ಮನವು ಸೋತಿತ್ತು
ಮನದ ಒಳಗೆ ನೋವು ಬಂದು ಮನೆಯ ಮಾಡಿತ್ತು
ಕಣ್ಣ ನೀರು ಕಂಬನಿಯಾಗಿ ನಿಲ್ಲದೆ ಧುಮುಕಿತ್ತು
ಕೆನ್ನೆ ಕೆಂಪಾಗಿ ಒಣಗಿದ ಹಾಗೆ ಸುಕ್ಕು ಕಟ್ಟಿತ್ತು
ಮುಖವು ಬಾಡಿದ ಬರಡು ಭೂಮಿಯಾಗಿತ್ತು
ಉಸಿರು ಸಿಕ್ಕ ದೇಹವು ವಿಲವಿಲ ಒದ್ದಾಡಿತ್ತು
ಸೊರಗಿದ ಮನಕ್ಕೆ ಬೆಳಕು ನೀಡಲು ದೇವರ ಬೇಡಿತ್ತು
ಕಣ್ಣು ಮುಚ್ಚಿದ ದೇವರು ಗಾಡೆ ಗೂಡೆ ಆಟವಾಡಿತ್ತು
ಯಾರದ ಗಾಳಕ್ಕೆ ಸಿಕ್ಕ ಮೀನಂತೆ ಜೀವ ನಲುಗಿತ್ತು
ಕಾಣದ ದಾರಿ ಹುಡುಕಿ ಹುಡುಕಿ ಜೀವ ನೊಂದಿತ್ತು
ಬಯಕೆಗಳು ನೂರು ಅಂತ್ಯದ ಸಾವಿನ ಕಥೆ ಹೇಳಿತ್ತು
ಜೀವ ಬೆದರಿ ಹೆದರಿ ಮೌನ ಮನೆ ಮಾಡಿತ್ತು
ಅಳಲು ಆಗದೆ ಬಳಲಿ ದೇಹ ಬೆಂದು ಕೂತಿತ್ತು
ಯಾರನ್ನು ಬೇಡಲಿ ಬದುಕಲು ಹೃದಯ ಕೇಳಿತ್ತು
ಮಾತು ಬಾರದ ಮನಸ್ಸು ಮೂಕನಾಗಿ ನಿಂತಿತ್ತು
ಕಂಡ ಕನಸುಗಳೆಲ್ಲ ಕೊಳೆತು ಸ್ಮಶಾನವಾಗಿತ್ತು
ನಿದ್ದೆಗೆಟ್ಟು ದೇಹ ಒದ್ದಾಡಿ ಸೋತು ಹೋಗಿತ್ತು
**********ರಚನೆ*********
ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment