🌹 ಎದ್ದು ಬಿದ್ದ ಕಂದಮ್ಮ 🌹 ಕಂದ ನಿನ್ನಯ ನಗುವು ಕಾಡಿತು ಯಾಕೋ ನನ್ನೆ ನಿನ್ನ ನೋಟ ಮನವ ಕಲಕಿತು ಹಾಗೆ ಸುಮ್ನೆ ಹೆಜ್ಜೆಯ ಮೇಲೆ ಹೆಜ್ಜೆ ಕುಣಿಯಿತು ನಿನ್ನ ಗೆಜ್ಜೆ ನಿನ್ನ ನಡುಗೆ ನೋಡಿ ಮನಕೆ ಆಯ್ತು ಮೋಡಿ ಎಡವಿ ಬಿದ್ದು ನೀನು ಗಾಯವು ಆಯಿತು ತುಟಿಗೆ ಅಮ್ಮ ಎಂದು ನೀನು ಕೂಗಿ ಕರೆದೆ ಕೊನೆಗೆ ಎಡವೇ ಬಿದ್ದರೂ ಛಲವ ಬಿಡೆ ಮತ್ತೆ ಎದ್ದು ಹಠವ ಮಾಡಿಹೆ ಪ್ರೀತಿಯಲ್ಲಿ ಅಮ್ಮ ಎಂದಿಹೆ ನೋವನ್ನು ನೀನು ಮರೆತು ಓಡಿಹೆ ಕಣ್ಣ ಹನಿಯು ಜಾರಿ ಬಿತ್ತು ಕೆನ್ನೆಯ ಮೇಲೆ ಕರಗಿತು ಮುದ್ದು ಮೊಗವು ನಗುತಲಿತ್ತು ತುಟಿಯ ಮೇಲಿನ ಗಾಯ ಕಾಣುತ್ತಿತ್ತು ಕಂದ ನಿನ್ನಯ ನಗುವು ಕಾಡಿತು ಯಾಕೋ ನನ್ನೆ ನಿನ್ನ ನೋಟ ಮನವ ಕಲಕಿತು ಹಾಗೆ ಸುಮ್ಮನೆ ********ರಚನೆ********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
🌹ತಾಯಿ🌹 ಹೆತ್ತವಳು ಹೊತ್ತವಳು ತಾಯಿ ಅಲ್ಲವೇ ಸಾಕಿ ಸಲುಹಿದವಳು ತಾಯಿ ಅಲ್ಲವೇ ಕರುಣೆಯ ಸಿಂದು ಬಂದು ತಾಯಿ ಅಲ್ಲವೇ ಜೀವಕೆ ಜೀವ ತೇಯ್ದವಳು ತಾಯಿ ಅಲ್ಲವೇ ನೋವಲು ನೀನು ಖುಷಿಯನ್ನು ಕೊಟ್ಟೆ ಹರಿದ ಬದುಕನ್ನು ನೀ ಜೋಡಿಸಿ ಬಿಟ್ಟೆ ತುಂಬಿದೆ ನೀನು ಅನ್ನದಿ ಖಾಲಿಯ ತಟ್ಟೆ ಪಾವನವಾಯಿತು ಈ ಹಸಿದ ಹೊಟ್ಟೆ ತಾಯಿ ಎನ್ನುವ ಪದವೇ ಅಮೃತ ನೀನು ನಮ್ಮ ಬೆಳಸಿದ ರೀತಿ ಅದ್ಬುತ ಬದುಕನ್ನು ಕಳೆವೆವು ನಾವು ನಿನ್ನ ನೆನೆಯುತ ಉಸಿರು ಮತ್ತು ಹೆಸರು ನಿನ್ನದೇ ಈ ಜೀವಿತ ***********ರಚನೆ*************** ಡಾ.ಚಂದ್ರಶೇಖರ್ ಸಿ. ಹೆಚ್
🌹ಹೃದಯ🌹 ಹೃದಯದೊಳಗೆ ನೂರು ಕವನ ಗೀಚಲೆನೆ ಸುಮ್ಮನೆ ಕನಸಿನೊಳಗೆ ಬಂದು ಬಿಡು ಹಾಗೆ ನೀನು ಮೆಲ್ಲನೆ ಮನಸು ಮನಸು ತಾಕಿದಾಗ ಪ್ರೀತಿಯಾಯ್ತು ಗಮ್ಮನೆ ನೀನು ನಾನು ಹಾಡುವಾಗ ಸಂಗೀತವಾಯ್ತು ಗಲ್ಲನೆ 🌹ಎದೆ🌹 ಎದೆಯ ಮೇಲೆ ನಿನ್ನ ಹಚ್ಚೆ ಕಾಡಿತೇಕೋ ಕೆನ್ನೆ ಮಚ್ಛೆ ಪ್ರೀತಿಯಲಿ ಮನಸು ಬಿಚ್ಚೆ ಓದುವೆ ನಾನು ಸ್ವರವನು ರಾಗ ಮಿಡಿದ ಒಲವನು 🌹ನಾಡಿ ಮಿಡಿತ 🌹 ಕಣ ಕಣದಲ್ಲೂ ನಾಡಿ ಮಿಡಿತ ನಿನ್ನ ಮೇಲೆ ನನ್ನ ಪ್ರೀತಿ ತುಡಿತ ಒಲವು ಒಂದು ಖುಷಿಯ ಹಿತ ನೀನು ತಾನೇ ನನಗೆ ಸ್ವಂತ ********ರಚನೆ ******** ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment