ಬರಲಿಲ್ಲ ನನ್ನವ

 


ಮನದ ಮಡಿಲಲಿ ಜೋಗುಳ ಹಾಡಿದ್ದೇ

ನನ್ನಯ ಮನಸನ್ನು ಅವನಿಗೆ ನೀಡಿದ್ದೆ

ಪ್ರೀತಿಯ ಅಂಬಾರಿ ಕೊಂಡು ಬಂದಿದ್ದೆ 

ಏಳು ಹೆಜ್ಜೆ ಇಡಲು ನನ್ನವನ ಕರೆದಿದ್ದೆ 

ನೋಡಿಯೂ ನೋಡದೆ ಹೋದ ನನ್ನವ//ಪಲ್ಲವಿ//


ಯಾರನ್ನು ಕೇಳಲಿ ಸೆರಗನು ಹೊಡ್ಡಿ 

ಯಾರಿಗೆ ನೀಡಲಿ ಪ್ರೀತಿಯ ಬಡ್ಡಿ

ಹೃದಯದಿ ಅರಮನೆ ಅವನಿಂದ ಚೂರಾಯ್ತು 

ಕನಸಿನ ಗೋಪುರ ನುಚ್ಚು ನೂರಾಯ್ತು 

ಯಾರನ್ನು ಕೇಳಲಿ ನನ್ನವ ಎಲ್ಲೆಂದು 


ಕಾಲಲಿ ಸುತ್ತಿ ಮನೆ ದೇವರಿಗೆ ಬಂದಿದ್ದೆ 

ಕೈಯ ಮೇಲೆ ಬೆಂಕಿಯ ಕರ್ಪೂರ ಹಚ್ಚಿದೆ 

ಮಡಿಯಲ್ಲಿ ಬಂದು ಊರುಳು ಸೇವೆ ಮಾಡಿದ್ದೆ

ಹಣ್ಣು ಕಾಯಿ ಪಲ್ಲಾರ ನೈವೇದ್ಯ ಮಾಡಿದ್ದೆ

ಕರೆದು ತಾ ದೇವರೆ ನನ್ನವನ ಎಂದಿದೆ 


ಬಯಕೆಗಳು ಬತ್ತಿ  ಬರಡಾಯ್ತು 

ಆಸೆಗಳು ನಡು ನೀರಲ್ಲಿ ಮುಳುಗಾಯ್ತು

ಕಾದು ಕಾದು ಕೂದಲು ನೆರಗಾಯ್ತು 

ಕೆನ್ನೆಯ ಚರ್ಮ ಕುಂತಲ್ಲೇ ಸೂಕ್ಕಾಯ್ತು 

ಹೊರಟು ಹೋದವ  ನನ್ನವ ಬರಲಿಲ್ಲ 


ಸಾಯುವ ಮುಂಚೆನೆ ಗುಂಡಿ ತೊಡ್ಡಿದ್ದೆ 

ದಿನವನ್ನು ಅವನ ನೆನಪಲ್ಲಿ ನೂಕಿದ್ದೆ 

ಹಣೆಬರಹ ಗೀಚಿದ ಬ್ರಹ್ಮನ  ಶಪಿಸಿದ್ದೆ 

ಪ್ರೀತಿಯ ಕೂಡಿಟ್ಟು ಕಣ್ಣನ್ನು ಮುಚ್ಚಿದೆ

ಕೊನೆಗೂ ಬರಲಿಲ್ಲ ಕಾದರು ನನ್ನವ 


ಮನದ ಮಡಿಲಲಿ ಜೋಗುಳ ಹಾಡಿದ್ದೇ

ನನ್ನಯ ಮನಸನ್ನು ಅವನಿಗೆ ನೀಡಿದ್ದೆ

ಪ್ರೀತಿಯ ಅಂಬಾರಿ ಕೊಂಡು ಬಂದಿದ್ದೆ

ಏಳು ಹೆಜ್ಜೆ ಇಡಲು ನನ್ನವನ ಕರೆದಿದ್ದೆ 

ನೋಡಿಯೂ ನೋಡದೆ ಹೋದ ನನ್ನವ


**********ರಚನೆ********** 

ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ