ಖಾಲಿ ಪುಟದ ಹಾಳೆ

 


ಈ ಬಾಳು ಒಂದು ಖಾಲಿ ಪುಟದ ಹಾಳೆ 

ಗೀಚಬೇಕು ನಾವು ಕಲಿತು ಕಷ್ಟ ಸುಖದ ಶಾಲೆ 

ದಿನವ ದೂಕಬೇಕು ಕಲಿತು ಎಲ್ಲಾ ನಾಳೆ

ಕಲಿಯದಿದ್ದರೆ ಇಲ್ಲಿ ನಾಳೆ ಎಂಬುದು ಗೋಳೇ //ಪಲ್ಲವಿ//


ಬಾಳ ಬಂಡಿಯಲ್ಲಿ ಸಾಗಬೇಕು ನಾವು

ಚಕ್ರ ಮುರಿದು ಬಿದ್ರೆ ಬಂಡಿಗೆ ಬಂತು ಸಾವು

ಬಾಳ ನೋಗವ ಹೊತ್ತು ಸಾಗು ನೀ ಮುಂದೆ 

ಓದೆಯದಿರಲಿ ನಿನಗೆ ನೋವುಗಳು ಹಿಂದೆ


ಮೂರು ದಿನದ ಬದುಕು ನಗುತಾ ನೀ ಬಾಳು

ಗಂಡ ಗುಂಡಿ ರಥದ ತೇರು ಎಳೆಯದಿದ್ರೆ ಒಳು 

ಯಾಕೆ ಬೇಕು ನಮಗೆ ಜಿದ್ದಿನ ದ್ವೇಷ 

ಹಾಕಬೇಕೆ ನಾವು ನೀತಿಗೆಟ್ಟ  ವೇಷ 


ಜಾತಿ ವೈಶ್ಯಮ್ಯಕೆ ಹೊತ್ತಿ ಊರಿದಿದೆ ಊರು

ಅನ್ಯಾಯಾದ ಸಿಡಿಲ ಮಳೆಗೆ ಸೋರಿದೆ ಸೂರು

ಒಪ್ಪತ್ತಿನ ಊಟಕ್ಕೆ ಯಾರು  ತಾನೆ ಆಸರೆ 

ಗುಲಾಮಗಿರಿಗೆ ಇಲ್ಲಿ ನಮ್ಮ ಬಾಳು ಕೈಸೇರೆ


ಹರಿದ ಬಟ್ಟೆ ತೋರಿದೆ ಇಲ್ಲಿಯ ಬಡತನ 

ಕೆಲಸ ಒಂದೇ ಇಲ್ಲಿ ನಮ್ಮಯ ಸಿರಿತನ 

ಹಿಟ್ಟಿಗಾಗಿ ಇಲ್ಲಿ ಜೀವನವಾಯ್ತು ನರಕ

ಸತ್ತ ಮೇಲೆ  ಸಿಗುವುದೇ ನಮಗೇ ಸ್ವರ್ಗ 


ಪಾಪಪುಣ್ಯ ಲೆಕ್ಕ ಇಟ್ಟವರಾರು ಹೇಳು 

ಅಧರ್ಮವನ್ನು ಮೆಟ್ಟಿ ನಿಲುವುದೇ ಬಾಳು 

ಮೋಸದಿಂದ ಇಲ್ಲಿ ಕಟ್ಟಿದೆ ಉಸಿರ ಶ್ವಾಸ 

ಹೇಗೆ ಬೀರಲಿ ನಾನು ನಗುವ ಮಂದಹಾಸ 


**********ರಚನೆ*********

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ