Posts

ಸ್ಮಶಾನದ ಹೆಣ

Image
  ದ್ವೇಷದ ಜ್ವಾಲೆಯ ಕಿಡಿ ಹೊತ್ತಿ ಉರಿದಿದೆ  ಹಸಿದ ಮನವೊಂದು ನೆತ್ತರು ಕುಡಿದಿದೆ  ಸ್ಮಶಾನದ ಹೆಣವೊಂದು ಬಾಯಿ ಬಿಟ್ಟಿದೆ ಸುಡುಗಾಡಿನಲಿ ಗೂಬೆ ಶಕುನ ನುಡಿದಿದೆ  ಕಾಣದ ಕೈಯೊಂದು ಪಾಪದ ಕೆಲಸ ಮಾಡಿದೆ  ಕುಂಟುವ ನೆನಪೊಂದು ಸುಳ್ಳು ನೆಪವ ಹೇಳಿದೆ  ಯಾರು ಬರೆದರು ವಿಧಿಯ ನಿಜವ ತಿಳಿಯದೆ  ಅತ್ತು ಕರೆದರು ಹೋದ ಜೀವ ಮತ್ತೇ ಬಾರದೆ ಬ್ರಹ್ಮ ನೀನು ಮಾಡಿದೆ ಕೊಲೆಯ ಪಾಪ  ಬರೆದ ಪದವು ಸುಡುತ್ತಾ ತೋರಿದೆ ಕೋಪ  ಅಕ್ಷರಗಳು ತೋರಿವೆ ದುಃಖದಿ ನರಕದ ಹಾದಿ  ಯಾರು ಕಾಯಬೇಕು  ಹೇಳು ಕಾಲದ ಬೇಧಿ  ಮಸಣದ ಊರಲಿ ಏಕೋ ಮೌನದ ಛಾಯೆ  ಕಾಡಿದೆ ಬಿಡದೆ ನಮ್ಮ ಸೂತಕದ ಮಾಯೆ  ಹೆಣದ ಮುಂದೆ ಬೆಳಕಿನ ದೀಪವ ಹಚ್ಚಿಹರು  ಕತ್ತಲೆ ಓಡಿಸಲು ಮೋಸದ ಪಣವ ತೊಟ್ಟಿಹರು  **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

21. A beautiful lady

Image
I will go and meet the girl  Day's will move rain comes  Playing in the mud water  Shirts are full of colour    *And you are my beautiful lady  You are my beautiful lady* Let the things were happening  Weekend moving slow  Going to the city town  With a type recorder radio  Can we sing wonderful song  Ta na Na na na na na It's just like that  La la lala lala la  It's difficult to find my way  Walking on the mighty highway  I find the another day  To grow up in morning day  The memory is my lord  I am thinking about always it  Finding love  In green grass  Behind the lovely stadium  Walking running hai hai Skipping jumping hey hey Moving in the morning fog Hearts is full with joy  Standing in the sunlight with laugh  Rainbow makes beautiful shine  Sleeping sliding la la All along the rainfall  ********Writer********  Dr. Chandrashekhar channapura halappa

20. I am walking

Image
I am walking on the road  The goal is not at all clear  I am walking on the sea shore  The sand is the bed for me  I am flying on the sky  The route is completely empty  My friends are flowing in the wind  The answer is I am flowing in the wind  How long the earth will exist  Before it's get turned into empty  How long life exist on earth  Before the human beings are buried  How long man can do drama  Pretending like he is there  How long man can fly  Without looking the sky  How long people burn hunger  Food will make them cry  How long death is the manifest  Please pray  death is ultimate **********Writer********  Dr.Chandrashekhar channapura halappa

ಓ ಗೋವಿಂದ

Image
  ಮೂರು ದಿನದ  ಬಾಳು  ಹೇಳುತ್ತಿದೆ ಕಣ್ಣೀರಿನ ಗೋಳು  ಬದುಕ ದಾರಿಯು ಬರಡು  ಆ ಬ್ರಹ್ಮನು ಏಕೋ ಕುರುಡು  ನಡೆಸೋ ದಾರಿ ತೋರಿ ನೀ ನಮ್ಮ ಗೋವಿಂದ //ಪಲ್ಲವಿ// ಬಾಳು ನೋವಿನ ಸಂತೆ  ಬದುಕು ತುಂಬಾ ಚಿಂತೆ/ ದಾರಿ ಕಾಣದೆ ಕೂತೆ ನಿನ್ನ ಜಪವ ಅರಿತೆ // ಕಾಯ್ದು ಕಾಪಾಡು ನೀ ನಮ್ಮ ಗೋವಿಂದ  ವಿಧಿಯ ನೋಡದೆ ಬರೆದ ಬ್ರಹ್ಮ  ಸುಟ್ಟನು ಚಿಂತೆಯಲ್ಲಿ ನಮ್ಮ/  ಜೀವನದಿ ಹಸಿರು ಚಿಗುರಲೆ ಇಲ್ಲ  ಬಿಸಿ ನೀರಲ್ಲಿ ಬೇಳೆ ಬೇಯಲೇ ಇಲ್ಲ// ಸಾಗಿಸು ಬಾಳ ಬಂಡಿ ನೀ ನಮ್ಮ ಗೋವಿಂದ  ಅನ್ನವ ತಿನ್ನುತ್ತ ಮನುಜ  ಮೋಸ ಮಾಡುತ ಸಹಜ/  ಆಡಿಹನು ಬದುಕಲ್ಲಿ ಆಟ  ಸಂಸಾರ ಗೋಳಿನ ಊಟ//  ದಾರಿ ಸೇರಿಸು  ನೀ ನಮ್ಮ ಗೋವಿಂದ  ಬದುಕಿನ ಪಯಣ ಕಷ್ಟ  ಸಂತಸ ಪಡಲು ಇಷ್ಟ / ಊರು ತುಂಬಾ ಜಾತ್ರೆ  ಹೊರಟರು ನಿನ್ನ ಯಾತ್ರೆ//  ಹೇಳು ಎದ್ದೇಳು ನೀ ನಮ್ಮ ಗೋವಿಂದ ***********ರಚನೆ*********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಯಾರಿಗೆ ಯಾರು ಇಲ್ಲ

Image
  ನೋವಿನ ಮಂದಿರದೀ ಸಂತಸದ  ಬೆಳಕು ಮೂಡಲೆ ಇಲ್ಲ  ಕತ್ತಲ ಕೋಣೆಯಲ್ಲಿ ಹಣತೆಯ ಕಿಡಿ  ಕೋಣೆಯ ಹೊತ್ತಿ ಉರಿಸಿತ್ತಲ್ಲ  ಅಜ್ಞಾನದ ಶಾಲೆಯಲ್ಲಿ ಜ್ಞಾನದ  ಚಿಲುಮೆ ಹುಟ್ಟಲೆ ಇಲ್ಲ  ಹಾಳು ಕೆರೆಯಲ್ಲಿ ಮಳೆ ನೀರು  ಸುಮ್ಮನೆ ನಿಲ್ಲಲೇ ಇಲ್ಲ  ವಿಧಿಯ ಆಟದಲ್ಲಿ ಮನೆಯು  ಸ್ಮಶಾನವಾಯಿತು ಯಾಕೆ  ಸಮುದ್ರದ ಅಲೆಯು ಸುನಾಮಿಯಾಗಿ  ದಡವ ತಾಗಿತು ಏಕೆ  ಒತ್ತಿದ ಬಾಳಿನಲ್ಲಿ ಪ್ರೇಮವು ಚಿಗುರಿ ಹೂವು ಬಿಡಲೇ ಇಲ್ಲ  ಸತ್ತ ಸಮಾಧಿಯಲ್ಲಿ ಅನ್ನದ ಕೂಳು  ಕಾಗೆಯು ತಿನ್ನಲೇ ಇಲ್ಲ  ಸ್ಮಶಾನದ ಬದುಕ ಗುಡಿಯಲ್ಲಿ  ಪೂಜಿಸಲು ದೇವರೆ ಇಲ್ಲ  ಮೂರು ದಿನದ ಈ ಬದುಕಿನಲ್ಲಿ  ಯಾರಿಗೆ ಯಾರು ಇಲ್ಲ  ***********ರಚನೆ************  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -54

Image
  ಮುದ್ದು ಬಂಗಾರಿ*  ನನ್ನ ಮುದ್ದು ಬಂಗಾರಿ  ಊದುವೇ ನಾನು ತುತ್ತೂರಿ  ನನ್ನ ಮಗಳು ಕಸ್ತೂರಿ  ಇವಳು ತುಂಬಾ ಹಟಮಾರಿ  ತಿನ್ನಲು ಅತ್ತು ಕರೆದಿಹಳು ಏಕೋ ರಂಪ ಮಾಡಿಹಳು  ಒದೆಯನ್ನು ಏಕೋ ತಿಂದಿಹಳು  ಕಣ್ಣೀರು ಹಾಕುತ್ತ ಕುಳಿತಿಹಳು  ಅಮ್ಮ ಗುಮ್ಮ ತೋರಿಹಳು  ಬಾಯಿಗೆ ಅನ್ನ ತುರುಕಿಹಳು  ಚಿನ್ನಾರಿ ಜಗಿದು ಉಗಿದಿಹಳು ಅಮ್ಮ ಎಂದು ಕರೆದಿಹಳು  ಇವಳು ತುಂಬಾ ಹೆಮ್ಮಾರಿ  ನನ್ನ ಮುದ್ದು ವಯ್ಯಾರಿ  ನೋಡಲು ಮಾತ್ರ ಸಿಂಗಾರಿ  ಇವಳೇ ನನ್ನ ಸಿಂಧೂರಿ ನೋಡಲು ಇವಳ ಬಿಂಕ  ನಾನು ಕಟ್ಟಬೇಕು ಸುಂಕ  ನುಡಿಸಬೇಕು ಇವಳಿಗೆ ಡಂಕ ನಾನು ತಾನೇ ಮನೇಲಿಮಂಕ ನನ್ನ ಮುದ್ದು ಬಂಗಾರಿ  ಊದುವೇ ನಾನು ತುತ್ತೂರಿ  ನನ್ನ ಮಗಳು ಕಸ್ತೂರಿ  ಇವಳು ತುಂಬಾ ಹಟಮಾರಿ  **********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಬದುಕು ಸುಡುತೈತೋ

Image
  ಮನದ ಒಳಗಿನ ಕಿಚ್ಚು ದೇಹ ಸುಡುತೈತೋ  ಬಿರಿದ ವಯಸ್ಸಿನ ಕಾವಿಗೆ ರಕ್ತ ಕುದಿತೈತೋ  ದ್ವೇಷ ಸುಡುವ ಕುದಿಗೆ ಮನಸ್ಸು ಬೆಂದೈತೋ  ಮಾತಿನ ಹಸಿ ವಿಷಕ್ಕೆ ಸಮಾಜ ಕುಣಿದೈತೋ  ನೋವಲಿ ಬೆಂದ ಬದುಕು ತಣ್ಣಗೆ ಆಗೈತೋ  ಶಾಂತಿ ಶಾಂತಿ ಎಂದು ನೆತ್ತರು ಬೇಡೈತೋ  ಕ್ರಾಂತಿಯ ಕಿಡಿಯ ಮನುಜ ಬೆಂಕಿ ಹತ್ತೈತೋ  ಸುಡುವ ಬೆಂಕಿಗೆ  ಧರ್ಮ ತುಪ್ಪ ಸುರಿದೈತೋ  ಭಾಷೆ ಭಾಷೆಗೆ ವೇಷ ಭೇದ  ಮಾಡೈತೋ  ಜಾತಿ ಜಾತಿ ತಾರತಮ್ಯ ರೋಷದ ಕಿಡಿ ಹಚ್ಚೈತೋ  ಕಪ್ಪು ಬಿಳಿ ಬಣ್ಣ ಏಕೋ, ಸುಕ್ಕು ಆಗೈತೋ  ಬೇಧ ಭಾವ ಮಾಡದೆ ರಕ್ತ ಹರಿದೈತೋ  ಹಸಿರು ಚಿಗುರದೆ ಬದುಕಲಿ ಹಸಿವು ನಲಿದೈತೋ  ತಿನ್ನಲು ಅನ್ನವು ಇಲ್ಲದೆ ದೇಹ ಬಿರಿದೈತೋ  ಪಾಪದ ಕರ್ಮ ಸುಡುತ ಪುಣ್ಯ ಎಲ್ಲೈತೋ ಮೋಹದ ಅಲೆಯ ಬಾಳು ಮಸಣ ಸೇರೈತೋ  **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ