ಎಲ್ಲಾ ನನ್ನದು
ಕಣ್ಣ ಪರದೆ ಮೇಲೆ
ಕಂಡ ಕನಸು ನನ್ನದು
ಮನದ ಭಾವದ ಒಳಗೆ
ಮೂಡಿದ ಗೀತೆ ನನ್ನದು
ಎದೆಯ ಗೂಡಿನಲ್ಲಿ ಹುಟ್ಟಿದ
ದೈವ ಭಕ್ತಿ ನನ್ನದು
ಆಚಾರ ವಿಚಾರಗಳು ತುಂಬಿದ
ನವ್ಯ ಭಾವ ನನ್ನದು
ಮೆದುಳಿನಲ್ಲಿ ಅವಿತು ಕೂತ
ಹೊಸ ಜ್ಞಾನದ ಸೆಲೆ ನನ್ನದು
ಕಣ್ಣಿನಿಂದ ಉಕ್ಕಿ ಬಂದ
ಹನಿ ನೀರು ನನ್ನದು
ಹೃದಯದಲ್ಲಿ ಮೊಳಕೆ ಒಡೆದ
ಮಧುರ ಪ್ರೀತಿ ನನ್ನದು
ಕೋಪ ತಾಪದಿಂದ ಮೂಡಿದ
ದ್ವೇಷ ರಹಿತ ತನುವು ನನ್ನದು
ಪ್ರೀತಿ ಸೆಲೇಯಲ್ಲಿ ಉಕ್ಕಿ
ಹರಿವ ಕೆಂಪು ರಕ್ತ ನನ್ನದು
ಭಾವದೊಳಗೆ ಒಡೆದು ಬಂದ
ಮಧುರ ಮಾತು ನನ್ನದು
ನಾಡು ನುಡಿಯ ಕಟ್ಟಲು
ಹೋರಾಟ ನನ್ನದು
ನನ್ನ ದೇಹ ನನ್ನ ಪ್ರಾಣ
ಎಲ್ಲಾ ನನ್ನದು ಎಲ್ಲಾ ನನ್ನದು
**********ರಚನೆ*********
ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment