Posts

ನೆನಪಿನ ಪಯಣ

Image
  ಮೌನದ ಮಾತುಗಳ ಪಯಣದ ಮೂಕ ನೆನಪು ಕಂಡ ಕನಸುಗಳ ಸವಿ ಪ್ರೀತಿಯ ಮರಣದ ನೆನಪು ಕಣ್ಣ ರೆಪ್ಪೆಯಲ್ಲಿ ಒಲವಿನ ಕಣ್ಣೀರ ಹನಿ ನೆನಪು ಗೆದ್ದು ಸೋತ ಬದುಕಿನ ನಗುವೆ ಕಾರಣ ಓ ನೆನಪು ನೂರೆಂಟು ಬಯಕೆಗಳ ಹದಿಹರೆಯದ ಸುಂದರ ನೆನಪು ಬಾಣವ ಬಿಟ್ಟಂತೆ ಮನಸ್ಸಿಗೆ ತಾಕಿದ ಸಿಹಿ ನೆನಪು ಒಡೆದ ತುಟಿಗಳ ಗೆರೆಗಳ ಮಾಸಿದ ಕಹಿ ನೆನಪು ಹೃದಯವ ಹಿರಿದು ಕೊಂದಂತೆ ಕಾಡುವ ಮೋಸದ ನೆನಪು ಸತ್ಯ ಮಿತ್ಯಗಳ ಸವಿ ಕನಸಿನ ಲೋಕದ ಸೃಷ್ಟಿಯ  ನೆನಪು ಬದುಕಿನ ಸಂಗತಿಯಲ್ಲಿ ಬಾಡಿದ ಮಲ್ಲಿಗೆಯ ನೆನಪು ಆಸೆಗಳ ಊರಿನಲ್ಲಿ ಮುಖ ತೋರಿ ನಿಂತ ನೆನಪು ಬೆನ್ನಿಗೆ ಚೂರಿ ಹಾಕದಿರು ಓ ಸುಂದರ ಜೊತೆಗಾತಿ  ನೆನಪು **********ರಚನೆ********* ಡಾ. ಚಂದ್ರಶೇಖರ್ ಸಿ.ಹೆ ಚ್

ಪ್ರೇಮೋತ್ಸವ

Image
  ಸಹ್ಯಾದ್ರಿ ನಿಸರ್ಗ ಕಂಡು  ಕುಣಿದಿದೆ ಇಂದು ಮನವು ಜೋಗದ ನದಿ ಜಿಗಿತ ಕಂಡು ಅರಳಿದೆ ಇಂದು ತನುವು ಹಸಿರು ಹರಿದ್ವರ್ಣ ಗಂಧದ ಗುಡಿ ಸಹಬಾಳ್ವೆಯ ನಿತ್ಯ ನುಡಿ ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ......... ಶಿಲ್ಪಗಳ ಇತಿಹಾಸ ಕಂಡು ಶೃಂಗೇರಿಯ ಶಾರದೆಗೆ ನಮಿಸಿ ದೈವಗಳ ನಾಡು ನುಡಿ ಕನ್ನಡದ ಸವಿಯ ನುಡಿ ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ......... ಜಾತಿ ನೀತಿಗಳ ಮೆಟ್ಟಿ ಹಿರಿಮೆ ಗರಿಮೆ ಕುಲವ ತಟ್ಟಿ ಲೋಕವೆಂಬ ಬೆಳಕಿನಲ್ಲಿ ಬದುಕು ಆಸೆ ಹಸಿರಿನಂತೆ ಚಿಗುರಿದೆ ಪ್ರಣಯವೆಂಬ ಜೀವನದಲ್ಲಿ ಹೃದಯ ನಕ್ಕು ನಲಿದಿದೆ ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ......... *********ರಚನೆ******* ಡಾ. ಚಂದ್ರಶೇಖರ್ ಸಿ.ಹೆಚ್

ಹನಿ ಮುತ್ತು

Image
  ಮೊದಲ ಹನಿಯೊಂದು ಮೈತಾಗಿ ಕನಸಾಗಿದೆ ಎದೆಯ ಹೊಳಗೊಂದು ಪ್ರೀತಿ ಮಿಂಚಾಗಿದೆ ಕಾಡುವ ಮಳೆರಾಯ ಸುರಿದು ಬೀಡು ನೀನು ಅತ್ತಿದೆ ಭೂಮಿಗೆ ಬೆಂಕಿ ನಂದಿಸಿ ಬೀಡು ನೀನು ಹಸಿರು ಸುಟ್ಟೂಗಿದೆ ಮರಗಳು ಮಾತಾಡಿವೆ ಪ್ರಾಣಿ ಹಕ್ಕಿ ಪಕ್ಷಿಗಳು ನಿನ್ನ ಕರೆದು ಕೂಗಿವೆ ನಿನ್ನ ಮುತ್ತಿನ ಹನಿಗೆ ಮನಸು ತಣ್ಣಗಾಯಿತು ನಿನ್ನ ನರ್ತನಕ್ಕೆ ಕಾದು ಉಸಿರೇ ಸಂಗಿತವಾಯಿತು ಸುರಿದು ಬೀಡು ನೀನು ಕಾಯಲಾರೆ ಇನ್ನೂ ಪ್ರಕೃತಿ ಹಸಿರಗಾಲಿ ಜೀವಸಂಕುಲ ನಿನ್ನ ನೆನೆಯಲಿ *********ರಚನೆ******** ಡಾ. ಚಂದ್ರಶೇಖರ್ ಸಿ. ಹೆಚ್

ಚುಟುಕು ಕವನ -25

Image
🌹🌹ಸೂರ್ಯ 🌹🌹 ನೋಡು ನೋಡು ಕೆಂಪನೆ ಸೂರ್ಯ ಸುಡಿತಿಹ ಬೆಂಕಿಯ ಸೆಲೆಯಂತೆ ಕ್ರೌರ್ಯ ನೀಲಿ ಆಗಸದಿ ದುಂಡು ಬೆಳಕಿನ ಶೌರ್ಯ ಇಬ್ಬನಿ ಹನಿಯೊಂದು ಕೆಣಕುವ ದೈರ್ಯ 🌹🌹 ಚಂದ್ರ 🌹🌹 ನೋಡು ಅಲ್ಲಿ ರಾತ್ರಿಯ ಬೆಳ್ಳನೆ ಚಂದ್ರ ಮೈತುಂಬಾ ಕಾಣುತಿದೆ ಕಪ್ಪನೆ ರಂದ್ರ ನೋಡುತ ಹೊರಟರೆ ಜೋತೆ ನಡೆವ ಇಂದ್ರ ಚಂದ್ರ ನೀನು ದುಂಡನೆ ಹೊಳಪಿನ ಸಾಂದ್ರ 🌹🌹ನಕ್ಷತ್ರ🌹🌹 ಆಕಾಶದಿ ಹಕ್ಕಿಗಳೆ ನೋಡಿ ನಕ್ಷತ್ರ ಬಿಳಿ ಬೆಳಕಿನ ಚುಕ್ಕಿಗಳಂತು ಬಲು ವಿಚಿತ್ರ ಬಿಡಿಸಲು ಹೊರಟಳು ಮಗಳು ಚಿತ್ರ ಚಿತ್ರವು ಹೇಳಿತು ಕಣ್ಣ ಕಂಬನಿ ಪತ್ರ *********ರಚನೆ*********** ಡಾ ಚಂದ್ರಶೇಖರ್. ಸಿ. ಹೆಚ್

ಕನಸುಗಳ ಪಿಸು ಮಾತು

Image
 Please subscribe my YouTube channel ನನ್ನ ಯು ಟ್ಯೂಬ್ ಚಾನಲ್  ಕನಸುಗಳ ಪಿಸು ಮಾತು Subscribe. ಮಾಡಿ 

ಪ್ರೇಮಯಾನ

Image
ಆಸೆಗಳ ಪಯಣಕೆ ಜೋತು ಬೀಳುವ ಅಲೆಮಾರಿಯು ನಾ ಕಾಣದ ಕನಸ್ಸಿಗೇ ನೋವು ಪಡುವ ಮೂಖ ಪ್ರೇಮಿ ನಾ ನಿನ್ನ ನೆನಪಲಿ ಕಾಲ ದೂಡುವ ಪ್ರೇಮಾ ಕೈದಿ ನಾ ಕಣ್ಣಾ ನೋಟಕೆ ಸೋತು ತಿರುಗಿದ ನಿನ್ನ ನಲ್ಲ ನಾ ಈ ಒಂಟಿಯಾನಾದೀ ಬದುಕೂ ಸವೆಸುವ ಮೌನದ ಮಾತು ನಾ ಕಣ್ಣಾ ನೋಟಕೆ  ಕರಗಿ ಹೋಗುವ  ಹನಿಯ ಮಂಜು ನಾ ***********ರಚನೆ********* ಡಾ. ಚಂದ್ರಶೇಖರ್ ಸಿ.ಹೆ ಚ್

🌹ಭಾವ ಗೀತೆ -71🌹

Image
🌹 ಅರಳಿತೆ ಯೌವ್ವನ 🌹 ಎಲ್ಲಿ ಹುಡುಕಲಿ ನಾ ಯೌವ್ವನ  ಹದಿಹರೇಯದಿ ದುಃಖ ದುಮ್ಮಾನ ಆಸೆಗಳ ಮಸಣದಿ ಬೆಂದು ಬರಡಾಗಿದೆ ಬದುಕು ನೊಂದು. //ಪಲ್ಲವಿ// ಕನಸುಗಳ ಸಂತೆಯಲ್ಲಿ ಸವಿ ನಿದ್ದೆ ನೆನಪುಗಳ ಚಿಂತೆಯಲ್ಲಿ ನಾ ಬಿದ್ದೆ ವಯಸ್ಸಿನ ತಳಮಳದಿ ಮೈ ಒದ್ದೆ ಹುಚ್ಚು ಮನಸ್ಸಿನ ಸಿಹಿ ಮುದ್ದೆ ಬೆಳಕಿನ ಕಿರಣದಿ ದೇಹ ಹೊಳಪು ಮಣ್ಣಿನ ಮಡಿಲಲ್ಲಿ ಮಾಗದ ಉರುಪು ಪುಸ್ತಕದ ಜ್ಞಾನ ಏಕೋ ನುಣುಪು ದೇವರೇ ಬರೆದಿಟ್ಟ ಶಿಕ್ಷೆಯ ಮುಡಿಪು ಮಾಡುವ ಕೆಲಸದಿ ಮನಸ್ಸಿಲ್ಲ ಶಾಲೆಯಲ್ಲಿ ಗೆಳತಿಯದೆ ಕನಸೆಲ್ಲ ಮನೆಯಲ್ಲಿ ಅಪ್ಪ ಅಮ್ಮ ಬೇಕಿಲ್ಲ ಯೌವ್ವನದ ಬಯಕೆಗೆ ಕೊನೆಯಿಲ್ಲ ಕಾಡಿದೆ ಇವರ ನೋಡಿ ದೆವ್ವಕ್ಕೂ ಭಯ ದೇವರು ಸೋತು ಹೋದ ನೋಡಿ ಇವರ ಲಯ ಚಂದ್ರನು ನಾಚುವನು ನೋಡಿ ಇವರ ನಯ ಮಾತಿನಲ್ಲಿ ವಯಸ್ಸು ಕಾಣದಂತೆ ಮಾಯ ********ರಚನೆ**********  ಡಾ. ಚಂದ್ರಶೇಖರ್ ಸಿ.ಹೆಚ್