ಪ್ರೇಮೋತ್ಸವ

ಸಹ್ಯಾದ್ರಿ ನಿಸರ್ಗ ಕಂಡು 

ಕುಣಿದಿದೆ ಇಂದು ಮನವು

ಜೋಗದ ನದಿ ಜಿಗಿತ ಕಂಡು

ಅರಳಿದೆ ಇಂದು ತನುವು

ಹಸಿರು ಹರಿದ್ವರ್ಣ ಗಂಧದ ಗುಡಿ

ಸಹಬಾಳ್ವೆಯ ನಿತ್ಯ ನುಡಿ

ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ.........

ಶಿಲ್ಪಗಳ ಇತಿಹಾಸ ಕಂಡು

ಶೃಂಗೇರಿಯ ಶಾರದೆಗೆ ನಮಿಸಿ

ದೈವಗಳ ನಾಡು ನುಡಿ

ಕನ್ನಡದ ಸವಿಯ ನುಡಿ

ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ.........

ಜಾತಿ ನೀತಿಗಳ ಮೆಟ್ಟಿ

ಹಿರಿಮೆ ಗರಿಮೆ ಕುಲವ ತಟ್ಟಿ

ಲೋಕವೆಂಬ ಬೆಳಕಿನಲ್ಲಿ

ಬದುಕು ಆಸೆ ಹಸಿರಿನಂತೆ ಚಿಗುರಿದೆ

ಪ್ರಣಯವೆಂಬ ಜೀವನದಲ್ಲಿ

ಹೃದಯ ನಕ್ಕು ನಲಿದಿದೆ

ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ.........

*********ರಚನೆ*******

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20