ದೇಹ ಬರಿದಾಯ್ತು
ಹೃದಯದ ಬನದಲ್ಲಿ ಸಸಿಯನ್ನು ನೆಟ್ಟಿದ್ದೆ
ಬೆಳೆಯಲು ರಕ್ತವನ್ನು ಸಸಿಗೆ ಸುರಿದಿದ್ದೆ
ಬೆಳೆದ ಸಸಿಯು ಮನಸಲ್ಲಿ ಹಣ್ಣಾಯ್ತು
ಅರಿಷಡ್ವರ್ಗಗಳು ಹಣ್ಣನ್ನು ತಿಂದಾಯ್ತು
ಆಸೆ ಆಕಾಂಕ್ಷೆಗಳ ಸಂತೋಷ ತಂದಾಯ್ತು
ಬೇಕು ಬೇಡಗಳ ದುಃಖ ತಗಲಾಯ್ತು
ಚಿಂತೆಯು ಮನಸ್ಸಿಗೆ ಮೆತ್ತಾಯ್ತು
ನೋವಲಿ ಬರೀ ದೇಹ ಜಡವಾಯ್ತು
ಅಂತೆ ಕಂತೆಗಳು ಬೇಸರ ತಂದಾಯ್ತು
ನಡೆವ ದಾರಿ ಏಕೋ ಮುಳ್ಳಾಯ್ತು
ಜೀವನದ ಹಾದಿಯಲ್ಲಿ ಎಲ್ಲಾ ತೊಡರಾಯ್ತು
ಹುಣ್ಣಿಮೆ ಚಂದ್ರನು ಬೆಳಗದೆ ಮುಳುಗಾಯ್ತು
ಖುಷಿ ಕನಸುಗಳು ನನಸಾಗದೆ ಸತ್ತಾಯ್ತು
ಚಿಂತೆಯ ಚಿತೆಯಲ್ಲಿ ಮನಸ್ಸು ಹೆಣವಾಯ್ತು
ಅತ್ತಿ ಉರಿದ ಬೆಂಕಿಗೆ ದೇಹ ಬರಿದಾಯ್ತು
ದೇಹದ ಅಸ್ತಿಯನ್ನು ಹರಿವ ನೀರಿಗೆ ಬಿಟ್ಟಾಯ್ತು
**********ರಚನೆ**********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment