ನೆನಪಿನ ಪಯಣ
ಮೌನದ ಮಾತುಗಳ ಪಯಣದ ಮೂಕ ನೆನಪು
ಕಂಡ ಕನಸುಗಳ ಸವಿ ಪ್ರೀತಿಯ ಮರಣದ ನೆನಪು
ಕಣ್ಣ ರೆಪ್ಪೆಯಲ್ಲಿ ಒಲವಿನ ಕಣ್ಣೀರ ಹನಿ ನೆನಪು
ಗೆದ್ದು ಸೋತ ಬದುಕಿನ ನಗುವೆ ಕಾರಣ ಓ ನೆನಪು
ನೂರೆಂಟು ಬಯಕೆಗಳ ಹದಿಹರೆಯದ ಸುಂದರ ನೆನಪು
ಬಾಣವ ಬಿಟ್ಟಂತೆ ಮನಸ್ಸಿಗೆ ತಾಕಿದ ಸಿಹಿ ನೆನಪು
ಒಡೆದ ತುಟಿಗಳ ಗೆರೆಗಳ ಮಾಸಿದ ಕಹಿ ನೆನಪು
ಹೃದಯವ ಹಿರಿದು ಕೊಂದಂತೆ ಕಾಡುವ ಮೋಸದ ನೆನಪು
ಸತ್ಯ ಮಿತ್ಯಗಳ ಸವಿ ಕನಸಿನ ಲೋಕದ ಸೃಷ್ಟಿಯ ನೆನಪು
ಬದುಕಿನ ಸಂಗತಿಯಲ್ಲಿ ಬಾಡಿದ ಮಲ್ಲಿಗೆಯ ನೆನಪು
ಆಸೆಗಳ ಊರಿನಲ್ಲಿ ಮುಖ ತೋರಿ ನಿಂತ ನೆನಪು
ಬೆನ್ನಿಗೆ ಚೂರಿ ಹಾಕದಿರು ಓ ಸುಂದರ ಜೊತೆಗಾತಿ ನೆನಪು
**********ರಚನೆ*********
ಡಾ. ಚಂದ್ರಶೇಖರ್ ಸಿ.ಹೆ ಚ್
Comments
Post a Comment