ಬೆಳೆದು ಬಿಡು

 


ಅಕ್ಷರ ಬೀಜವ ಬಿತ್ತಿ ಬಿಡು 

ಬುದ್ಧಿಯ ಹಸಿರಾ ಬೆಳೆದು ಬಿಡು 

ಜ್ಞಾನದ ಬೆಳಕು ಹಚ್ಚಿ ಬಿಡು 

ಅಜ್ಞಾನದ ಕತ್ತಲೆ ತೆಗೆದು ಬಿಡು 


ದ್ವೇಷ ಅಸೂಯೆ ಮೂಟೆ ಕಟ್ಟಿ ಬಿಡು 

ಕನಸನು ಒಮ್ಮೆ ಕಂಡು ಬಿಡು 

ನನಸನು ಒಮ್ಮೆ ನೋಡಿ ಬಿಡು 

ಸಾಧನೆ ದಾರಿಯ ತುಳಿದು ಬಿಡು 


ತಿಳಿದವನೇ ಇಲ್ಲಿ ನಾಯಕನು 

ಅರಿಯದವನೆ ಇಲ್ಲಿ ಗುಲಾಮನು

ಅನ್ನವೇ ದೇವರು ಅಂದು ಬಿಡು 

ನೀರೇ ಸುರಪಾನ ಅರಿತು ಬಿಡು 


ಬಿದಿರಿನ ರೀತಿ ಬೆಳೆಯಲು ಆಗಲ್ಲ 

ಚಿನ್ನದ ಮೊಟ್ಟೆ ಕೋಳಿ ಇಡಲ್ಲ

ಇದ್ದರೂ ಕೋಟಿ ಹೋದರು ಕೋಟಿ ನಾನಲ್ಲ 

ಕೋಗಿಲೆ ಕೂಗಲು ವಸಂತ ಮಾಸ ಬಂದಿಲ್ಲ 


ನಾಲಕ್ಕು ಅಡಿಕೆಗೆ ಮಾನ ಹೋಯ್ತಲ್ಲ

ಕುಡಿಕೆ ಚಿನ್ನ ಕೊಟ್ಟರು ಮತ್ತೆ ಬರುವುದಿಲ್ಲ

ಯಾರಿಗೆ ಯಾರು ಇಲ್ಲಿ ಆಗಲ್ಲ 

ನಂಬಿ ಕೆಟ್ಟರೆ ಕಾಯುವವರು ಯಾರಿಲ್ಲ 


ಸವಿ ಸವಿ ನೆನಪು ಪಡೆದು ಬಿಡು 

ನೋವನ್ನು ನೀನು ಮರೆತು ಬಿಡು 

ಗೆಲುವಿನ ರುಚಿಯ ಕಂಡು ಬಿಡು 

ಮೂರು ದಿನದ ಬದುಕು ಬಾಳಿ ಬಿಡು 


**********ರಚನೆ********** 

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ