮ್ಮ ಅಮ್ಮ ಎನ್ನಲು
ನಕ್ಷತ್ರ ನೋಡಿ ನಿನ್ನ ನಕ್ಕಾವು
ಕುಡಿ ನೋಟ ಒಮ್ಮೆ ಬೀರಿ
ಅಪ್ಪ ಅಪ್ಪ ಎಂದು ಕೂಗಲು
ಬಿಳಿಯ ಮೋಡ ನೀಲಿಯಾದವು
ಅಂಗಳದ ಆ ಬನದಲ್ಲಿ
ತಿಂಗಳ ಹುಣ್ಣಿಮೆ ಬೆಳಕಲ್ಲಿ
ಚಂದಿರನಾ ತೊರುವೆ
ಬಾರೆ ನನ್ನ ಕಂದ
ನಿನ್ನ ಮೊಗದ ಚೆಲುವಿಗೆ
ಚಂದಿರನು ನಗುವನು
ನೋಡಿ ನಿನ್ನ ಅಂದ
*********ರಚನೆ********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment